ಫ್ಲೋರಿಡಾ: ಭಾರತ ಮತ್ತು ವೆಸ್ಟ್‌ಇಂಡೀಸ್(IND vs WI) ನಡುವಣ ಟಿ20 ಸರಣಿಯ ನಾಲ್ಕನೇ(West Indies vs India, 4th T20) ಪಂದ್ಯವು ಇಂದು (ಶನಿವಾರ) ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ(Lauderhill, Florida) ನಡೆಯಲಿದೆ. ಸರಣಿ ಸಮಬಲಗೊಳಿಸುವ ಗುರಿಯೊಂದಿಗೆ ಕಣಕ್ಕಿಳಿಯುವುದು ಭಾರತ ಯೋಜನೆಯಾಗಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8ಕ್ಕೆ ಆರಂಭವಾಗಲಿದೆ. ಆದರೆ ಹವಾಮಾನ ಇಲಾಖೆ ನೀಡಿದ ವರದಿಯ ಪ್ರಕಾರ(weather forecast) ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ.
ಹೇಗಿದೆ ಹವಾಮಾನ
ಭಾರತದಲ್ಲಿ ಈ ಪಂದ್ಯ ರಾತ್ರಿ ಪ್ರಸಾರಗೊಂಡರೂ ಅಮೆರಿಕಾದ ಫ್ಲೊರೀಡಾದಲ್ಲಿ ಇದು ಹಗಲು ಪಂದ್ಯವಾಗಿದೆ. ಶುಕ್ರವಾರವೇ ಇಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ಅಲ್ಲದೆ ಪಂದ್ಯ ನಡೆಯುವ ಲಾಡರ್‌ಹಿಲ್ ಪ್ರದೇಶದ ಸುತ್ತ ಮುತ್ತಲಿನ ಕೆಲ ನಗರದಲ್ಲಿ ಮಳೆಯಾಗಿದೆ. ಇದೀಗ ಈ ಪಂದ್ಯಕ್ಕೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಂದ್ಯ ಆರಂಭಗೊಳ್ಳುವ ಸಮಯದಲ್ಲಿ ಮಳೆಯಾಗಲಿದ್ದರೂ ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಅಧಿಕವಾಗಿದೆ ಎಂದು ತಿಳಿಸಿದೆ.
ಒಂದೊಮ್ಮೆ ಮಳೆ ಬಂದು ಪಂದ್ಯ ನಡೆಯದೇ ಹೋದರೆ ಭಾರತದ ಸರಣಿ ಗೆಲುವಿನ ಯೋಜನೆಗೆ ಹಿನ್ನಡೆಯಾಗಲಿದೆ. ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿ ಭಾನುವಾರ ನಡೆಯುವ ಅಂತಿಮ ಪಂದ್ಯದಲ್ಲಿಯೂ ಮೇಲುಗೈ ಸಾಧಿಸುವ ಮೂಲಕ ಸರಣಿ ಗೆಲುವು ಕಾಣುವುದು ಹಾರ್ದಿಕ್ ಪಾಂಡ್ಯ ಬಳಗದ ಯೋಜನೆಯಾಗಿತ್ತು. ಇದೀಗ ಈ ಪಂದ್ಯ ನಡೆಯದೇ ಹೋದರೆ ಅಂತಿಮ ಪಂದ್ಯ ಗೆದ್ದರೂ ಸರಣಿ 2-2 ಅಂತರದಿಂದ ಡ್ರಾಗೊಳ್ಳಲಿದೆ.
ಇದನ್ನೂ ಓದಿ IND vs WI: 4ನೇ ಟಿ20; ಹಾರ್ದಿಕ್ ಪಡೆಗೆ ಮಸ್ಟ್ ವಿನ್ ಗೇಮ್
ಪಿಚ್ ರಿಪೋರ್ಟ್
ಯುಎಸ್‌ಎಯ ಫ್ಲೋರಿಡಾದ(Florida) ಲೌಡರ್‌ಹಿಲ್(Lauderhill Cricket Stadium) ಪಿಚ್ ಹೆಚ್ಚಾಗಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಕ್ಕೆ ನೆರವು ನೀಡಲಿದೆ. ಇಲ್ಲಿ ಇದುವರೆಗೆ 14 ಟಿ20 ಪಂದ್ಯಗಳು ನಡೆದಿವೆ ಇದರಲ್ಲಿ 11 ಬಾರಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಜಯ ಸಾಧಿಸಿದೆ. ಕೇವಲ 2 ಪಂದ್ಯಗಳಲ್ಲಿ ಮಾತ್ರ ಚೇಸಿಂಗ್ ನಡೆಸಿದ ತಂಡ ಗೆದ್ದಿದೆ. ಒಂದು ಪಂದ್ಯ ರದ್ದುಗೊಂಡಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ನಡೆಸುವ ಸಾಧ್ಯತೆ ಅಧಿಕ.
As the #WIvIND T20I series action shifts to USA starting today ✈️
— BCCI (@BCCI) August 12, 2023
We asked #TeamIndia members about the first thing that comes to their mind when they hear USA 🇺🇲 👇 pic.twitter.com/thzlCevY3T
ಸಂಭಾವ್ಯ ತಂಡ
ವೆಸ್ಟ್ ಇಂಡೀಸ್: ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ರೋಸ್ಟನ್ ಚೇಸ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್, ಶೈಯ್ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್, ಒಶಾನೆ ಥಾಮಸ್.
ಭಾರತ: ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ),ಅಕ್ಷರ್ ಪಟೇಲ್, ತಿಲಕ್ ವರ್ಮ ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಆರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್