Site icon Vistara News

IND vs WI: ಟೆಸ್ಟ್​ ಕ್ರಿಕೆಟ್​ನಲ್ಲಿ ನೂತನ ಮೈಲುಗಲ್ಲು ತಲುಪಿದ ರೋಹಿತ್ ಶರ್ಮಾ

Rohit Sharma scored his 10th Test hundred

ಡೊಮಿನಿಕಾ: ಭಾರತ ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಅವರು ವೆಸ್ಟ್ ಇಂಡೀಸ್‌(IND vs WI) ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ. ಇದೇ ವೇಳೆ ಅವರು ತಮ್ಮ ಟೆಸ್ಟ್​ ಕ್ರಿಕೆಟ್​ ವೃತ್ತಿ ಜಿವನದಲ್ಲಿ 3,500 ರನ್​ ಪೂರ್ತಿಗೊಳಿಸಿದ ಸಾಧನೆ ಮಾಡಿದ್ದಾರೆ. ದ್ವಿತೀಯ ದಿನದಾಟವಾದ ಗುರುವಾರ 63 ರನ್‌ಗಳನ್ನು ಗಳಿಸುತ್ತಿದ್ದಂತೆ ರೋಹಿತ್​ ಈ ಮೈಲಿಗಲ್ಲು ತಲುಪಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 3500 ರನ್‌ಗಳನ್ನು ಗಳಿಸಿದ 20ನೇ ಭಾರತೀಯ ಬ್ಯಾಟರ್​ ಎಂಬ ಹಿರಿಮೆಗೂ ರೋಹಿತ್‌ ಶರ್ಮಾ ಪಾತ್ರರಾಗಿದ್ದಾರೆ.

ಸದ್ಯ 51 ಟೆಸ್ಟ್‌ ಪಂದ್ಯಗಳನ್ನು ಆಡಿರುವ ರೋಹಿತ್‌ ಶರ್ಮಾ 45ರ ಸರಾಸರಿಯಲ್ಲಿ 3540*ರನ್​ ಬಾರಿಸಿದ್ದಾರೆ. ಇದರಲ್ಲಿ 10 ಶತಕ ಮತ್ತು ಒಂದು ದ್ವೀಶತಕ ಸೇರಿದೆ. 14 ಅರ್ಧಶತಕ ಒಳಗೊಂಡಿದೆ. ರೋಹಿತ್​ ಅವರು ವಿಂಡೀಸ್​ ವಿರುದ್ಧವೇ 2013ರಲ್ಲಿ ಟೆಸ್ಟ್​ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಸಂಭ್ರಮಿಸಿದ್ದರು. ಇನ್ನು ವಿದೇಶಿ ನೆಲದಲ್ಲಿ ಆಡಿರುವ 25 ಟೆಸ್ಟ್ ಪಂದ್ಯಗಳಿಂದ 31ರ ಸರಾಸರಿಯಲ್ಲಿ 1350 ರನ್‌ಗಳನ್ನು ಗಳಿಸಿದ್ದಾರೆ.

ಮೊದಲ ದಿನದ ಅಂತ್ಯಕ್ಕೆ 80 ರನ್‌ ಗಳಿಸಿದ್ದಲ್ಲಿಂದ ದ್ವಿತೀಯ ದಿನದ ಆಟ ಮುಂದುವರಿಸಿದ ಭಾರತ ಉತ್ತಮ ಪ್ರದರ್ಶನವನ್ನೇ ತೋರಿತು. ಸದ್ಯ ಭಾರತ 312 ರನ್​ ಗಳಿಸಿ 162 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ವಿರಾಟ್​ ಕೊಹ್ಲಿ(Virat Kohli) (36*) ಮತ್ತು ಜೈಸ್ವಾಲ್(Yashasvi Jaiswal)​(143*) ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ IND vs WI: ಜತೆಯಾಟದಲ್ಲಿ ದಾಖಲೆ ಬರೆದ ರೋಹಿತ್​-ಜೈಸ್ವಾಲ್

ರೋಹಿತ್​ ಅವರು 221 ಎಸೆತ ಎದುರಿಸಿ 103 ರನ್​ ಬಾರಿಸಿ ಗಮನ ಸೆಳೆದರು. ಅವರ ಈ ಶತಕದ ಇನಿಂಗ್ಸ್​ನಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್​ ಸಿಡಿಯಿತು. ಹಲವು ಸರಣಿಗಳಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಅವರು ವಿಂಡೀಸ್​ ವಿರುದ್ಧ ಮತ್ತೆ ತಮ್ಮ ಹಳೆಯ ಬ್ಯಾಟಿಂಗ್​ ಫಾರ್ಮ್​ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಏಕದಿನ ವಿಶ್ವಕಪ್​ಗೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇರುವಾಗಲೇ ರೋಹಿತ್​ ಬ್ಯಾಟಿಂಗ್​ ಫಾರ್ಮ್​ ಕಂಡುಕೊಂಡದ್ದು ಟೀಮ್​ ಇಂಡಿಯಾದ ಆತ್ಮವಿಶ್ವಾಸ ಹೆಚ್ಚಿಸಿದೆ.

Exit mobile version