Site icon Vistara News

IND vs WI: ಕೆರಿಬಿಯನ್​ ನೆಲದಲ್ಲಿ ದಾಖಲೆಯ ಜತೆಯಾಟ ನಡೆಸಿದ ರೋಹಿತ್​-ಜೈಸ್ವಾಲ್​

partnership for India against West Indies in Tests

ರೊಸೇಯೂ (ಡೊಮಿನಿಕಾ): ರೋಹಿತ್​ ಶರ್ಮಾ(Rohit Sharma) ಮತ್ತು ಯಶಸ್ವಿ ಜೈಸ್ವಾಲ್(Yashasvi Jaiswal)​ ವೆಸ್ಟ್​ ಇಂಡೀಸ್​ನಲ್ಲಿ(IND vs WI) ದ್ವಿಶತಕದ ಜತೆಯಾಟ ನಡೆಸಿದ ಮೊದಲ ಭಾರತೀಯ ಆರಂಭಿಕ ಜೋಡಿ ಎಂದ ದಾಖಲೆ ಬರೆದಿದ್ದಾರೆ. 2006ರಲ್ಲಿ ವಾಸಿಂ ಜಾಫರ್​-ವಿರೇಂದ್ರ ಸೆಹವಾಗ್​ ಜೋಡಿ 159 ರನ್​ ಪೇರಿಸಿದ್ದು ಹಿಂದಿನ ಗರಿಷ್ಠ ಜತೆಯಾಟವಾಗಿತ್ತು. ಇದೀಗ ಈ ದಾಖಲೆ ಪತನಗೊಂಡಿದೆ.

ಮೊದಲ ದಿನದಾಟದಲ್ಲಿ ಎಚ್ಚರಿಕೆಯ ಬ್ಯಾಟಿಂಗ್​ ಮೂಲಕ ಭಾರತಕ್ಕೆ ದಿಟ್ಟ ಆರಂಭ ಒದಗಿಸಿದ್ದ ರೋಹಿತ್​-ಜೈಸ್ವಾಲ್​ ಕ್ರಮವಾಗಿ 30 ಮತ್ತು 40 ರನ್​ಗಳಿಂದ 2ನೇ ದಿನ ಇನಿಂಗ್ಸ್​ ಮುಂದುವರಿಸಿದರು. ದ್ವಿತೀಯ ದಿನದಾಟದಲ್ಲಿ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ ಈ ಜೋಡಿ ಶತಕ ಬಾರಿಸಿ ಸಂಭ್ರಮಿಸಿತು. ಜತೆಗೆ ಮೊದಲ ವಿಕೆಟ್​ಗೆ 229 ರನ್​ಗಳ ಜತೆಯಾಟ ನಡೆಸಿತು. ಈ ಮೂಲಕ ಏಷ್ಯಾದ ಹೊರಗೆ ಗರಿಷ್ಠ ಮೊತ್ತದ ಜತೆಯಾಟ ನಡೆಸಿದ ಮೊದಲ ಭಾರತೀಯ ಆರಂಭಿಕ ಜೋಡಿ ಎಂಬ ಹಿರಿಮೆಗೂ ಪಾತ್ರರಾದರು.

ಈ ಜೋಡಿಯನ್ನು ಬೇರ್ಪಡಿಸಲು ವಿಂಡೀಸ್​ ತಂಡ 8 ಬೌಲರ್​ಗಳನ್ನು ಕಣಕ್ಕಿಳಿಸಿತು. ಜೈಸ್ವಾಲ್​ 215 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿ ಟೆಸ್ಟ್​ಗೆ ಪದಾರ್ಪಣೆ ಮಾಡಿದರು. ರೋಹಿತ್​ ಶರ್ಮ 103 ರನ್​ ಗಳಿಸಿ ಔಟಾದರು. ಇದು ರೋಹಿತ್​ ಅವರ 10ನೇ ಟೆಸ್ಟ್​ ಶತವಾಗಿದೆ. 62 ರನ್​ ಗಳಿಸಿದ ವೇಳೆ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ 3500 ರನ್​ ಪೂರೈಸಿದ ದಾಖಲೆಯನ್ನು ಬರೆದರು. ಉಭಯ ಆಟಗಾರರ ಈ ಶತಕ ಸಾಹಸದಿಂದ ಭಾರತ ಮೊದಲ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ.

ಮೊದಲ ದಿನದ ಅಂತ್ಯಕ್ಕೆ 80 ರನ್‌ ಗಳಿಸಿದ್ದಲ್ಲಿಂದ ದ್ವಿತೀಯ ದಿನದ ಆಟ ಮುಂದುವರಿಸಿದ ಭಾರತ ಉತ್ತಮ ಪ್ರದರ್ಶನವನ್ನೇ ತೋರಿತು. ಸದ್ಯ ಭಾರತ 312 ರನ್​ ಗಳಿಸಿ 162 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ವಿರಾಟ್​ ಕೊಹ್ಲಿ (36*) ಮತ್ತು ಜೈಸ್ವಾಲ್​(143*) ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ IND vs WI: ಟೆಸ್ಟ್​ ಕ್ರಿಕೆಟ್​ನಲ್ಲಿ ನೂತನ ಮೈಲುಗಲ್ಲು ತಲುಪಿದ ರೋಹಿತ್ ಶರ್ಮಾ

ಸದ್ಯ 143 ರನ್​ ಗಳಿಸಿರುವ ಜೈಸ್ವಾಲ್​ ಬ್ಯಾಟಿಂಗ್​ ಕಾಯ್ದುಕೊಂಡಿದ್ದು. ಮೂರನೇ ದಿನ ತಮ್ಮ ಶತಕವನ್ನು ದ್ವೀಶತಕವಾನ್ನಾಗಿ ಪರಿವರ್ತಿಸುವ ಇರಾದೆಯಲ್ಲಿದ್ದಾರೆ. ಚೊಚ್ಚಲ ಅವಕಾಶದಲ್ಲೇ ಶತಕ ಬಾರಿಸಿದ ಅವರು ಟೀಮ್​ ಇಂಡಿಯಾದ ಭವಿಷ್ಯದ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ನೀಡಿದೆ. ಜೈಸ್ವಾಲ್ ಅವರು ಚೊಚ್ಚಲ ಟೆಸ್ಟ್​ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 17ನೇ ಆಟಗಾರ ಎನಿಸಿಕೊಂಡರು. ಹಾಗೆಯೇ ವಿದೇಶಿ ನೆಲದಲ್ಲಿ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಏಳನೇ ಭಾರತೀಯ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು.

Exit mobile version