Site icon Vistara News

IND vs WI: ಶುಭಮನ್​ ಗಿಲ್​ ಆರಂಭಿಕ ಸ್ಥಾನಕ್ಕೆ ಕುತ್ತು; ರೋಹಿತ್​ ಜತೆ ಇನಿಂಗ್ಸ್​ ಆರಂಭಿಸಲು ಸಜ್ಜಾದ ಯುವ ಆಟಗಾರ

Yashasvi Jaiswal

ಬ್ರಿಜ್​ಟೌನ್​(ಬಾರ್ಬಡಾಸ್​): ವೆಸ್ಟ್​ ಇಂಡೀಸ್​ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿ ಜುಲೈ 12ರಿಂದ ಆರಂಭವಾಗಲಿದೆ. ಈ ಮಹತ್ವದ ಸರಣಿಗೆ ಭಾರತ ತಂಡ ಭರ್ಜರಿ ಅಭ್ಯಾಸ ನಡೆಸಿದೆ. ಗುರುವಾರ ಟೀಮ್​ ಇಂಡಿಯಾ ಆಟಗಾರರು 2 ತಂಡಗಳ ರಚನೆ ಮಾಡಿ ಅಭ್ಯಾಸ ಪಂದ್ಯವನ್ನು ಆಡಿದ್ದಾರೆ. ಇಲ್ಲಿ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್(yashasvi jaiswal)​ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ರೋಹಿತ್(rohit sharma)​ ಜತೆಗೆ ಇನಿಂಗ್ಸ್​ ಆರಂಭಿಸಿದ ಅವರು ಉತ್ತಮ ಪ್ರದರ್ಶನ ತೋರುವ ಮೂಲಕ ಕೋಚ್​ ರಾಹುಲ್​ ದ್ರಾವಿಡ್​ ಅವರ ಗಮನಸೆಳೆದಿದ್ದಾರೆ.

ಜೈಸ್ವಾಲ್​ ಅವರು ರೋಹಿತ್​ ಜತೆ ಇನಿಂಗ್ಸ್​ ಆರಂಭಿಸಿದ್ದನ್ನು ಗಮನಿಸುವಾಗ ಈ ಹಿಂದೆ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ಶುಭಮನ್​ ಗಿಲ್​(shubman gill) ಅವರು ಈ ಸರಣಿಯಲ್ಲಿ ರೋಹಿತ್​ ಜತೆ ಭಾರತದ ಇನಿಂಗ್ಸ್​ ಆರಂಭಿಸುವುದು ಅನುಮಾನ ಎನ್ನಲಾಗಿದೆ. ಅವರು ಚೇತೇಶ್ವರ್​ ಪೂಜಾರ ಅವರಿಂದ ತೆರವುಗೊಂಡ ದ್ವಿತೀಯ ಸ್ಥಾನದಲ್ಲಿ ಬ್ಯಾಟ್​ ಬೀಸುವ ಸಾಧ್ಯತೆ ದಟ್ಟವಾಗಿದೆ.

ಈಗಾಗಲೇ ಬಿಸಿಸಿಐ ಕೂಡ ಓರ್ವ ಉತ್ತಮ ಎಡಗೈ ಆರಂಭಿಕ ಆಟಗಾರನ ಹುಡುಕಾಟದಲ್ಲಿತ್ತು. ಇದೀಗ ಈ ಸ್ಥಾನಕ್ಕೆ ಯುವ ಆಟಗಾರ ಜೈಸ್ವಾಲ್ ಅವರನ್ನು ಆಯ್ಕೆ ಮಾಡಿ ಅವರನ್ನು ಟೀಮ್​ ಇಂಡಿಯಾದಲ್ಲಿ ಬೆಳೆಸಲು ಬಿಸಿಸಿಐ ಮುಂದಾಗಿದೆ. ಇದೇ ಕಾರಣಕ್ಕೆ ಅವರನ್ನು ರೋಹಿತ್​ ಜತೆ ಅಭ್ಯಾಸ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿಸಿದಂತೆ ತೋರುತ್ತಿದೆ. ಕಳೆದ ಕೆಲವು ಸರಣಿಗಳಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ರೋಹಿತ್​ ಕೂಡ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಬ್ಯಾಟಿಂಗ್​ ಫಾರ್ಮ್​ಗೆ ಮರಳಿರುವ ಸೂಚನೆ ನೀಡಿದ್ದಾರೆ.

ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉ.ನಾ), ಕೆಎಸ್ ಭರತ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.

Exit mobile version