ಮುಂಬಯಿ: ವೆಸ್ಟ್ ಇಂಡೀಸ್(IND vs WI) ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ಟೀಮ್ ಇಂಡಿಯಾ ಆಟಗಾರರಾದ ಸೂರ್ಯಕುಮಾರ್ ಯಾದವ್,(suryakumar yadav) ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಸೇರಿ ಸರಣಿಯಲ್ಲಿ ಅವಕಾಶ ಪಡೆದ ಎಲ್ಲ ಆಟಗಾರರು ವಿಂಡೀಸ್ಗೆ ಪ್ರಯಾಣ ಬೆಳೆಸಿದ್ದಾರೆ.
ಈಗಾಗಲೇ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯ ಆಡುತ್ತಿದೆ. ಇದಾದ ಬಳಿಕ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು. ಶುಕ್ರವಾರ ವಿಂಡೀಸ್ ತಲುಪಿದ ಟೀಮ್ ಇಂಡಿಯಾ ಆಡಗಾರರು ಒಂದು ದಿನ ವಿಶ್ರಾಂತಿ ಪಡೆದು ಶನಿವಾರದಿಂದ ಅಭ್ಯಾಸ ಆರಂಭಿಸಲಿದ್ದಾರೆ. ಟೆಸ್ಟ್ ಆಡುತ್ತಿರುವ ಆಟಗಾರರು ಈ ಪಂದ್ಯ ಮುಗಿದ ಬಳಿಕ ಉಳಿದ ಆಟಗಾರರ ಕ್ಯಾಂಪ್ ಸೇರಲಿದ್ದಾರೆ.
ಏಕ ದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಯದೇವ್ ಉನಾದ್ಕತ್, ಮೊಹಮ್ಮದ್ ಶಮಿ. ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ಟಿ20 ಸರಣಿಗೆ ಭಾರತ ತಂಡ: ಇಶಾನ್ ಕಿಶನ್, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ಅಕ್ಷರ್ ಪಟೇಲ್, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ರವಿ ಬಿಷ್ಟೋಯಿ, ಆರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಆವೇಶ್ ಖಾನ್, ಮುಖೇಶ್ ಕುಮಾರ್.
ಇದನ್ನೂ ಓದಿ ವಿಸ್ತಾರ ಸಂಪಾದಕೀಯ : ವಿಶ್ವಕಪ್ಗೆ ವೆಸ್ಟ್ ಇಂಡೀಸ್ ತಂಡ ಅರ್ಹತೆಯನ್ನೇ ಪಡೆಯದಿರುವುದು ಕ್ರಿಕೆಟ್ ದುರಂತ
Blessings from my family and wishes from my friends 🙏❤️ Ready for life’s next chapter 🇮🇳 pic.twitter.com/e7NXnTG4Li
— Tilak Varma (@TilakV9) July 20, 2023
ವೇಳಾಪಟ್ಟಿ
ಮೊದಲ ಟಿ20 ಪಂದ್ಯ ಆಗಸ್ಟ್ 3, ಸ್ಥಳ: ಟ್ರಿನಿಡಾಡ್
ದ್ವಿತೀಯ ಟಿ20 ಪಂದ್ಯ ಆಗಸ್ಟ್ 6, ಸ್ಥಳ: ಗಯಾನಾ
ಮೂರನೇ ಟಿ20 ಪಂದ್ಯ ಆಗಸ್ಟ್ 8, ಸ್ಥಳ: ಗಯಾನಾ
ನಾಲ್ಕನೇ ಟಿ20 ಪಂದ್ಯ ಆಗಸ್ಟ್ 12, ಸ್ಥಳ: ಫ್ಲೋರಿಡಾ
5ನೇ ಟಿ20 ಪಂದ್ಯ ಆಗಸ್ಟ್ 13, ಸ್ಥಳ: ಫ್ಲೋರಿಡಾ