Site icon Vistara News

IND vs WI T20: ಸೋಲಿಗೆ ಕಾರಣ ತಿಳಿಸಿದ ನಾಯಕ ಹಾರ್ದಿಕ್​ ಪಾಂಡ್ಯ

Hardik Pandya

ಟ್ರಿನಿಡಾಡ್: ಗುರುವಾರ ರಾತ್ರಿ ನಡೆದ ವೆಸ್ಟ್​ ಇಂಡೀಸ್(IND vs WI T20)​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಕೇವಲ ನಾಲ್ಕು ರನ್​ ಅಂತರದಿಂದ ಸೋಲು ಕಂಡಿದೆ. ತಂಡದ ಸೋಲಿಗೆ ನಾಯಕ ಹಾರ್ದಿಕ್​(Hardik Pandya) ಪಾಂಡ್ಯ ಪ್ರಮುಖ ಕಾರಣವನ್ನು ತಿಳಿಸಿದ್ದಾರೆ.

ಬ್ರಿಯಾನ್​ ಲಾರ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ನಿಕೋಲಾಸ್‌ ಪೂರಣ್‌(41) ಮತ್ತು ನಾಯಕ ರೋಮನ್‌ ಪೊವೆಲ್‌(48) ಅವರ ತಾಳ್ಮೆಯುತ ಆಟದಿಂದಾಗಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟಿಗೆ 149 ರನ್​ ಬಾರಿಸಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ನಾಟಕೀಯ ಕುಸಿತ ಕಂಡು ತನ್ನ ಪಾಲಿನ ಆಟದಲ್ಲಿ 9 ವಿಕೆಟ್​ ಕಳೆದುಕೊಂಡು 145 ರನ್​ ಗಳಿಸಿ ಸನ್ಣ ಅಂತರದಿಂದ ಸೋಲು ಕಂಡಿತು.

ಸೋಲಿನ ಬಳಿಕ ಮಾತನಾಡಿದ ನಾಯಕ ಹಾರ್ದಿಕ್​ ಪಾಂಡ್ಯ, ನಮ್ಮ ಬೌಲಿಂಗ್​ ವಿಭಾಗ ಉತ್ತಮವಾದ ಪ್ರದರ್ಶನ ತೋರಿದೆ. ಆದರೆ ಬ್ಯಾಟಿಂಗ್​ನಲ್ಲಿ ವಿಫಲವಾದೆವು. ಸತತ ವಿಕೆಟ್‌ಗಳನ್ನು ಕಳೆದುಕೊಂಡಾಗ ರನ್‌ ಚೇಸ್‌ ಮಾಡುವುದು ಕಷ್ಟವಾಗುತ್ತದೆ. ಒಟ್ಟಾರೆ ಸೋಲಿಗೆ ಬ್ಯಾಟಿಂಗ್​ ವೈಫಲ್ಯವೇ ಕಾರಣ. ಒಂದು ಸೋಲಿನಿಂದ ತಂಡದ ಸಾಮರ್ಥ್ಯವನ್ನು ಅಳೆಯುವುದು ಸರಿಯಲ್ಲ. ಇನ್ನೂ ಕೂಡ ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ ಇದರಲ್ಲಿ ತಪ್ಪನ್ನು ಸರಿಪಡಿಸಿ ಗೆಲುವಿನ ಹಳಿ ಏರುವ ವಿಶ್ವಾಸ ನಮ್ಮ ತಂಡಕ್ಕಿದೆ ಎಂದು ಪಾಂಡ್ಯ ಹೇಳಿದರು.

ಇದನ್ನೂ ಓದಿ ind vs wi : ಮೊದಲ ಟಿ20 ಪಂದ್ಯದಲ್ಲಿ ವಿಂಡೀಸ್​ ವಿರುದ್ಧ ಭಾರತ ತಂಡಕ್ಕೆ ಸೋಲು

ಮೂರು ಸ್ಪಿನ್ನರ್​ಗಳನ್ನು ಆಡಿದ ಬಗ್ಗೆ ಸ್ಪಷ್ಟನೆ ನೀಡಿದ ಪಾಂಡ್ಯ, ಇಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಾವು ನಮ್ಮ ಬೌಲಿಂಗ್‌ ಸಂಯೋಜನೆ ಆಯ್ಕೆ ಮಾಡಿಕೊಂಡೆವು. ಕುಲ್​ದೀಪ್​ ಯಾದವ್ ಮತ್ತು ಯಜುವೇಂದ್ರ ಚಹಲ್ ಜೋಡಿ ಹಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡದ ಯಶಸ್ಸಿಗೆ ಕಾರಣರಾಗಿದ್ದಾರೆ. ಹೀಗಾಗಿ ಅವರನ್ನು ಒಟ್ಟಿಗೆ ಆಡಿಸಬೇಕು ಎಂಬುದು ನಮ್ಮ ನಿಲುವಾಗಿತ್ತು. ಅಕ್ಷರ್‌ ಅವರನ್ನು ಆಲ್​ರೌಂಡರ್​ ಕೋಟದಲ್ಲಿ ಆಡಿಸಲಾಯಿತು. ಅವರು ಕೂಡ ಸ್ಪಿನ್ನರ್​ ಆದ ಕಾರಣ ತಂಡದಲ್ಲಿ ಮೂರು ಸ್ಪಿನ್ನರ್​ಗಳು ಕಾಣಿಸಿಕೊಂಡರು ಎಂದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ದ್ವಿತೀಯ ಟಿ20 ಪಂದ್ಯ ಆಗಸ್ಟ್​ 6 ಭಾನುವಾಋ ನಡೆಯಲಿದೆ.

Exit mobile version