Site icon Vistara News

IND vs WI T20: ಭಾರತ-ವಿಂಡೀಸ್​ ಮೊದಲ ಟಿ20; ಹವಾಮಾನ ಇಲಾಖೆಯ ಮುನ್ಸೂಚನೆ ಏನಿದೆ?

Brian Lara Stadium, Tarouba, Trinidad

ಟ್ರಿನಿಡಾಡ್​: ಭಾರತ ಮತ್ತು ವೆಸ್ಟ್​ ಇಂಡೀಸ್(IND vs WI T20)​ ವಿರುದ್ಧದ ಮೊದಲ ಟಿ20 ಪಂದ್ಯ ಇಂದು(ಗುರುವಾರ) ನಡೆಯಲಿದೆ. ಈ ಪಂದ್ಯಕ್ಕೆ ಮಳೆಯ ಕಾಟ ಇರಲಿದೆ(weather conditions) ಎಂದು ಹವಾಮಾನ ಇಲಾಖೆ ತಿಳಿಸಿದೆ. ಬುಧವಾರದ ವರದಿಯಲ್ಲಿ ಮಳೆ ಸಾಧ್ಯತೆ ಕಡಿಮೆ ಎನ್ನಲಾಗಿತ್ತು. ಆದರೆ ಗುರುವಾರ ಬೆಳಗಿನಿಂದಲೇ ಇಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಹೀಗಾಗಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ತಾರೌಬಾದಲ್ಲಿ(Tarouba Weather Forecast) ಹವಾಮಾನ ಏರಿಳಿತಗಳು ಕಂಡು ಬರಲಿದ್ದು ಶೇ. 40 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಮತ್ತು ಅಂದಾಜು 1.00 ಮಿಮೀ ಮಳೆಯಾಗುವ ನಿರೀಕ್ಷೆಯಿದೆ. ಮಳೆಯಿಂದ ಪಂದ್ಯವು ರದ್ದಾಗುವ ಸಾಧ್ಯತೆಯೂ ಇದೆ. ಸುಮಾರು 22 ಕಿಮೀ/ಗಂಟೆ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಟರೂಬದ (ಟ್ರಿನಿಡಾಡ್‌ ಆ್ಯಂಡ್‌ ಟೊಬೆಗೊ) ಬ್ರಿಯಾನ್‌ ಲಾರಾ ಸ್ಟೇಡಿಯಂನಲ್ಲಿ 4 ಟಿ20 ಪಂದ್ಯಗಳು ನಡೆದಿದೆ. ಇದರಲ್ಲಿ ಮೂರು ಪಂದ್ಯಗಳು ಚೇಸಿಂಗ್​ ನಡೆಸಿದ ತಂಡಗಳು ಗೆದ್ದಿವೆ. ಕೇವಲ ಒಂದು ಪಂದ್ಯ ಮಾತ್ರ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಅಧಿಕ. ಮೊದಲು ಇನಿಂಗ್ಸ್​ನಲ್ಲಿ ಇಲ್ಲಿ 145 ರನ್​ ಎವರೇಜ್​ ಮೊತ್ತವಾಗಿದೆ. ಇಲ್ಲಿ ಅತ್ಯಧಿಕ ಮೊತ್ತ ಪೇರಿಸಿದ ದಾಖಲೆ ಭಾರತ ತಂಡದ ಹೆಸರಿನಲ್ಲಿದೆ. ಭಾರತ 190 ರನ್​ ಬಾರಿಸಿತ್ತು. ಬೌಲಿಂಗ್​ ಸ್ನೇಹಿ ಇದಾಗಿದೆ.

ಇದನ್ನೂ ಓದಿ IND vs WI 1st T20: ವಿಂಡೀಸ್​ ವಿರುದ್ಧ ಮೊದಲ ಟಿ20; ಐಪಿಎಲ್​ ಸ್ಟಾರ್​ಗಳಿಗೆ ಅಗ್ನಿಪರೀಕ್ಷೆ

ತಂಡಗಳು

ಭಾರತ: ಇಶಾನ್​ ಕಿಶನ್​, ಶುಭಮನ್​ ಗಿಲ್​, ಯಶಸ್ವಿ ಜೈಸ್ವಾಲ್​, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​​ ಪಾಂಡ್ಯ(ನಾಯಕ),ಸಂಜು ಸ್ಯಾಮ್ಸನ್, ಯಜುವೇಂದ್ರ ಚಹಲ್​, ಕುಲ್​ದೀಪ್​ ಯಾದವ್​, ಆರ್ಶ್​ದೀಪ್​ ಸಿಂಗ್​, ಉಮ್ರಾನ್​ ಮಲಿಕ್​, ಮುಖೇಶ್​ ಕುಮಾರ್​.

ವೆಸ್ಟ್​ ಇಂಡೀಸ್​: ರೋವ್ಮನ್ ಪೊವೆಲ್‌ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ರೋಸ್ಟನ್ ಚೇಸ್, ಶಿಮ್ರೋನ್ ಹೆಟ್​ಮೇರ್​, ಜೇಸನ್ ಹೋಲ್ಡರ್, ಶೈಯ್​ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್​, ಒಶಾನೆ ಥಾಮಸ್.

Exit mobile version