ಗಯಾನಾ: ವೆಸ್ಟ್ ಇಂಡೀಸ್(IND vs WI T20) ವಿರುದ್ಧದ ಟಿ20 ಸರಣಿಯಲ್ಲಿ ಸತತ ಎರಡು ಸೋಲು ಕಂಡ ಟೀಮ್ ಇಂಡಿಯಾ ಕೆಟ್ಟ ದಾಖಲೆಯೊಂದನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಭಾನುವಾರ ನಡೆದ ದ್ವಿತೀಯ ಪಂದ್ಯದಲ್ಲಿ ಭಾರತ 2 ವಿಕೆಟ್ಗಳ ಸೋಲು ಕಾಣುವ ಮೂಲಕ ಈ ಅನಗತ್ಯ ದಾಖಲೆಯನ್ನು ಬರೆದಿದೆ.
ವೆಸ್ಟ್ ಇಂಡೀಸ್ ವಿರುದ್ಧ ಅತ್ಯಧಿಕ ಸೋಲು ಕಂಡ ಏಷ್ಯಾದ ತಂಡಗಳಲ್ಲಿ ಭಾರತ ತಂಡ ಬಾಂಗ್ಲಾದೇಶ ಜತೆ ಜಂಟಿ ಅಗ್ರಸ್ಥಾನ ಪಡೆದಿದೆ. ಉಭಯ ತಂಡಗಳು ವಿಂಡೀಸ್ ವಿರುದ್ಧ ಒಟ್ಟು 9 ಪಂದ್ಯಗಳಲ್ಲಿ(india vs west indies t20 head to head) ಸೋಲು ಕಂಡಿದೆ. ಮೂರನೇ ಪಂದ್ಯದಲ್ಲಿ ಭಾರತ ಗೆಲ್ಲದೇ ಹೋದರೆ ಸರಣಿ ಸೋಲು ಕಾಣಬೇಕಾಗುತ್ತದೆ. ಜತೆಗೆ ವಿಂಡೀಸ್ ವಿರುದ್ಧ ಅತ್ಯಧಿಕ ಸೋಲು ಕಂಡ ತಂಡ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳಬೇಕಿದೆ. ಆಗ ಬಾಂಗ್ಲಾ ಈ ಅವಮಾನದಿಂದ ದ್ವಿತೀಯ ಸ್ಥಾನಕ್ಕೆ ಕುಸಿಯಲಿದೆ. ವಿಶ್ವ ಕ್ರಿಕೆಟ್ನಲ್ಲಿ ವಿಂಡೀಸ್ ವಿರುದ್ಧ ಅತ್ಯಧಿಕ ಸೋಲು ಕಂಡ ದಾಖಲೆ ಇಂಗ್ಲೆಂಡ್ ತಂಡದ ಹಸೆರಿನಲ್ಲಿದೆ. ಇಂಗ್ಲೆಂಡ್ ಇದುವರೆಗೆ 24 ಟಿ20 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ 14 ಪಂದ್ಯಗಳಲ್ಲಿ ಸೋತಿದೆ. 19 ಪಂದ್ಯಗಳನ್ನಾಡಿ 19 ಸೋಲು ಕಂಡಿರುವ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ.
ಏಳನೇ ಸರಣಿ ವಶಪಡಿಸುವ ಹಾದಿ ಕಠಿಣ
ಭಾರತ-ವಿಂಡೀಸ್ ಈವರೆಗೆ 8 ಟಿ20 ಸರಣಿಗಳನ್ನಾಡಿವೆ. ಈ ಪೈಕಿ ಭಾರತ 6ರಲ್ಲಿ ಗೆದ್ದಿದ್ದು, 2 ಸರಣಿಯನ್ನು ವಿಂಡೀಸ್ ಕೈವಶಪಡಿಸಿಕೊಂಡಿತ್ತು. ಉಭಯ ತಂಡಗಳ ಕೊನೆ 5 ಸರಣಿಗಳಲ್ಲೂ ಭಾರತ ಗೆದ್ದಿದೆ. 2017ರಲ್ಲಿ ಕೊನೆ ಬಾರಿ ವಿಂಡೀಸ್ ಸರಣಿ ಜಯಿಸಿದೆ. 7ನೇ ಸರಣಿ ಜಯದ ಯೋಜನೆಯಲ್ಲಿದ್ದ ಭಾರತದ ಹಾದಿ ಸದ್ಯ ಸಂಕಷ್ಟಕ್ಕೆ ಸಿಲುಕಿದೆ. ಆಡಿದ ಮೊದಲೆರಡು ಪಂದ್ಯಗಳನ್ನು ಸೋತಿರುವುದು ಇದಕ್ಕೆ ಕಾರಣ. ಸದ್ಯ ಹಾರ್ದಿಕ್(hardik pandya) ಪಡೆಯ ಪ್ರದರ್ಶನ ನೋಡುವಾಗ ಸರಣಿ ಗೆಲ್ಲುವುದು ಕಷ್ಟಕರ ಎನ್ನುವಂತಿದೆ. ಐಪಿಎಲ್ನಲ್ಲಿ ತೋರಿದ ಪ್ರತಾಪ ಇಲ್ಲಿ ಕಾಣಿಸುತ್ತಿಲ್ಲ. ಒಂದೆರಡು ಆಟಗಾರರು ಬಿಟ್ಟರೆ ಉಳಿದೆಲ್ಲರು ಒಂದಕಿಗೆ ಸೀಮಿತರಾಗುತ್ತಿದ್ದಾರೆ.
ಇದನ್ನೂ ಓದಿ ind vs wi : ವೆಸ್ಟ್ ಇಂಡೀಸ್ ವಿರುದ್ಧದ ಟಿ20ಯಲ್ಲಿ ಭಾರತ ತಂಡಕ್ಕೆ ಸತತ ಎರಡನೇ ಸೋಲು
ಸದ್ಯ ಭಾರತ ಪರ ಯುವ ಆಟಗಾರ ತಿಲಕ್ ವರ್ಮಾ(tilak varma) ಅವರು ಮಾತ್ರ ಏಕಾಂಗಿ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 39 ರನ್ ಗಳಿಸಿದ್ದ ಅವರು ದ್ವಿತೀಯ ಪಂದ್ಯದಲ್ಲಿ 51 ರನ್ ಬಾರಿಸಿ ಭಾರತ ತಂಡದ ನೆರವಿಗೆ ನಿಂತಿದ್ದರು. ಒಂದೊಮ್ಮೆ ಅವರು ಕೂಡ ಅಗ್ಗಕ್ಕೆ ಔಟಾಗುತ್ತಿದ್ದರೆ ತಂಡದ ಮೊತ್ತ 100ಗಡಿ ದಾಡುವುದು ಕೂಡ ಅನುಮಾನ ಎನ್ನುವಂತಿತ್ತು. ಆದರೆ ಬೌಲಿಂಗ್ನಲ್ಲಿ ಯಾವುದೇ ಲೋಪವಿಲ್ಲ.