ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್(IND vs WI) ವಿರುದ್ಧದ ದ್ವಿತೀಯ ಟೆಸ್ಟ್(West Indies vs India, 2nd Test) ಪಂದ್ಯದಲ್ಲಿ ಭಾರತ ತಂಡ ಒಂದು ಬದಲಾವಣೆ ಮಾಡಿದೆ. ಶಾರ್ದೂಲ್ ಠಾಕೂರ್(shardul thakur) ಅವರನ್ನು ಕೈಬಿಟ್ಟು ಮುಖೇಶ್ ಕುಮಾರ್ಗೆ(Mukesh Kumar) ಅವಕಾಶ ನೀಡಿದೆ. ಮುಖೇಶ್ ಕುಮಾರ್ಗೆ ಇದು ಭಾರತ ಪರ ಪದಾರ್ಪಣ ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ಜೈಸ್ವಾಲ್ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇದೀಗ ಮತ್ತೊಬ್ಬ ಆಟಗಾರನ ಎಂಟ್ರಿಯಾಗಿದೆ.
ಭಾರತ ಪರ ಪದಾರ್ಪಣೆ ಮಾಡಿದ ಮುಖೇಶ್ ಕುಮಾರ್ಗೆ ಈ ಪಂದ್ಯ ಸ್ಮರಣೀಯವಾಗಲಿದೆ. ಏಕೆಂದರೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ 100ನೇ ಟೆಸ್ಟ್ ಪಂದ್ಯ ಇದಾಗಿದೆ. ಈ ಹಿಂದೆ ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್ ನಡೆವಿನ ಸರಣಿಗೆ ಮುಖೇಶ್ ಕುಮಾರ್ ಆಯ್ಕೆಯಾಗಿದ್ದರೂ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ವಿಂಡಿಸ್ ಸರಣಿಯಲ್ಲಿ ಅವರ ಟೀಮ್ ಇಂಡಿಯಾ ಪರ ಆಡುವ ಕನಸು ನನಸಾಗಿದೆ.
ಮುಖೇಶ್ ಅವರ ಕ್ರಿಕೆಟ್ ಜರ್ನಿ ಅಷ್ಟು ಸುಲಭದಿಂದ ಕೂಡಿರಲಿಲ್ಲ. ಹೌದು ಬಿಹಾರದಲ್ಲಿ ಜನಿಸಿದ ಮುಖೇಶ್ ಕುಮಾರ್ ಯಾವುದೇ ಶ್ರೀಮಂತ ಕುಟುಂಬದಲ್ಲಿ ಅಥವಾ ಕ್ರಿಕೆಟ್ ಹಿನ್ನೆಲೆಯಿಂದ ಬಂದ ಪ್ರತಿಭೆಯಲ್ಲ. ಕಠಿಣ ಪರಿಶ್ರಮದ ಮೂಲಕವೇ ಬೆಳೆದು ಬಂದ ಪ್ರತಿಭೆ.
ಇದನ್ನೂ ಓದಿ ind vs wi : ಬ್ಯಾಟಿಂಗ್ ಸಲಹೆಗಳನ್ನು ಹಂಚಿಕೊಂಡ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
ತಂದೆ ಟ್ಯಾಕ್ಸಿ ಡ್ರೈವರ್
ಮುಖೇಶ್ ಅವರ ತಂದೆ ವೃತ್ತಿಯಲ್ಲಿ ಟ್ಯಾಕ್ಸಿ ಡ್ರೈವರ್. ಬಡತನದಲ್ಲಿ ಬೆಳೆದ ಮುಖೇಶ್ಗೆ ಕ್ರಿಕೆಟ್ನಲ್ಲಿ ಆಸಕ್ತಿ ಇದ್ದರೂ ತಮ್ಮ ಕುಟುಂಬ ನಿರ್ವಹಣೆಗಾಗಿ ಆರಂಭದಲ್ಲಿ ಕೂಲಿ ಕೆಲಸವನ್ನು ಮಾಡುತಿದ್ದರು. ಜತೆಗೆ ತಮ್ಮ ನೆಚ್ಚಿನ ಕ್ರಿಕೆಟ್ ಆಟವನ್ನು ಬಿಡುವಿನ ವೇಳೆ ಆಡುತಿದ್ದರು. ಹೀಗೆ ಕಠಿಣ ಶ್ರಮದಿಂದ ಕ್ರಿಕೆಟ್ನಲ್ಲಿ ತನ್ನ ಬದುಕನ್ನು ಕಟ್ಟಿಕೊಂಡಿರುವ ಮುಕೇಶ್ ಇದೀಗ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
Congratulations to Mukesh Kumar, who is all set to make his Test debut for #TeamIndia 🇮🇳🇮🇳 pic.twitter.com/oSPbbVu2Rh
— BCCI (@BCCI) July 20, 2023
ಸೇನೆಗೆ ಸೇರಲು ಬಯಸಿದ್ದ ಮುಖೇಶ್
ಕ್ರಿಕೆಟ್ ಆಟದಲ್ಲಿ ಅಪಾರ ಆಸಕ್ತಿ ಇದ್ದರೂ ಕುಟುಂಬಕ್ಕೆ ಆಧಾರವಾಗುವ ನಿಟ್ಟಿನಲ್ಲಿ ಮುಖೇಶ್ ಸೇನೆಗೆ ಸೇರಲು ಬಯಸಿದ್ದರು. ಅದರಂತೆ ಸೇನಾ ನೇಮಕಾತಿಗೂ ಅರ್ಜಿ ಸಲ್ಲಿಸಿದ್ದರು. ಆದರೆ ಇಲ್ಲಿ ವಿಫಲರಾದ ಬಳಿಕ ಧೃಡ ನಿರ್ಧಾರ ಕೈಗೊಂಡ ಅವರು ತಮ್ಮ ಕಷ್ಟದ ಮಧ್ಯೆಯೂ ಕ್ರಿಕೆಟ್ ಆಟದಲ್ಲಿಯೇ ಮುಂದುವರಿಯಲು ಆರಂಭಿಸಿದರು. ಇದರ ಪ್ರತಿ ಫಲ ಇದೀಗ ದೊರೆತಿದೆ. ಅದೆಷ್ಟೋ ಕ್ರಿಕೆಟ್ ಆಟಗಾರರ ಕನಸಾದ ಟೀಮ್ ಇಂಡಿಯಾದಲ್ಲಿ, ಮುಕೇಶ್ ಸ್ಥಾನ ಪಡೆದಿದ್ದಾರೆ. ಉತ್ತಮ ಪ್ರದರ್ಶನ ತೋರುವಂತಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ.
ಭಾರತ ತಂಡ
ರೋಹಿತ್ ಶರ್ಮ(ನಾಯಕ), ಯಶಸ್ವಿ ಜೈಸ್ವಾಲ್,ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪ ನಾಯಕ),ಇಶಾನ್ ಕಿಶನ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಮುಖೇಶ್ ಕುಮಾರ್, ಮೊಹಮ್ಮದ್ ಸಿರಾಜ್, ಜಯದೇವ್ ಉನದ್ಕತ್.