ಬಾರ್ಬಡಾಸ್: ವಿಂಡೀಸ್(IND vs WI 1st ODI) ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ(Team india) ಆಟಗಾರರು ನೂತನ ಜೆರ್ಸಿಯಲ್ಲಿ(team india new jersey) ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಎಲ್ಲ ಆಟಗಾರು ಹೊಸ ಜೆರ್ಸಿಯಲ್ಲಿ ಕಂಗೊಳಿಸಿರುವ ಫೋಟೊ ಮತ್ತು ವಿಡಿಯೊವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಅನುಭವಿ ಆಟಗಾರರಿಗಿಂತ ಈ ಬಾರಿ ಯುವ ಆಟಗಾರರ ಫೋಟೋವನ್ನೇ ಬಿಸಿಸಿಐ ಹೆಚ್ಚಾಗಿ ಹಂಚಿಕೊಂಡಿದೆ. ಇದರಲ್ಲಿ ಶುಭಮನ್ ಗಿಲ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಮುಖೇಶ್ ಕುಮಾರ್ ಹಲವರು ಕಾಣಿಸಿಕೊಂಡಿದ್ದಾರೆ. ಯುವ ಆಟಗಾರರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಯುವ ಆಟಗಾರರ ಜತೆ ಹಿರಿಯ ಆಟಗಾರರಾದ ಯಜುವೇಂದ್ರ ಚಹಲ್,ಕೂಡ ಕಾಣಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ನಾರಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅವರು ಈ ವಿಡಿಯೊದಲ್ಲಿ ಕಾಣಿಸಿಕೊಂಡಿಲ್ಲ.
ಬಿಸಿಸಿಐ ಕಿಟ್ ಪ್ರಾಯೋಜಕತ್ವವನ್ನು ಮುಂದಿನ 5 ವರ್ಷಗಳವರೆಗೆ ಅಡಿಡಾಸ್ ಕಂಪನಿ ವಹಿಸಿಕೊಂಡ ಬಳಿಕ ಭಾರತ ತಂಡ ಆಡುತ್ತಿರುವ ಮೊದಲ ಏಕದಿನ ಸರಣಿ ಇದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಮೊದಲ ಬಾರಿ ಭಾರತ ಅಡಿಡಾಸ್ ಪಾಯೋಜಕತ್ವದ ಜೆರ್ಸಿ ತೊಟ್ಟು ಕಣಕ್ಕಿಳಿದಿತ್ತು. ಬಿಸಿಸಿಐ ಜತೆ ಅಡಿಡಾಸ್ಮಾರ್ಚ್ 2028 ರವರೆಗೆ ಒಪ್ಪಂದ ಮಾಡಿಕೊಂಡಿದೆ. ಅಂದರೆ 5ವರ್ಷಗಳ ಒಪ್ಪಂದ ಇದಾಗಿದೆ. ಬೆಟ್ಟಿಂಗ್ ಆ್ಯಪ್ ಆಗಿರುವ ಡ್ರೀಮ್ ಇಲೆವೆನ್ ಪ್ರಾಯೋಜಕರಾಗಿ ಕಾಣಿಸಿಕೊಂಡಿದೆ.
ಇದನ್ನೂ ಓದಿ IND vs WI 1st ODI: ವಿಂಡೀಸ್ ಏಕದಿನ ಸರಣಿ ಮೊಟಕುಗೊಳಿಸಿ ತವರಿಗೆ ಮರಳಲಿದ್ದಾರೆ ಮೊಹಮ್ಮದ್ ಸಿರಾಜ್!
Test Cricket ✅
— BCCI (@BCCI) July 26, 2023
On to the ODIs 😎📸#TeamIndia | #WIvIND pic.twitter.com/2jcx0s4Pfw
ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ(Kensington Oval, Bridgetown, Barbados) ಗುರುವಾರ ನಡೆಯುವ ಮೊದಲ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ. ವಿಂಡೀಸ್ನಲ್ಲಿ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗುತ್ತದೆ. ಹವಾಮಾನ ಇಲಾಖೆ ಬುಧವಾರ ನೀಡಿದ ಮಾಹಿತಿ ಪ್ರಕಾರ ಪಂದ್ಯದ ವೇಳೆ ಶೇ.7 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿತ್ತು. ಆದರೆ ಗುರುವಾರ ನೀಡಿದ ಹೊಸ ಮುನ್ಸೂಚನೆಯಲ್ಲಿ ವಿಂಡೀಸ್ ಕಾಲಮಾನದ ಪ್ರಕಾರ ರಾತ್ರಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ. ಹೀಗಾಗಿ ದ್ವಿತೀಯ ಇನಿಂಗ್ಸ್ ಆಟ ನಡೆಯುವುದು ಅನುಮಾನ ಎನ್ನಲಾಗಿದೆ.