Site icon Vistara News

IND vs WI: ದಿಗ್ಗಜ ಸರ್‌ ಗ್ಯಾರಿ ಸೋಬರ್ಸ್ ಭೇಟಿಯಾದ ಟೀಮ್​ ಇಂಡಿಯಾ ಆಟಗಾರರು

Rahul Dravid (Extreme right) introduced Shubman Gill (second from right) to Gary Sobers and his wife in a cracking manner.(BCCI)

ಬ್ರಿಜ್​ಟೌನ್​(ಬಾರ್ಬಡಾಸ್​): ವೆಸ್ಟ್​ ಇಂಡೀಸ್​(IND vs WI) ವಿರುದ್ಧದ ಕ್ರಿಕೆಟ್​ ಸರಣಿಗೆ ಭಾರತ ತಂಡ ಈಗಾಗಲೇ ವಿಂಡೀಸ್​ ತಲುಪಿದ್ದು ಅಭ್ಯಾಸ ಕೂಡ ಆರಂಭಿಸಿದೆ. ಬುಧವಾರ ವೆಸ್ಟ್‌ ಇಂಡೀಸ್​ನ ಮಾಜಿ ಆಲ್‌ರೌಂಡರ್‌, ದಿಗ್ಗಜ ಸರ್‌ ಗ್ಯಾರಿ ಸೋಬರ್ಸ್(Garfield Sobers) ಅವರನ್ನು ಟೀಮ್​ ಇಂಡಿಯಾದ ಆಟಗಾರರು ಭೇಟಿ ಮಾಡಿದ್ದಾರೆ. ಸೋಬರ್ಸ್ ಜತೆ ಮಾತನಾಡುತ್ತಿರುವ ವಿಡಿಯೊ ಮತ್ತು ಫೋಟೊಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭಾರತ ಕ್ರಿಕೆಟ್​ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿದ್ದ ವೇಳೆ ಮೈದಾನಕ್ಕೆ ಬಂದ ಗ್ಯಾರಿ ಸೋಬರ್ಸ್ ದಂಪತಿ ಕೆಲ ಕಾಲ ರೋಹಿತ್ ಶರ್ಮ(Rohit Sharma)​, ವಿರಾಟ್ ಕೊಹ್ಲಿ (Virat Kohli)​, ಶುಭಮನ್​ ಗಿಲ್​, ಕೋಚ್​ ರಾಹುಲ್​ ದ್ರಾವಿಡ್​ ಅವರ ಜತೆ ಮಾತುಕತೆ ನಡೆಸಿದ್ದಾರೆ. ಕೋಚ್​ ರಾಹುಲ್ ದ್ರಾವಿಡ್​(Rahul Dravid) ಅವರು ಎಲ್ಲ ಆಟಗಾರರ ಪರಿಚಯವನ್ನು ಮಾಡಿಕೊಟ್ಟರು. ಇದೇ ವೇಳೆ ಗಿಲ್ ಅವರನ್ನು ಉದಯೋನ್ಮುಖ ಆಟಗಾರ ಎಂದು ಪರಿಚಯಿಸಿದ್ದಾರೆ.

6 ಎಸೆತಗಳಿಗೆ ಆರು ಸಿಕ್ಸರ್​ ಬಾರಿಸಿದ ಮೊದಲ ಆಟಗಾರ

ಇಂದಿನ ಟಿ20 ಯುಗದಲ್ಲಿ ಸಿಕ್ಸರ್‌ ಬಾರಿಸುವುದು ದೊಡ್ಡ ಕತೆಯಲ್ಲ. ಓವರಿಗೆ ಆರು ಸಿಕ್ಸರ್‌ ಸಿಡಿದರೂ ಇದೆಲ್ಲ ಮಾಮೂಲು ಎಂದು ಪರಿಗಣಿಸುವವರೇ ಹೆಚ್ಚು. ಆದರೆ ಆಗಿನ್ನೂ ಸೀಮಿತ ಓವರ್‌ಗಳ ಕ್ರಿಕೆಟ್‌ ಆರಂಭವಾಗದಿದ್ದ ಕಾಲದಲ್ಲಿ ಇಂಥದೊಂದು ಪರಾಕ್ರಮ ಮೆರೆದರೆ ಅದಕ್ಕೆ ಸಿಗುತ್ತಿದ್ದ ಮಾನ್ಯತೆ, ಗೌರವ, ಪ್ರಶಂಸೆಗಳನ್ನೆಲ್ಲ ಬಹುಶಃ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿರಲಿಲ್ಲ. ಇಂಥದೊಂದು ಗೌರವಕ್ಕೆ ಪಾತ್ರರಾದವರೇ ವೆಸ್ಟ್‌ ಇಂಡೀಸಿನ ಆಲ್‌ರೌಂಡರ್‌ ಸರ್‌ ಗ್ಯಾರಿ ಸೋಬರ್ಸ್! ಇವರಿಂದ ದಂಡಿಸಲ್ಪಟ್ಟ ಬೌಲರ್‌ ವೇಗಿ ಮಾಲ್ಕಂ ನಾಶ್‌.

ಕ್ರಿಕೆಟ್‌ ಇತಿಹಾಸದಲ್ಲಿ ಓವರಿನ ಆರೂ ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟಿದ ಮೊದಲ ಆಟಗಾರನೇ ಗ್ಯಾರಿ ಸೋಬರ್ಸ್. ಬಳಿಕ ರವಿಶಾಸ್ತ್ರಿ, ಹರ್ಷಲ್ ಗಿಬ್ಸ್, ಯುವರಾಜ್‌ ಸಿಂಗ್‌ ಅವರೆಲ್ಲ ಈ ಸಾಹಸವನ್ನು ಪುನರಾವರ್ತಿಸಿದರು. ಆದರೆ ಸೋಬರ್ಸ್ ಅವರ ಆ ಮೊದಲ ಪರಾಕ್ರಮ ಮಾತ್ರ ಸಾಟಿಯಿಲ್ಲದ್ದು, ಕಲ್ಪನೆಗೂ ಮೀರಿದ್ದು.

ಕೆರಿಬಿಯನ್​ ಪ್ರವಾಸದಲ್ಲಿ ಭಾರತ ತಂಡ 2 ಟೆಸ್ಟ್‌, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು. ಮೊದಲು 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳ ತಾಣ ರೊಸೇಯು (ಜುಲೈ 12-16) ಮತ್ತು ಪೋರ್ಟ್‌ ಆಫ್ ಸ್ಪೇನ್‌ (ಜುಲೈ. 20-24). ಪೋರ್ಟ್‌ ಆಫ್ ಸ್ಪೇನ್‌ನ ಕ್ವೀನ್ಸ್‌ಪಾರ್ಕ್‌ ಓವಲ್‌ನಲ್ಲಿ ನಡೆಯುವ 100ನೇ ಟೆಸ್ಟ್‌ ಪಂದ್ಯ ಇದೆಂಬುದು ವಿಂಡೀಸ್‌ ಕ್ರಿಕೆಟ್‌ ಪಾಲಿಗೆ ಸಂಭ್ರಮದ ಸಂಗತಿ. ಇದು ಭಾರತದ ಪಾಲಿಗೆ 3ನೇ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಆವೃತ್ತದ ಮೊದಲ ಸರಣಿಯಾಗಲಿದೆ.

ಇದನ್ನೂ ಓದಿ Virat kohli : ವಿರಾಟ್ ಕೊಹ್ಲಿಯನ್ನು ಮೂರ್ಖ ಎಂದು ಕರೆದ ನವಿನ್​ ಉಲ್​ ಹಕ್!

ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉ.ನಾ), ಕೆಎಸ್ ಭರತ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.

ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಹಾರ್ದಿಕ್ ಪಾಂಡ್ಯ (ಉ.ನಾ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಯದೇವ್ ಉನಾದ್ಕತ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.

Exit mobile version