ಟ್ರಿನಿಡಾಡ್: ಈಗಾಗಲೇ ಡೊಮಿನಿಕಾದ ರೋಸೋದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್(IND vs WI) ವಿರುದ್ಧ ಇನಿಂಗ್ಸ್ ಹಾಗೂ 141 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಭಾರತೀಯ ಆಟಗಾರರು ಟ್ರಿನಿಡಾಡ್ ತಪುಪಿದ್ದು ಅಭ್ಯಾಸ ಕೂಡ ಆರಂಭಿಸಿದ್ದಾರೆ. ಈ ಪಂದ್ಯವನ್ನು ಗೆದ್ದು ಸರಣಿ ಗೆಲುವು ಸಾಧಿಸುವುದು ರೋಹಿತ್ ಪಡೆಯ ಯೋಜನೆಯಾಗಿದೆ.
ಮೊದಲ ಟೆಸ್ಟ್ ಪಂದ್ಯವನ್ನಾಡಿದ ತಂಡವನ್ನೇ ಈ ಪಂದ್ಯದಲ್ಲಿಯೂ ಆಡಿಸಲಾಗುವುದು. ಗೆಲುವಿನ ಲಯದಲ್ಲಿರುವ ಕಾರಣ ಬದಲಾವಣೆ ಕಷ್ಟಸಾಧ್ಯ. ಆರ್.ಅಶ್ವಿನ್, ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶಸ್ವಿ ಜೈಸ್ವಾಲ್(yashasvi jaiswal) ಮೇಲೆ ದ್ವಿತೀಯ ಪಂದ್ಯದಲ್ಲಿಯೂ ನಿರೀಕ್ಷೆಯೊಂದನ್ನು ಇಡಲಾಗಿದೆ.
ಮಂಗಳವಾರ ಭಾರತ ತಂಡದ ಆಟಗಾರರು ಬ್ಯಾಟಿಂಗ್ ಅಭ್ಯಾಸಕ್ಕೆ ಮಾತ್ರ ಒತ್ತುಕೊಟ್ಟಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಜೈಸ್ವಾಲ್,ರೋಹಿತ್, ಕೊಹ್ಲಿ ಸೇರಿ ಎಲ್ಲ ಆಟಗಾರರು ಹೆಚ್ಚುವರಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಭಾರತ ಮತ್ತು ವಿಂಡೀಸ್ ನಡುವಿನ ದ್ವಿತೀಯ ಪಂದ್ಯ ಗುರುವಾರ ಆರಂಭಗೊಳ್ಳಲಿದೆ.
ಇದನ್ನೂ ಓದಿ IND vs WI: ನೂತನ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡ ವಿರಾಟ್ ಕೊಹ್ಲಿ
Happy faces in Trinidad 👋 😊#TeamIndia | #WIvIND pic.twitter.com/OuMCLeXOoc
— BCCI (@BCCI) July 17, 2023
ವಿಂಡೀಸ್ ಸರಣಿ ಬಳಿಕ ಕೋಚ್ ಡ್ರಾವಿಡ್ಗೆ ವಿಶ್ರಾಂತಿ
ಕ್ರಿಕ್ ಬಜ್ ವರದಿಯ ಪ್ರಕಾರ, ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸೇರಿದಂತೆ ಕೋಚಿಂಗ್ ಸಿಬ್ಬಂದಿಯ ಇತರ ಸದಸ್ಯರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಬಳಿಕ ವಿಶ್ರಾಂತಿ ನೀಡಲಾಗುವುದು ಎಂದು ತಿಳಿದುಬಂದಿದೆ. ಈ ಎಲ್ಲ ಸಿಬ್ಬಂದಿಗಳು ಐರ್ಲೆಂಡ್ ಪ್ರವಾಸಕ್ಕೆ ಲಭ್ಯವಿರುವುದಿಲ್ಲ. ದ್ರಾವಿಡ್ ಅನುಪಸ್ಥಿತಿಯಲ್ಲಿ ಎನ್ಸಿಎ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಅವರು ಕೋಚಿಂಗ್ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಭಾರತ ತಂಡ
ಭಾರತ: ರೋಹಿತ್ ಶರ್ಮ(ನಾಯಕ), ಯಶಸ್ವಿ ಜೈಸ್ವಾಲ್,ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪ ನಾಯಕ),ಇಶಾನ್ ಕಿಶನ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯದೇವ್ ಉನದ್ಕತ್.