ಡೊಮಿನಿಕಾ: ವೆಸ್ಟ್ ಇಂಡೀಸ್(IND vs WI) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 76 ಬಾರಿಸಿದ ಟೀಮ್ ಇಂಡಿಯಾದ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 8,500 ರನ್ ಗಡಿ ದಾಟಿದ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಜತೆಗೆ ವೀರೇಂದ್ರ ಸೇಹವಾಗ್(Virender Sehwag) ಮತ್ತು ವಿವ್ ರಿಚರ್ಡ್ಸ್(Sir Viv Richards) ದಾಖಲೆಯನ್ನು ಮುರಿದಿದ್ದಾರೆ.
ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ಬ್ಯಾಟರ್ಗಳಲ್ಲಿ ವೀರೇಂದ್ರ ಸೇಹವಾಗ್(8,503) ಅವರನ್ನು ಹಿಂದಿಕ್ಕಿ ಅಗ್ರ 5ರೊಳಗೆ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿರುವ ಅಗ್ರ ನಾಲ್ಕು ಆಟಗಾರರೆಂದರೆ, ಸಚಿನ್ ತೆಂಡುಲ್ಕರ್ (15,921), ರಾಹುಲ್ ದ್ರಾವಿಡ್ (13,265), ಸುನಿಲ್ ಗವಾಸ್ಕರ್ (10,122) ಹಾಗೂ ವಿವಿಎಸ್ ಲಕ್ಷ್ಮಣ್ (8,781). ಸದ್ಯ ಕೊಹ್ಲಿ(8555*) 5ನೇ ಸ್ಥಾನದಲ್ಲಿದ್ದಾರೆ. ಇನ್ನು 226 ರನ್ ಗಳಿಸಿದರೆ ವಿವಿಎಸ್ ಲಕ್ಷ್ಮಣ್ ಅವರ ದಾಖಲೆನ್ನು ಮುರಿಯಲಿದ್ದಾರೆ.
ಇದನ್ನೂ ಓದಿ WTC Final 2023 : ಸೋಲಿನ ಬಳಿಕ ರಹಸ್ಯ ಸಂದೇಶ ಪೋಸ್ಟ್ ಮಾಡಿದ ವಿರಾಟ್ ಕೊಹ್ಲಿ!
ರಿಚರ್ಡ್ಸ್ ದಾಖಲೆ ಮುರಿದ ಕೊಹ್ಲಿ
ವಿರಾಟ್ ಕೊಹ್ಲಿ ಅವರು 62 ರನ್ ಬಾರಿಸಿದ ವೇಳೆ ವಿವ್ ರಿಚರ್ಡ್ಸ್ ಅವರ ದಾಖಲೆಯೊಂದನ್ನು ಮುರಿದರು. ಟೆಸ್ಟ್ ಕ್ರಿಕೆಟ್ನಲ್ಲಿ ರಿಚರ್ಡ್ಸ್ ಅವರ ರನ್ ಹಿಂದಿಕ್ಕಿದ್ದರು. ರಿಚರ್ಡ್ಸ್ ಟೆಸ್ಟ್ನಲ್ಲಿ 8540 ರನ್ ಗಳಿಸಿದ್ದಾರೆ. ವಿರಾಟ್ ಸದ್ಯ 8555* ರನ್ ಬಾರಿಸಿ ಮುಂದೆ ಸಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್(Sachin Tendulkar) ಹೆಸರಿನಲ್ಲಿದೆ. ಸಚಿನ್ 15921 ರನ್ ಗಳಿಸಿದ್ದಾರೆ.
A perfect milestone to begin the proceedings on Day 3 👌
— BCCI (@BCCI) July 14, 2023
8️⃣5️⃣0️⃣0️⃣ runs and counting now in Test Cricket for @imVkohli 👏👏#TeamIndia | #WIvIND pic.twitter.com/5WcfnaoQM6
ಪಂದ್ಯ ಗೆದ್ದ ಭಾರತ
ವಿಂಡ್ಸರ್ ಪಾರ್ಕ್‌ನ(Windsor Park Dominica)ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ ಮೊದಲ ಇನಿಂಗ್ಸ್ನಲ್ಲಿ 150 ರನ್ ಬಾರಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ್ದ ಭಾರತ ಮೊದಲ ಇನಿಂಗ್ಸ್ನಲ್ಲಿ 421 ರನ್ ಬಾರಿಸಿ 271 ರನ್ಗಳ ಮುನ್ನಡೆಯೊಂದಿಗೆ ಡಿಕ್ಲೇರ್ ಘೋಷಿಸಿತು. 271 ರನ್ಗಳ ಗುರಿ ಬೆನ್ನಟ್ಟಿದ ವಿಂಡೀಸ್ ಕೇವಲ 130 ರನ್ಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 141 ರನ್ಗಳಿಂದ ಗೆಲುವು ಸಾಧಿಸಿತು. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
ಭಾರತ ಪರ ಆರ್.ಅಶ್ವಿನ್ 2 ಇನಿಂಗ್ಸ್ನಲ್ಲಿ ಸೇರಿ ಒಟ್ಟಿ 12 ವಿಕೆಟ್ ಉಡಾಯಿಸಿ ವಿಂಡೀಸ್ಗೆ ಆಘಾತವಿಕ್ಕಿದರು. ಬ್ಯಾಟಿಂಗ್ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಯಶಸ್ವಿ ಜೈಸ್ವಾಲ್ (171), ರೋಹಿತ್ ಶರ್ಮಾ(103) ರನ್ ಗಳಿಸಿ ಮಿಂಚಿದರು. ಜೈಸ್ವಾಲ್ ಪಂದ್ರಶೇಷ್ಠ ಪ್ರಶಸ್ತಿಗೆ ಭಾಜನರಾದರು.