Site icon Vistara News

IND vs WI: ಒಂದೇ ಏಟಿಗೆ ಎರಡು ದಾಖಲೆ ಮುರಿದ ವಿರಾಟ್​ ಕೊಹ್ಲಿ

A focused Virat Kohli dug India out of a hole

ಪೋರ್ಟ್​ ಆಫ್​ ಸ್ಪೈನ್​: ವೆಸ್ಟ್​ ಇಂಡೀಸ್(IND vs WI)​ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಆಡಲಿಳಿದ ವಿರಾಟ್​ ಕೊಹ್ಲಿ(virat kohli) 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಸಾಧನೆ ಮಾಡಿದರು. ಬ್ಯಾಟಿಂಗ್​ನಲ್ಲಿಯೂ ಮಿಂಚಿದ ಕಿಂಗ್​ ಕೊಹ್ಲಿ ಎರಡು ದಾಖಲೆಗಳನ್ನು ಮುರಿದ್ದಿದ್ದಾರೆ.

​ಪೋರ್ಟ್‌ ಆಫ್ ಸ್ಪೇನ್‌ನ ಕ್ವೀನ್ಸ್‌ ಪಾರ್ಕ್‌ ಓವಲ್‌ನಲ್ಲಿ ಗುರುವಾರ ಆರಂಭವಾದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತಕ್ಕೆ ಜೈಸ್ವಾಲ್​ ಮತ್ತು ರೋಹಿತ್​ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 139 ರನ್​ಗಳ ಕೊಡುಗೆ ನೀಡಿದರು. ಉಭಯ ಆಟಗಾರರ ಮೊದಲ ಪಂದ್ಯದ ಬ್ಯಾಟಿಂಗ್​ ಪ್ರದರ್ಶನ ಈ ಪಂದ್ಯದಲ್ಲಿಯೂ ಕಂಡುಬಂದಿತು. ಆ ಬಳಿಕ ವಿರಾಟ್​ ಕೂಡ ಉತ್ತಮ ಬ್ಯಾಟಿಂಗ್​ ನಡೆಸಿ ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. ಸದ್ಯ ಭಾರತ ತಂಡ ಮೊದಲ ದಿನದಾಟಕ್ಕೆ 4 ವಿಕೆಟ್​ ಕಳೆದುಕೊಂಡು 288 ರನ್​ ಬಾರಿಸಿದೆ. ಕೊಹ್ಲಿ(87*) ಮತ್ತು ಜಡೇಜಾ(36*) ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಸೆಹವಾಗ್​ ದಾಖಲೆ ಮುರಿದ ಕೊಹ್ಲಿ

ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್​ಗೆ ಒತ್ತು ಕೊಟ್ಟ ಕೊಹ್ಲಿ ಮೊದಲ ರನ್​ ಗಳಿಸಲು 21 ಎಸೆತಗಳನ್ನು ತೆಗೆದುಕೊಂಡರು. 21 ಎಸೆತದ ಬಳಿ ಬೌಂಡರಿ ಬಾರಿಸಿ ಖಾತೆ ತೆರೆದರು. 32 ರನ್​ ಗಳಿಸಿದ ವೇಳೆ ವೀರೇಂದ್ರ ಸೆಹವಾಗ್(​8586 ರನ್​)(virender sehwag) ಅವರ ದಾಖಲೆಯೊಂದನ್ನು ಹಿಂದಿಕ್ಕಿದರು. ಸದ್ಯ ವಿರಾಟ್​ 8642* ರನ್​ ಬಾರಿಸಿದ್ದಾರೆ.

ಇದನ್ನೂ ಓದಿ Virat Kohli: ಕಿಂಗ್ ಕೊಹ್ಲಿಗೆ 500ನೇ ಪಂದ್ಯದ ರಂಗು​

ಜಾಕ್​ ಕ್ಯಾಲಿಸ್​ ದಾಖಲೆ ಪತನ

ಸೆಹವಾಗ್​ ದಾಖಲೆ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಜಾಕ್​ ಕ್ಯಾಲಿಸ್(jacques kallis)​ ಅವರ ದಾಖಲೆಯನ್ನು ಕೂಡ ಕೊಹ್ಲಿ ಮುರಿದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಬಾರಿಸಿದ ವಿಶ್ವದ 5ನೇ ಆಟಗಾರ ಎಂಬ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಕ್ಯಾಲಿಸ್​ ದಾಖಲೆ ಮುರಿಯಲು ಕೊಹ್ಲಿಗೆ 73 ರನ್​ಗಳ ಅಗತ್ಯವಿತ್ತು. ಈ ರನ್​ ಮೀರಿದ ವೇಳೆ ಕ್ಯಾಲಿಸ್​ ದಾಖಲೆ ಪತನಗೊಂಡಿತು. ವಿರಾಟ್​ ಕೊಹ್ಲಿ 25,548* ರನ್​ ಬಾರಿಸಿ 5ನೇ ಸ್ಥಾನದಲ್ಲಿದ್ದಾರೆ. ಕ್ಯಾಲಿಸ್​(25,534 ರನ್​) 6ನೇ ಸ್ಥಾನಕ್ಕೆ ಕುಸಿದರು. ಅತಿ ಹೆಚ್ಚು ರನ್​ ಬಾರಿಸಿದ ದಾಖಲೆ ಕ್ರಿಕೆಟ್​ ದೇವರು ಎಂದು ಕರೆಯಲ್ಪಡುವ ಸಚಿನ್​ ತೆಂಡೂಲ್ಕರ್​ ಹೆಸರಿನಲ್ಲಿದೆ. ಸಚಿನ್ 34357 ರನ್​ ಬಾರಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಲಂಕಾದ ಕುಮಾರ ಸಂಗಕ್ಕರ(28016) ಮೂರನೇ ಸ್ಥಾನದಲ್ಲಿ ಆಸೀಸ್​ನ ರಿಕಿ ಪಾಂಟಿಂಗ್​(27483) ನಾಲ್ಕನೇ ಸ್ಥಾನದಲ್ಲಿ ಮಹೇಲಾ ಜಯವರ್ಧನೆ(25957) ಕಾಣಿಸಿಕೊಂಡಿದ್ದಾರೆ.

ಸದ್ಯ 87 ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿರುವ ವಿರಾಟ್​ ಕೊಹ್ಲಿ ದ್ವಿತೀಯ ದಿನದಾಟದಲ್ಲಿ ಶತಕ ಬಾರಿಸುವ ವಿಶ್ವಾಸದಲ್ಲಿದ್ದಾರೆ. ಒಂದೊಮ್ಮೆ ಕೊಹ್ಲಿ ಶತಕ ಬಾರಿಸಿದರೆ 76ನೇ ಅಂತಾರಾಷ್ಟ್ರೀಯ ಶತಕವನ್ನು ಪೂರೈಸಲಿದ್ದಾರೆ.  ​

Exit mobile version