ಮೆಲ್ಬೋರ್ನ್: ಟಿ20 ವಿಶ್ವ ಕಪ್‌ನ ಗ್ರೂಪ್ 2ರಲ್ಲಿ ಸೆಮಿಫೈನಲ್ ಪ್ರವೇಶಿಸಲು ರೋಹಿತ್ ಶರ್ಮಾ ಪಡೆ ಸಜ್ಜಾಗಿದೆ. ಗೆಲ್ಲಲೇಬೇಕಾದ ಹೋರಾಟದಲ್ಲಿ ಭಾನುವಾರ ಜಿಂಬಾಬ್ವೆಯನ್ನು (IND vs ZIM) ಎದುರಿಸಲಿದೆ. ಈ ಮುಖಾಮುಖಿ ಮೆಲ್ಬೋರ್ನ್ ಮೈದಾನದಲ್ಲಿ ನಡೆಯಲಿವೆ. ಈ ಪಂದ್ಯದ ಪಿಚ್ ರಿಪೋರ್ಟ್ ಹೇಗಿದೆ ಎಂದು ಈ ಕೆಳಗೆ ತಿಳಿಸಲಾಗಿದೆ.
ಪಿಚ್ ರಿಪೋರ್ಟ್
ಮೆಲ್ಬೋರ್ನ್ ಪಿಚ್ ಬ್ಯಾಟರ್‌ಗಳಿಗೆ ಮತ್ತು ಬೌಲರ್‌ಗಳಿಗೂ ಅನುಕೂಲಕರವಾಗಿದೆ ಎಂಬ ಖ್ಯಾತಿಯನ್ನು ಹೊಂದಿದೆ. ಆರಂಭಿಕ ಹಂತದಲ್ಲಿ ಬೌಲರ್‌ಗಳು ಈ ಪಿಚ್‌ನಲ್ಲಿ ಹಿಡಿತ ಸಾಧಿಸಿದರೆ ಬಳಿಕ ಬ್ಯಾಟರ್‌ಗಳಿಗೆ ನೆರವಾಗಲಿದೆ. ಆದ್ದರಿಂದ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಮಳೆ ಭೀತಿ ಇಲ್ಲ
ಟೀಮ್ ಇಂಡಿಯಾ ವಿಶ್ವ ಕಪ್ ಅಭಿಯಾನವನ್ನು ಇದೇ ಮೈದಾನದಲ್ಲಿ ಆರಂಭಿಸಿತ್ತು. ಅಕ್ಟೋಬರ್ 23 ರಂದು ನಡೆದ ವರ್ಣರಂಜಿತ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಸಾಹಸದಿಂದ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿತ್ತು. ಆ ಪಂದ್ಯಕ್ಕೂ ಮುನ್ನ ಮೆಲ್ಬೋರ್ನ್‌ನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇತ್ತು. ಆದರೆ, ಅದೃಷ್ಟವಶಾತ್ ಈ ಪಂದ್ಯಕ್ಕೆ ಮಳೆ ಅಡಚಣೆ ಉಂಟುಮಾಡಿಲ್ಲ. ಇದೀಗ ಭಾನುವಾರ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಮಳೆ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದ್ದರಿಂದ ಅಭಿಮಾನಿಗಳು ನಿರಾಳರಾಗಿದ್ದಾರೆ.
ಇದನ್ನೂ ಓದಿ |T20 World Cup | ಸೆಮಿಫೈನಲ್ ಪ್ರವೇಶಕ್ಕೆ ಇಂದು ಬಿಗ್ ಫೈಟ್; ಯಾರಿಗೆ ಒಲಿಯಲಿದೆ ಅದೃಷ್ಟ?