Site icon Vistara News

IND VS ZIM | ಜಿಂಬಾಬ್ವೆ ವಿರುದ್ಧ ಟಾಸ್​ ಗೆದ್ದ ಭಾರತ ತಂಡ ಬ್ಯಾಟಿಂಗ್​ ಆಯ್ಕೆ

ind

ಅಡಿಲೇಡ್: ಐಸಿಸಿ ಟಿ20 ವಿಶ್ವ ಕಪ್​ನಲ್ಲಿ ಈಗಾಗಲೆ ಸೆಮಿ ಫೈನಲ್​ ಪ್ರವೇಶಿಸಿರುವ ಭಾರತ ತಂಡ ತನ್ನ ಅಂತಿಮ ಸೂಪರ್​-12 ಪಂದ್ಯದಲ್ಲಿ ಜಿಂಬಾಬ್ವೆ (IND VS ZIM)ವಿರುದ್ಧ ಟಾಸ್​ ಗೆದ್ದ ರೋಹಿತ್​ ಶರ್ಮಾ ಬ್ಯಾಟಿಂಗ್​ ನಡೆಸಲು ನಿರ್ಧರಿಸಿದ್ದಾರೆ. ಭಾರತ ತಂಡ ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿದೆ. ದಿನೇಶ್​ ಕಾರ್ತಿಕ್​ ಬದಲು ರಿಷಭ್​ ಪಂತ್​ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಂಡಿದೆ.

ಪಿಚ್‌ ರಿಪೋರ್ಟ್‌

ಮೆಲ್ಬೋರ್ನ್ ಪಿಚ್ ಬ್ಯಾಟರ್‌ಗಳಿಗೆ ಮತ್ತು ಬೌಲರ್‌ಗಳಿಗೂ ಅನುಕೂಲಕರವಾಗಿದೆ ಎಂಬ ಖ್ಯಾತಿಯನ್ನು ಹೊಂದಿದೆ. ಆರಂಭಿಕ ಹಂತದಲ್ಲಿ ಬೌಲರ್‌ಗಳು ಈ ಪಿಚ್‌ನಲ್ಲಿ ಹಿಡಿತ ಸಾಧಿಸಿದರೆ, ಬಳಿಕ ಬ್ಯಾಟರ್‌ಗಳಿಗೆ ನೆರವಾಗಲಿದೆ.

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ರಿಷಭ್​ ಪಂತ್​, ಅಕ್ಷರ್‌ ಪಟೇಲ್‌, ಆರ್‌. ಅಶ್ವಿನ್‌, ಭುವನೇಶ್ವರ್‌ ಕುಮಾರ್‌, ಮೊಹಮದ್‌ ಶಮಿ, ಅರ್ಶ್‌ದೀಪ್‌ ಸಿಂಗ್‌

ಜಿಂಬಾಬ್ವೆ: ವೆಸ್ಲಿ ಮಾಧೆವೆರೆ, ಕ್ರೇಗ್ ಎರ್ವಿನ್ (ನಾಯಕ), ರೆಗಿಸ್ ಚಕಬ್ವಾ, ಸೇನ್‌ ವಿಲಿಯಮ್ಸ್, ಸಿಕಂದರ್ ರಾಜಾ, ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ತೆಂಡೈ ಚಟಾರಾ, ರಿಚರ್ಡ್ ನಗರವಾ, ಬ್ಲೆಸಿಂಗ್ ಮುಜರಬಾನಿ

ಸ್ಥಳ: ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌, ಮೆಲ್ಬೋರ್ನ್‌

ಪಂದ್ಯ ಆರಂಭ : ಮಧ್ಯಾಹ್ನ 01:30ಕ್ಕೆ (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

‌ಇದನ್ನೂ ಓದಿ | T20 World Cup | ನೆದರ್ಲೆಂಡ್ಸ್​ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಸೋಲು; ಸೆಮಿಫೈನಲ್​ ಪ್ರವೇಶಿಸಿದ ಭಾರತ

Exit mobile version