ಹರಾರೆ : ಮಂಕಡ್ ಔಟ್ ವಿಚಾರದಲ್ಲಿ ಭಾರತದ ಸ್ಪಿನ್ ಬೌಲರ್ ಆರ್. ಅಶ್ವಿನ್ ಸಿಕ್ಕಾಪಟ್ಟೆ ಸ್ಟ್ರಿಕ್ಟ್. ಅವರು ಅದನ್ನು ಸಮರ್ಥಿಸಿಕೊಳ್ಳುತ್ತಾರೆ. ಐಸಿಸಿ ಕೂಡ ಮಂಕಡ್ ಅನ್ನು ಔಟೆಂದು ಪರಿಗಣಿಸುವಂತೆ ಹೊಸ ನಿಯಮ ಮಾಡಿದೆ. ಆದರೆ, ಎಲ್ಲರೂ ಆ ರೀತಿ ಇರುವುದಿಲ್ಲ. ಕೆಲವರು ಈ ವಿಚಾರದಲ್ಲಿ ಸ್ವಲ್ಪ ಉದಾರತೆ ತೋರುತ್ತಾರೆ. ಅಂಥವರ ಸಾಲಿಗೆ ಸೇರಿಕೊಂಡಿದ್ದಾರೆ ಭಾರತ ತಂಡದ ಮಧ್ಯಮ ವೇಗಿ ದೀಪಕ್ ಚಾಹರ್. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ (IND vs ZIM ODI) ಮೂರನೇ ಪಂದ್ಯದಲ್ಲಿ ಈ ಪ್ರಸಂಗ ನಡೆದಿದೆ.
ಭಾರತ ನೀಡಿದ್ದ ೨೯೦ ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಜಿಂಬಾಬ್ವೆ ತಂಡದ ಆರಂಭವೇ ನಾಟಕೀಯವಾಗಿತ್ತು. ಟಕುಡ್ಜ್‌ವನಶೆ ಸ್ಟ್ರೈಕ್‌ನಲ್ಲಿ ಬ್ಯಾಟ್ ಮಾಡುತ್ತಿದ್ದರೆ, ಇನೋಸೆಂಟ್ ಕೈಯಿಯಾ ನಾನ್‌ಸ್ಟ್ರೈಕ್ ಎಂಡ್‌ನಲ್ಲಿದ್ದರು. ದೀಪಕ್ ಚಾಹರ್ ಮೊದಲ ಎಸೆತ ಎಸೆಯಲು ಓಡಿ ಬರುತ್ತಿದ್ದಾಗ ಇನೋಸೆಂಟ್ ಕ್ರೀಸ್ ಬಿಟ್ಟು ಮುಂದಕ್ಕೆ ಹೋಗಿದ್ದರು. ಅದನ್ನು ಗಮನಿಸಿದ ದೀಪಕ್ ಚಾಹರ್ ರನ್‌ಅಪ್ ಕಡಿಮೆ ಮಾಡಿ ಬೇಲ್ಸ್ ಎಗರಿಸಿ ಮಂಕಡ್ ಮಾಡಿದರು. ಆದರೆ, ಔಟ್‌ಗೆ ಅಪೀಲ್ ಮಾಡದೇ ಬ್ಯಾಟ್ಸ್‌ಮನ್ ಕಡೆ ನೋಡಿ ನಗು ಬೀರಿದ್ದಾರೆ.
ನಾಯಕ ಕೆ. ಎಲ್ ರಾಹುಲ್ ಕೂಡ ಅಪೀಲ್ ಮಾಡದೇ ಸುಮ್ಮನಾಗಿದ್ದಾರೆ. ಹೀಗಾಗಿ ಅಂಪೈರ್ ಡೆಡ್‌ಬಾಲ್ ಸೂಚನೆ ಕೊಟ್ಟರು.
ಇದನ್ನೂ ಓದಿ | IND vs ZIM ODI | ಜಿಂಬಾಬ್ವೆ ವಿರುದ್ಧ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಶುಬ್ಮನ್ ಗಿಲ್