ಹರಾರೆ: ಆತಿಥೇಯ ಜಿಂಬಾಬ್ವೆ(IND vs ZIM) ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನಾಡಲು ಭಾರತ ತಂಡ ಹರಾರೆಗೆ(Team India touchdown in Zimbabwe) ತಲುಪಿದೆ. ಆಟಗಾರರು ಮತ್ತು ಹಂಗಾಮಿ ಕೋಚ್ ವಿವಿಎಸ್ ಲಕ್ಮ್ಮಣ್(VVS Laxman) ಜಿಂಬಾಬ್ಬೆಗೆ ತಲುಪಿರುವ ಫೋಟೊವನ್ನು ಜಿಂಬಾಬ್ವೆ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಉಭಯ ತಂಡಗಳ ಸರಣಿ ಜುಲೈ 6 ರಿಂದ ಆರಂಭಗೊಳ್ಳಲಿದೆ.
ಬುಧವಾರ (ಜುಲೈ 3) ಜಿಂಬಾಬ್ವೆಗೆ ಬಂದಿಳಿದ ಟೀಮ್ ಇಂಡಿಯಾಕ್ಕೆ ಆತ್ಮೀಯ ಸ್ವಾಗತ ಕೋರಲಾಯಿತು. ಜಿಂಬಾಬ್ವೆ ಕ್ರಿಕೆಟ್ ಹಂಚಿಕೊಂಡ ವೀಡಿಯೊದಲ್ಲಿ, ಲಕ್ಷ್ಮಣ್ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದನ್ನು ನೋಡಬಹುದು ಮತ್ತು ಇತರ ಬೆಂಬಲ ಸಿಬ್ಬಂದಿಯೊಂದಿಗೆ 15 ಸದಸ್ಯರ ತಂಡ ಕೂಡ ಜತೆಗಿತ್ತು. ಗುರುವಾರದಿಂದ ಆಟಗಾರರು ಅಭ್ಯಾಸ ಆರಂಭಿಸಲಿದ್ದಾರೆ.
ಚಂಡಮಾರುತದಿಂದ ಬಾರ್ಬಡೋಸ್‌ನಲ್ಲಿ ಸಿಲುಕಿರುವ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದ, ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಇನ್ನೂ ಕೂಡ ಭಾರತಕ್ಕೆ ಆಗಮಿಸದ ಕಾರಣ ಅವರ ಬದಲಿಗೆ ಸಾಯಿ ಸುದರ್ಶನ್(Sai Sudharsan), ಜಿತೇಶ್ ಶರ್ಮಾ(Jitesh Sharma) ಮತ್ತು ಹರ್ಷಿತ್ ರಾಣಾ(Harshit Rana) ಅವರನ್ನು ಮೊದಲ ಎರಡು ಪಂದ್ಯಗಳಿಗಾಗಿ ಬಿಸಿಸಿಐ ಮಂಗಳವಾರ ತಂಡಕ್ಕೆ ಸೇರ್ಪಡೆಗೊಳಿಸಿತ್ತು.
ಚೊಚ್ಚಕ ಕರೆ ಪಡೆದ ಹರ್ಷಿತ್ ರಾಣಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೊನಚಾದ ಬೌಲಿಂಗ್ ಮೂಲಕ ಒಟ್ಟು 19 ವಿಕೆಟ್ ಕಿತ್ತು ಮಿಂಚಿದ್ದರು. ಮಾಯಾಂಕ್ ಅಗರ್ವಾಲ್ ವಿಕೆಟ್ ಕಿತ್ತು ದುರ್ವರ್ತನೆ ತೋರಿದ ಕಾರಣಕ್ಕೆ ದಂಡ ಮತ್ತು ಒಂದು ಪಂದ್ಯದ ನಿಷೇಧ ಶಿಕ್ಷೆ ಕೂಡ ಎದುರಿಸಿದ್ದರು.
ಇದನ್ನೂ ಓದಿ Team India: ತವರಿಗೆ ಪ್ರಯಾಣ ಬೆಳೆಸಿದ ಟೀಮ್ ಇಂಡಿಯಾ; ನಾಳೆ ದಿಲ್ಲಿಗೆ ಆಗಮನ
5 ಪಂದ್ಯಗಳ ಟಿ20 ಸರಣಿ ಇದಾಗಿದ್ದು, ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ರಿಯಾನ್ ಪರಾಗ್ 2024 ರ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಫಲಿತಾಂಶವಾಗಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಪಂದ್ಯಗಳನ್ನಾಡಲಿದ್ದಾರೆ. ಪರಾಗ್ ಅಸ್ಸಾಂ ನಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಮೊದಲ ಕ್ರೀಡಾಪಟುವಾಗಿದ್ದಾರೆ.
ಭಾರತ ತಂಡ
ಶುಭಮನ್ ಗಿಲ್ (ನಾಯಕ), ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್ (ವೀಕಿ), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ, ಸಾಯಿ ಸುದರ್ಶನ್, ಜಿತೇಶ್ ಶರ್ಮಾ (ವೀಕಿ) , ಹರ್ಷಿತ್ ರಾಣಾ.
ವೇಳಾಪಟ್ಟಿ
1ನೇ ಟಿ20: ಜುಲೈ 6, ಹರಾರೆ, ಸಂಜೆ 4.30
2ನೇ ಟಿ20: ಜುಲೈ 7, ಹರಾರೆ, ಸಂಜೆ 4.30
3ನೇ T20: ಜುಲೈ 10, ಹರಾರೆ, ಸಂಜೆ 4.30
4ನೇ T20: ಜುಲೈ 13, ಹರಾರೆ, ಸಂಜೆ 4.30
5 ನೇ T20: ಜುಲೈ 14, ಹರಾರೆ, ಸಂಜೆ 4.30