Site icon Vistara News

Team India : ಎಮರ್ಜಿಂಗ್ ಟೀಮ್ ಏಷ್ಯಾ ಕಪ್​ಗೆ ಭಾರತ ತಂಡ ಪ್ರಕಟ; ಯಾರಿಗೆಲ್ಲ ಸಿಕ್ಕಿದೆ ಚಾನ್ಸ್?

Emerging Cricket World Cup

ನವ ದೆಹಲಿ: ಶ್ರೀಲಂಕಾದ ಕೊಲಂಬೋದಲ್ಲಿ ಜುಲೈ 13 ರಿಂದ 23 ರವರೆಗೆ ನಡೆಯಲಿರುವ ಮುಂಬರುವ ಎಸಿಸಿ ಪುರುಷರ ಉದಯೋನ್ಮುಖ ತಂಡಗಳ ಏಷ್ಯಾ ಕಪ್ 2023ಗಾಗಿ ಜೂನಿಯರ್ ಕ್ರಿಕೆಟ್ ಸಮಿತಿ ಭಾರತ ಎ ತಂಡವನ್ನು (Team India) ಪ್ರಕಟಿಸಿದೆ. ಏಷ್ಯಾದ ಎಂಟು ರಾಷ್ಟ್ರಗಳ ನಡುವೆ ನಡೆಯಲಿರುವ ಪಂದ್ಯಾವಳಿಯು 50 ಓವರ್​​ಗಳ ಮಾದರಿಯಲ್ಲಿ ನಡೆಯಲಿದೆ.

ಅಂಡರ್-19 ವಿಶ್ವಕಪ್ ವಿಜೇತ ಭಾರತದ ನಾಯಕ ಯಶ್ ಧುಲ್ ಅವರನ್ನು ಕಾಂಟಿನೆಂಟಲ್ ಟೂರ್ನಮೆಂಟ್​ಗೆ ನಾಯಕನನ್ನಾಗಿ ನೇಮಿಸಲಾಗಿದ್ದು, ಅಭಿಷೇಕ್ ಶರ್ಮಾ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. 16 ಸದಸ್ಯರ ತಂಡದಲ್ಲಿ ಸಾಯಿ ಸುದರ್ಶನ್, ರಿಯಾನ್ ಪರಾಗ್, ಪ್ರಭ್​ಸಿಮ್ರಾನ್​ ಸಿಂಗ್, ಧ್ರುವ್ ಜುರೆಲ್ ಮತ್ತು ರಾಜವರ್ಧನ್ ಹಂಗರ್ಗೇಕರ್ ಅವರಂತಹ ಕೆಲವು ಪ್ರಸಿದ್ಧ ಹೆಸರುಗಳಿವೆ. ಹರ್ಷ್ ದುಬೆ, ನೇಹಲ್ ವಧೇರಾ, ಸ್ನೆಲ್ ಪಟೇಲ್ ಮತ್ತು ಮೋಹಿತ್ ರೆಡ್ಕರ್ ಅವರು ಸ್ಪರ್ಧೆಯ ನಾಲ್ವರು ಸ್ಟ್ಯಾಂಡ್ಬೈ ಆಟಗಾರರಾಗಿದ್ದು, ಸಿತಾಂಶು ಕೊಟಕ್ (ಮುಖ್ಯ ಕೋಚ್), ಸಾಯಿರಾಜ್ ಬಹುತುಲೆ (ಬೌಲಿಂಗ್ ಕೋಚ್), ಮುನೀಶ್ ಬಾಲಿ (ಫೀಲ್ಡಿಂಗ್ ಕೋಚ್) ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದಾರೆ.

ಭಾರತ ‘ಎ’ ತಂಡ ಬಿ ಗುಂಪಿನಲ್ಲಿದ್ದು ನೇಪಾಳ, ಯುಎಇ ಎ ಮತ್ತು ಪಾಕಿಸ್ತಾನ ಎ ಇನ್ನುಳಿದ ತಂಡಗಳು. ಶ್ರೀಲಂಕಾ ಎ, ಬಾಂಗ್ಲಾದೇಶ ಎ, ಅಫ್ಘಾನಿಸ್ತಾನ ಎ ಮತ್ತು ಒಮಾನ್ ಎ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಜುಲೈ 21ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ‘ಎ’ ಗುಂಪಿನ ಟಾಪರ್ ಹಾಗೂ ‘ಬಿ’ ಗುಂಪಿನ 2ನೇ ಸ್ಥಾನ ಪಡೆಯುವ ತಂಡಗಳ ನಡುವೆ ಸೆಣಸಲಿದೆ. ಫೈನಲ್ ಪಂದ್ಯ ಜುಲೈ 23ರಂದು ನಡೆಯಲಿದೆ.

ಇದನ್ನೂ ಓದಿ : World Cup 2023 : ಮುಂಬಯಿ ತಲುಪಿದ ವಿಶ್ವ ಕಪ್​ ಟ್ರೋಫಿ

ಭಾರತ ತಂಡ: ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ (ಉಪನಾಯಕ), ನಿಕಿನ್ ಜೋಸ್, ಪ್ರದೋಶ್ ರಂಜನ್ ಪಾಲ್, ಯಶ್ ಧುಲ್ (ಸಿ), ರಿಯಾನ್ ಪರಾಗ್, ನಿಶಾಂತ್ ಸಿಂಧು, ಪ್ರಬ್​​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆ), ಮಾನವ್ ಸುತಾರ್, ಯುವರಾಜ್ ಸಿಂಗ್ ದೋಡಿಯಾ, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹಂಗರ್ಗೇಕರ್.

ಮೀಸಲು ಆಟಗಾರರ ಪಟ್ಟಿ: ಹರ್ಷ್ ದುಬೆ, ನೇಹಲ್ ವಧೇರಾ, ಸ್ನೆಲ್ ಪಟೇಲ್, ಮೋಹಿತ್ ರೆಡ್ಕರ್

ಕೋಚಿಂಗ್ ಸಿಬ್ಬಂದಿ: ಸಿತಾಂಶು ಕೊಟಕ್ (ಮುಖ್ಯ ಕೋಚ್), ಸಾಯಿರಾಜ್ ಬಹುತುಲೆ (ಬೌಲಿಂಗ್ ಕೋಚ್), ಮುನೀಶ್ ಬಾಲಿ (ಫೀಲ್ಡಿಂಗ್ ಕೋಚ್)

Exit mobile version