ಪುಣೆ: ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಭಾರತ ತಂಡ ವಿಶ್ವ ಕಪ್ನಲ್ಲಿ ತನ್ನ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶ (Ind vs Ban) ತಂಡವನ್ನು 256 ರನ್ಗಳಿಗೆ ನಿಯಂತ್ರಿಸಿದೆ. ಈ ಮೂಲಕ ರೋಹಿತ್ ಶರ್ಮಾ ಬಳಗಕ್ಕೆ 257 ರನ್ಗಳ ಗೆಲುವಿನ ಗುರಿ ಎದುರಾಗಿದೆ. ಆರಂಭದಲ್ಲಿ ಬಾಂಗ್ಲಾದೇಶ ತಂಡದ ಬ್ಯಾಟರ್ಗಳು ಮೇಲುಗೈ ಸಾಧಿಸಿದರೆ, ಬಳಿಕ ಭಾರತದ ಬೌಲರ್ಗಳು ರನ್ವೇಗಕ್ಕೆ ಕಡಿವಾಣ ಹಾಕಿದರು.
ಇಲ್ಲಿನ ಎಂಸಿಎ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಅವಕಾಶ ಸಿಕ್ಕಾಗ ರನ್ ಗಳಿಸುತ್ತಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟ ಮಾಡಿಕೊಂಡು 256 ರನ್ ಬಾರಿಸಿತು.
ಬಾಂಗ್ಲಾದೇಶ ತಂಡ ಉತ್ತಮ ಆರಂಭವನ್ನೇ ಪಡೆಯಿತು. 14.4 ಓವರ್ಗಳಲ್ಲಿ 93 ರನ್ ಬಾರಿಸುವ ಮೂಲಕ ದೊಡ್ಡ ಸ್ಕೋರ್ ಗಳಿಸುವ ಗುರಿಯನ್ನು ವ್ಯಕ್ತಪಡಿಸಿತು. ಆದರೆ, ಕುಲ್ದೀಪ್ ಯಾದವ್ ಅವರ ಅಮೋಘ ಕೈಚಳಕಕ್ಕೆ ಅರ್ಧ ಶತಕ ಬಾರಿಸಿದ್ದ ತಂಜಿದ್ ಹಸನ್ (51) ಎಲ್ಬಿಡಬ್ಲ್ಯು ಆಗಿ ಔಟಾದರು. ಮೊದಲ ವಿಕೆಟ್ ಕಳೆದುಕೊಂಡ ಬಾಂಗ್ಲಾ ತಂಡಕ್ಕೆ ತಕ್ಷಣವೇ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಬಳಿಕ ಬಂದ ಹಂಗಾಮಿ ನಾಯಕ ನಜ್ಮುಲ್ ಶಾಂಟೊ 8 ರನ್ಗೆ ಔಟಾದರು. ಅವರು ಜಡೇಜಾ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಆದರು. ಏತನ್ಮಧ್ಯೆ ರನ್ ಗಳಿಕೆಗೆ ವೇಗ ಕೊಟ್ಟ ಮತ್ತೊಬ್ಬ ಆರಂಭಿಕ ಆಟಗಾರ ಲಿಟನ್ ದಾಸ್ 66 ರನ್ಗಳಿಗೆ ಔಟಾದರು. ಜಡೇಜಾ ಎಸೆತಕ್ಕೆ ದೊಡ್ಡ ಹೊಡೆದ ಬಾರಿಸಲು ಮುಂದಾದ ಅವರು ಗಿಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಈ ಸುದ್ದಿಯನ್ನೂ ಓದಿ : KL Rahul : ಜಿಂಕೆಯಂತೆ ಚಂಗನೆ ನೆಗೆದು ಅದ್ಭುತ್ ಕ್ಯಾಚ್ ಹಿಡಿದ ಕೆ. ಎಲ್ ರಾಹುಲ್
ನಾಲ್ಕನೇ ಬ್ಯಾಟರ್ ಆಗಿ ಆಡಲು ಬಂದ ಮೆಹೆದಿ ಹಸನ್ ವೇಗಿ ಮೊಹಮ್ಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್ ಕೆ. ಎಲ್ ರಾಹುಲ್ ಹಿಡಿದ ಅದ್ಭುತ ಕ್ಯಾಚ್ಗೆ ಅವರು ಬಲಿಯಾದರು. ಇದಾದ ಬಳಿಕ ಆಡಲು ಬಂದ ತೌಹಿದ್ ಹೃದೋಯ್ 16 ರನ್ ಬಾರಿಸಿ ಕ್ರೀಸ್ನಲ್ಲಿ ತಳವೂರುವ ಲಕ್ಷಣ ತೋರಿದರು. ಇವರಿಗೆ ವಿಕೆಟ್ಕೀಪರ್ ಮುಷ್ಫಿಕರ್ ರಹೀಮ್ (38) ಸಾಥ್ ಕೊಟ್ಟರು. ಹೃದೋಯ್ ಠಾಕೂರ್ಗೆ ವಿಕೆಟ್ ಒಪ್ಪಿಸಿದರೆ, ಬುಮ್ರಾ ಎಸೆತಕ್ಕೆ 38 ರನ್ ಬಾರಿಸಿ ಔಟಾದರು. ಜಡೇಜಾ ಹಿಡಿದ ಅದ್ಭುತ ಕ್ಯಾಚ್ಗೆ ಮುಷ್ಫಿಕರ್ ವಿಕೆಟ್ ಒಪ್ಪಿಸಿದರು.
YORKED! 🎯
— BCCI (@BCCI) October 19, 2023
A signature @Jaspritbumrah93 delivery puts an end to Mahmudullah's knock.
Follow the match ▶️ https://t.co/GpxgVtP2fb#CWC23 | #TeamIndia | #INDvBAN | #MeninBlue pic.twitter.com/pjNcQ8S46A
ನಸುಮ್ ಅಹಮದ್ 14 ರನ್ ಬಾರಿಸಿ ಔಟಾದರು. ಮಹಮದುಲ್ಲಾ 46 ರನ್ ಬಾರಿಸಿ ಮಿಂಚಿದರು.
ಭಾರತ ತಂಡದ ಪರ ಬೌಲಿಂಗ್ನಲ್ಲಿ ಬುಮ್ರಾ 2 ವಿಕೆಟ್ ಉರುಳಿಸಿದರೆ, ಸಿರಾಜ್ 2 ವಿಕೆಟ್ ತಮ್ಮದಾಗಿಸಿಕೊಂಡರು. ರವೀಂದ್ರ ಜಡೇಜಾ ಪ್ರಮುಖ ಎರಡು ವಿಕೆಟ್ಗಳನ್ನು ಉರುಳಿಸಿದರೆ, ಶಾರ್ದೂಲ್ ಠಾಕೂರ್ ಹಾಗೂ ಕುಲ್ದೀಪ್ ಯಾದವ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.
ಹಾರ್ದಿಕ್ ಪಾಂಡ್ಯಗೆ ಗಾಯದ ಆತಂಕ
ಬಾಂಗ್ಲಾದೇಶ(IND vs BAN) ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ನಡೆಸುವ ವೇಳೆ ಗಾಯಗೊಂಡ ಹಾರ್ದಿಕ್ ಪಾಂಡ್ಯ(Hardik Pandya) ಅವರು ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಸದ್ಯ ಪಾಂಡ್ಯ ಸ್ಕ್ಯಾನಿಂಗ್ಗೆ ಒಳಪಟ್ಟಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇದು ಟೀಮ್ ಇಂಡಿಯಾಕ್ಕೆ ದೊಡ್ಡ ಆತಂಕ ಮೂಡಿಸಿದೆ.
ಹಾರ್ದಿಕ್ ಅವರು ತಮ್ಮ ಮೊದಲ ಓವರ್ನ ಮೂರನೇ ಎಸೆತದಲ್ಲಿ ಬೌಂಡರಿ ತಡೆಯುವ ಯತ್ನದಲ್ಲಿ ಕಾಲಿಗೆ ಗಾಯ ಮಾಡಿಕೊಂಡರು. ಬಳಿಕ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರೂ ನೋವು ಮಾತ್ರ ಕಡಿಮೆಯಾಗುವಂತೆ ಕಾಣಲಿಲ್ಲ. ಹೀಗಾಗಿ ಅವರು ಅರ್ಧಕ್ಕೆ ಬೌಲಿಂಗ್ ನಿಲ್ಲಿಸಿ ಮೈದಾನ ತೊರೆದರು. ಹೀಗಾಗಿ ಉಳಿದ ಮೂರು ಎಸೆತಗಳನ್ನು ವಿರಾಟ್ ಕೊಹ್ಲಿ ಪೂರ್ಣಗೊಳಿಸಿದರು.
ಒಂದೊಮ್ಮೆ ಹಾರ್ದಿಕ್ ಪಾಂಡ್ಯ ಅವರಿಗೆ ಗಂಭೀರ ಗಾಯಗೊಂಡಿದ್ದರೆ ಅವರು ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ. ಹೀಗಾದರೆ ಭಾರತ ತಂಡಕ್ಕೆ ಹಿನ್ನಡೆಯಾಗುವುದು ಖಚಿತ. ಏಕೆಂದರೆ ಅವರ ಸ್ಥಾನಕ್ಕೆ ಸೂಕ್ತ ಆಲ್ರೌಂಡರ್ ಆಟಗಾರ ಇಲ್ಲ. ಶಿವಂ ದುಬೆ ಇದ್ದರೂ ಅವರ ಬೌಲಿಂಗ್ನಲ್ಲಿ ಅಷ್ಟು ಡೆಪ್ತ್ ಇಲ್ಲ. ಹಾಗೂ ಅವರಿಗೆ ನಿಂತು ಆಡುವ ತಾಳ್ಮೆಯೂ ಇಲ್ಲ. ಫೀಲ್ಡಿಂಗ್ ಕೂಡ ಸಾಧಾರಣಮಟ್ಟದಿಂದ ಕೂಡಿದೆ. ಶಾರ್ದೂಲ್ ಠಾಕೂರ್ ಅವರು ತಂಡದಲ್ಲಿದ್ದರೂ ಅವರ ಪ್ರದರ್ಶನ ಕಳಪೆಮಟ್ಟದಿಂದ ಕೂಡಿದೆ. ಅವರ ಉಪಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗಿದೆ. ಒಟ್ಟಾರೆ ಪಾಂಡ್ಯ ಗಾಯ ತಂಡಕ್ಕೆ ಚಿಂತೆಗೀಡು ಮಾಡಿದೆ.