Site icon Vistara News

INDvsAUS : ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್ ಫೈನಲ್​ಗೆ ಭಾರತ ಬಹುತೇಕ ಎಂಟ್ರಿ

AUS

#image_title

ನವ ದೆಹಲಿ: ಭಾರತ ಕ್ರಿಕೆಟ್​ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ಗೆ ಭಾರತ ಬಹುತೇಕ ಎಂಟ್ರಿ ಪಡೆದಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ (INDvsAUS) ಎರಡನೇ ಪಂದ್ಯದಲ್ಲಿ ಗೆಲುವಿನ ಬಳಿಕ ಭಾರತ ತಂಡ ಫೈನಲ್​ಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ. ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಖಾತರಿಪಡಿಸಿಕೊಳ್ಳುವ ಮೂಲಕ ಫೈನಲ್​ಗೆ ಪ್ರವೇಶ ಪಡೆದಿದೆ. ಭಾರತ ಈಗ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಭಾರತ ಹಾಗೂ ಶ್ರೀಲಂಕಾ ನಡುವೆ ಎರಡನೇ ಸ್ಥಾನಕ್ಕೆ ಪೈಪೋಟಿ ಉಂಟಾಗಿದೆ.

ಎರಡನೇ ಪಂದ್ಯದ ಗೆಲುವಿನ ಬಳಿಕ ಭಾರತ ತಂಡದ ಶೇಕಡಾ 64.06 ಅಂಕಗಳನ್ನು ಪಡೆದುಕೊಂಡಿದ್ದಾರೆ. ಶ್ರೀಲಂಕಾ ತಂಡ 66.67 ಅಂಕಗಳನ್ನು ತಮ್ಮದಾಗಿಸಿಕೊಂಡು ಮೊದಲ ಸ್ಥಾನದಲ್ಲಿದೆ. ಹೀಗಾಗಿ ಈ ಎರಡೂ ತಂಡಗಳ ನಡುವಿನ ಅಂಕಗಳ ಅಂತರ ಕಡಿಮೆಯಿದೆ. ಆದರೆ, ನ್ಯೂಜಿಲ್ಯಾಂಡ್​ ಮತ್ತು ಶ್ರೀಲಂಕಾ ನಡುವೆ 2 ಟೆಸ್ಟ್​ ಪಂದ್ಯಗಳ ಸರಣಿ ಬಾಕಿ ಇರುವ ಕಾರಣ ಆ ತಂಡ ಭಾರತಕ್ಕೆ ಪೈಪೋಟಿ ನೀಡುವ ಸಾಧ್ಯತೆಗಳಿವೆ.

ಇದನ್ನೂ ಓದಿ : INDvsAUS : ರೋಹಿತ್​ ಶರ್ಮಾ ಮೊದಲ ಬಾರಿ ರನ್​ಔಟ್​, ವಿರಾಟ್​ ಕೊಹ್ಲಿ ಮೊದಲ ಬಾರಿ ಸ್ಟಂಪ್ಡ್​​!

ಒಂದು ವೇಳೆ ನ್ಯೂಜಿಲ್ಯಾಂಡ್​ ತಂಡದ ವಿರುದ್ಧ ಶ್ರೀಲಂಕಾ ಕ್ಲೀನ್​ ಸ್ವೀಪ್​ ಸಾಧನೆ ಮಾಡಿ, ಭಾರತ ತಂಡ ಎರಡು ಪಂದ್ಯಗಳಲ್ಲಿ ಸೋತರೆ 56.94 ಅಂಕಗಳನ್ನು ಪಡೆದುಕೊಳ್ಳಲಿದ್ದಾರೆ. ಶ್ರೀಲಂಕಾ ತಂಡ 61. 11 ಅಂಕಗಳನ್ನು ಪಡೆದುಕೊಂಡು ಫೈನಲ್​ಗೇರಲಿದೆ. ಒಂದು ವೇಳೆ ಭಾರತ ಎರಡೂ ಪಂದ್ಯಗಳನ್ನು ಡ್ರಾ ಮಾಡಿಕೊಂಡರೆ 60.65 ಅಂಕಗಳನ್ನು ಪಡೆದುಕೊಳ್ಳಲಿದೆ. ಒಂದು ವೇಳೆ ಶ್ರೀಲಂಕಾ 1-0 ಅಂತರದಿಂದ ಗೆದ್ದರೆ 55.55 ಅಂಕಗಳನ್ನು ಪಡೆದುಕೊಳ್ಳಲಿದೆ. ಇದು ಭಾರತ ತಂಡ ಎರಡೂ ಪಂದ್ಯಗಳಲ್ಲಿ ಸೋತರೂ ಪಡೆಯುವ ಅಂಕಗಳಿಗಿಂತ ಕಡಿಮೆ ಇರುತ್ತದೆ.

Exit mobile version