Site icon Vistara News

Ind vs Aus : ತಿರುವನಂತಪುರ ತಲುಪಿದ ಸೂರ್ಯಕುಮಾರ್ ಬಳಗ

Suryakumar Yadav

ತಿರುವನಂತಪುರಂ: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ (Ind vs Aus) ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಭಾರತ ತಂಡ, ನವೆಂಬರ್ 26ರ ಭಾನುವಾರ ತಿರುವನಂತಪುರಂನ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ತನ್ನ ಮುನ್ನಡೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಿದೆ.

ನವೆಂಬರ್ 24ರ ಶುಕ್ರವಾರ ತಿರುವನಂತಪುರಂ ತಲುಪಿದ ಭಾರತ ತಂಡದ ಆಟಗಾರರನ್ನು ಹೋಟೆಲ್ ಸಿಬ್ಬಂದಿ ಆತ್ಮೀಯವಾಗಿ ಸ್ವಾಗತಿಸಿದರು. ಭಾನುವಾರದ ಹೈ ವೋಲ್ಟೇಜ್ ಪಂದ್ಯಕ್ಕೆ ಮುಂಚಿತವಾಗಿ ಆಸ್ಟ್ರೇಲಿಯಾ ತಂಡವು ಕೇರಳ ರಾಜಧಾನಿಯನ್ನು ತಲುಪಿದೆ. ಕೇರಳ ಕ್ರಿಕೆಟ್ ಅಸೋಸಿಯೇಷನ್ ಪ್ರಕಾರ, ಉಭಯ ತಂಡಗಳು ಶನಿವಾರ ಕಾರ್ಯವಟ್ಟಂನ ಸ್ಪೋಟ್ಸ್​​ ಹಬ್​ನಲ್ಲಿ ಅಭ್ಯಾಸ ನಡೆಸಲಿವೆ.

ವಿಶಾಖಪಟ್ಟಣಂನ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಮ್ಯಾಥ್ಯೂ ವೇಡ್ ಮತ್ತು ತಂಡದ ವಿರುದ್ಧ ಒಂದು ಎಸೆತ ಬಾಕಿ ಇರುವಾಗಲೇ ಭಾರತ ತಂಡವು ಎರಡು ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು. ವಿಕೆಟ್ ಕೀಪರ್-ಬ್ಯಾರ್​​ ಜೋಶ್ ಇಂಗ್ಲಿಸ್ ಶತಕ ಬಾರಿಸಿದರೆ, ಸ್ಟೀವ್ ಸ್ಮಿತ್ ಅರ್ಧಶತಕ ಬಾರಿಸುವ ಮೂಲಕ ಪ್ರವಾಸಿ ತಂಡವು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು.

ಭಾರತಕ್ಕೆ ರೋಚಕ ಜಯ

ಋತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ಮೂರು ಓವರ್​ಗಳಲ್ಲಿ ಔಟಾದ ನಂತರ ಸ್ಟ್ಯಾಂಡ್-ಇನ್ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಆಕರ್ಷಕ ಅರ್ಧಶತಕಗಳನ್ನು ಗಳಿಸಿದರು. ಸೂರ್ಯಕುಮಾರ್ ಮತ್ತು ಕಿಶನ್ 60 ಎಸೆತಗಳಲ್ಲಿ 112 ರನ್​ಗಳ ಜೊತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಆದಾಗ್ಯೂ, ಇನಿಂಗ್ಸ್​​ನಲ್ಲಿ ಕೊನೆಯಲ್ಲಿ ವಿಕೆಟ್​ಗಳು ನಿಯಮಿತ ಬಿದ್ದವು. ಆದರೆ ರಿಂಕು ಸಿಂಗ್ ಅವರ ಕೊನೆಯ ಎಸೆತದ ವೀರೋಚಿತ ಆಟವು ಭಾರತವನ್ನು ಗೆಲುವಿನೆಡೆಗೆ ಕೊಂಡೊಯ್ಯಿತು. ಭಾರತದ ವೇಗಿ ಮುಖೇಶ್ ಕುಮಾರ್ ಕೂಡ ಮೊದಲ ಇನಿಂಗ್ಸ್​​ನ ತಮ್ಮ ಪ್ರಯತ್ನಕ್ಕಾಗಿ ಅಭಿಮಾನಿಗಳು ಮತ್ತು ತಜ್ಞರಿಂದ ಪ್ರಶಂಸೆ ಗಳಿಸಿದರು. 30 ವರ್ಷದ ಬೌಲರ್​ ತನ್ನ ನಾಲ್ಕು ಓವರ್​ಗಳಲ್ಲಿ ಕೇವಲ 29 ರನ್​ಗಳನನ ನೀಡಿದರು.

ಇದನ್ನೂ ಓದಿ : ICC World Cup 2023 : ರೋಹಿತ್ ಬಳಗವನ್ನು ಲೇವಡಿ ಮಾಡಿ ವಿವಾದ ಸೃಷ್ಟಿಸಿದ ಆಸೀಸ್​ ನಾಯಕ

ತಿರುವನಂತಪುರದಲ್ಲಿ ತವರು ತಂಡವು ಅದೇ ಆಡುವ ಬಳಗವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಏತನ್ಮಧ್ಯೆ, ನವೆಂಬರ್ 19 ರ ಭಾನುವಾರ ಭಾರತ ವಿರುದ್ಧದ ಏಕದಿನ ವಿಶ್ವಕಪ್ 2023 ಫೈನಲ್​​ನಲ್ಲಿ ಆಡಿದ ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಆಡಮ್ ಜಂಪಾ ಅವರಂತಹ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಭಾನುವಾರದ ಪಂದ್ಯಕ್ಕಾಗಿ ಈ ಮೂವರು ಪ್ಲೇಯಿಂಗ್ ಇಲೆವೆನ್​ಗೆ ಮರಳಬಹುದು.

Exit mobile version