Site icon Vistara News

Asia Cup 2023 : ಏಷ್ಯಾ ಕಪ್‌ನಲ್ಲೂ ಆಡುವುದಿಲ್ಲ ಅಯ್ಯರ್‌, ರಾಹುಲ್‌ ಕತೆಯೂ ಗೊತ್ತಿಲ್ಲ!

Shreyas iyer

#image_title

ಮುಂಬಯಿ: ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ 2023ರ ಆವೃತ್ತಿಯ ಏಷ್ಯಾ ಕಪ್‌ನಲ್ಲಿ (Asia Cup 2023) ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್ ಅಯ್ಯರ್ ಪಾಲ್ಗೊಳ್ಳುವುದು ಅನುಮಾನವಾಗಿದೆ. 28 ವರ್ಷದ ಬ್ಯಾಟ್ಸ್‌ಮನ್‌ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಪಡೆಯುತ್ತಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲಿದ್ದ ಅವರು ಸರ್ಜರಿಗೆ ಒಳಗಾಗಿದ್ದಾರೆ. ಆ ಬಳಿಕ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದರೂ ಅವರು ಸಂಪೂರ್ಣ ಫಿಚ್‌ ಎನಿಸಲು ಸ್ವಲ್ಪ ಸಮಯ ಬೇಕಾಗಬಹುದು ಎನ್ನಲಾಗಿದೆ. ಹೀಗಾಗಿ ಅವರಿಗೆ ಏಷ್ಯಾ ಕಪ್‌ ತಂಡದ ಜತೆ ಪ್ರಯಾಣ ಮಾಡಲು ಆಗುವುದಿಲ್ಲ. ಇದರಿಂದಾಗಿ ಭಾರತ ತಂಡದ ಮಧ್ಯಮ ಕ್ರಮಾಂಕಕ್ಕೆ ಮತ್ತೆ ಪೆಟ್ಟು ಬಿದ್ದಿದೆ. ಇದೇ ವೇಳೆ ತೊಡೆ ನೋವಿನ ಕಾರಣಕ್ಕೆ ಸರ್ಜರಿಗೆ ಒಳಗಾಗಿರುವ ವಿಕೆಟ್‌ಕೀಪರ್‌ ಬ್ಯಾಟರ್‌ ಕೆ. ಎಲ್‌ ರಾಹುಲ್‌ (KL Rahul) ಅವರ ಫಿಟ್‌ನೆಸ್‌ ಕುರಿತೂ ಮಾಹಿತಿ ಇಲ್ಲ

ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಫ್ರಾಂಚೈಸಿಯ ಕೋಲ್ಕೊತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ನಾಯಕ ನಾಯಕರಾಗಿದ್ದ ಅವರಿಗೆ ಕಳೆದ ಬಾರಿ ಆಡಲು ಸಾಧ್ಯವಾಗಿರಲಿಲ್ಲ. ಅವರು ಅದಕ್ಕಿಂತ ಹಿಂದೆ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧ ದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೇ ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ವಿಶ್ವ ಕಪ್‌ ತಂಡಕ್ಕೆ ಅವರನ್ನು ಸೇರಿಸಿಕೊಳ್ಳುವ ಉದ್ದೇಶದಿಂದ ಅವರನ್ನು ಸರ್ಜರಿಗೆ ಒಳಪಡಿಸಿಲ್ಲ.

ಪ್ಯಾಟ್ ಕಮಿನ್ಸ್ ನೇತೃತ್ವದ ತಂಡದ ವಿರುದ್ಧ ಆಸ್ಟ್ರೇಲಿಯಾ ತಂಡದ ವಿರುದ್ಧ ಲಂಡನ್ನ ದಿ ಓವಲ್‌ನಲ್ಲಿ ನಡೆದ 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ (ಡಬ್ಲ್ಯುಟಿಸಿ) ಫೈನಲ್‌ ಪಂದ್ಯದಲ್ಲಿ ಟೀಮ್ ಇಂಡಿಯಾ 209 ರನ್‌ಗಳಿಂದ ಸೋಲು ಕಂಡಿದೆ. ಹೀಗಾಗಿ ಮುಂದಿನ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತಕ್ಕೆ ಗೆಲುವಿನ ಅನಿವಾರ್ಯತೆ ಎದುರಾಗಿದೆ. ಅದಕ್ಕಾಗಿ ಸಮತೋಲಿತ ತಂಡವನ್ನು ಕಟ್ಟಬೇಕಾಗಿದೆ. ಈ ವೇಳೆ ಅಯ್ಯರ್‌ ಪ್ರಮುಖ ಎನಿಸಿಕೊಂಡಿದ್ದರು. ಟೈಮ್ಸ್ ಆಫ್ ಇಂಡಿಯಾ (ಟಿಒಐ) ವರದಿಯ ಪ್ರಕಾರ, ಅಯ್ಯರ್ ಕಾಂಟಿನೆಂಟಲ್ ಚಾಂಪಿಯನ್‌ಷಿಪ್‌ಗೆ ಮೊದಲು ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯುವ ಸಾಧ್ಯತೆಯಿಲ್ಲ. ಎನ್‌ಸಿಎಯಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿರುವ ನಡುವೆಯೂ ಅವರಿಗೆ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ನೋವಿಗಾಗಿ ಅವರು ಇಂಜೆಕ್ಷನ್‌ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಅಯ್ಯರ್ ಇತ್ತೀಚೆಗೆ ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬೆನ್ನು ನೋವಿಗೆ ಚುಚ್ಚುಮದ್ದನ್ನು ತೆಗೆದುಕೊಂಡಿದ್ದರು. ಬೆನ್ನು ಇನ್ನೂ ಅವರಿಗೆ ತೊಂದರೆ ನೀಡುತ್ತಿದೆ ಎಂದು ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ.

ಇದನ್ನೂ ಓದಿ : KL Rahul: ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದ ಕೆ.ಎಲ್​ ರಾಹುಲ್​

ಶ್ರೇಯಸ್ ಅಯ್ಯರ್ ಈ ಹಿಂದೆ ಬೆನ್ನುನೋವಿನಿಂದಾಗಿ 2023ರ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಈ ವರ್ಷದ ಆರಂಭದಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಸರಣಿಯ ಅಂತಿಮ ಪಂದ್ಯದ ನಂತರ ಅವರು ಬೆನ್ನುನೋವಿನ ಬಗ್ಗೆ ವರದಿ ಮಾಡಿದ್ದರು. ಅಲ್ಲಿಂದ ಅವರು ಪುನಶ್ಚೇತನಕ್ಕೆ ಒಳಗಾಗಿದ್ದರೂ ಗುಣಮುಖರಾಗಿರಲಿಲ್ಲ. ಕೊನೆಗೆ ಸರ್ಜರಿ ಅನಿವಾರ್ಯವಾಗಿತ್ತು. ಹೀಗಾಗಿ ಜುಲೈನಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಅವರು ತೆರಳುವುದಿಲ್ಲ.

ಮಧ್ಯಮ ಕ್ರಮಾಂಕದ ಬ್ಯಾಟರ್‌ ಇದುವರೆಗೆ ಟೀಮ್ ಇಂಡಿಯಾ ಪರ 10 ಟೆಸ್ಟ್, 42 ಏಕದಿನ ಮತ್ತು 49 ಟಿ20 ಪಂದ್ಯಗಳನ್ನು ಆಡಿದ್ದಾರೆ. 2017ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 50 ಓವರ್‌ಗಳ ಸ್ವರೂಪದಲ್ಲಿ, ಅವರು 46.6 ಸರಾಸರಿಯಲ್ಲಿ 1631 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು.

Exit mobile version