Site icon Vistara News

ind vs aus : 21ನೇ ಶತಮಾನದಲ್ಲಿ ಭಾರತ ಕ್ರಿಕೆಟ್​ ತಂಡದ ವಿಶೇಷ ದಾಖಲೆ, ಮೊಹಾಲಿ ಕ್ರೀಡಾಂಗಣವೇ ಸಾಕ್ಷಿ

Team india Record

ಮೊಹಾಲಿ : ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ (ind vs aus) ಮೊದಲ ಪಂದ್ಯದಲ್ಲಿ ಭಾರತ ಜಯ ಸಾಧಿಸಿದೆ. ಇದು 21ನೇ ಶತಮಾನದಲ್ಲಿ ಟೀಂ ಇಂಡಿಯಾಗೆ ಮೊಹಾಲಿ ಸ್ಟೇಡಿಯಮ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಲಭಿಸಿದ ಮೊದಲ ಗೆಲವು. ಕಳೆದ 27 ವರ್ಷಗಳಿಂದ ಭಾರತ ತಂಡ ಈ ಸ್ಟೇಡಿಯಮ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದಿರಲಿಲ್ಲ. ಪ್ರತಿ ಬಾರಿಯೂ ಆಸೀಸ್ ತಂಡಕ್ಕೆ ಜಯ ದೊರಕುತ್ತಿತ್ತು. ಹಂಗಾಮಿ ನಾಯಕ ಕೆ. ಎಲ್​ ರಾಹುಲ್ ನೇತೃತ್ವದಲ್ಲಿ ಭಾರತ ತಂಡ ಹೊಸ ಸಾಧನೆ ಮಾಡಿ.

ಮೊಹಮ್ಮದ್ ಶಮಿ ಅವರ ಐದು ವಿಕೆಟ್ ಸಾಧನೆಯ ನಂತರ, ಇಬ್ಬರು ಯುವ ಆರಂಭಿಕ ಆಟಗಾರರಾದ ಶುಭ್ಮನ್ ಗಿಲ್ ಮತ್ತು ಋತುರಾಜ್ ಗಾಯಕ್ವಾಡ್, ಹಂಗಾಮಿ ನಾಯಕ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಸೇರಿದಂತೆ ನಾಲ್ವರು ಭಾರತೀಯ ಬ್ಯಾಟರ್​ಗಳ ಅರ್ಧಶತಕಗಳ ಸಹಾಯದಿಂದ ಈ ಜಯ ಹಾಗೂ ದಾಖಲೆ ಮಾಡಲು ಸಾಧ್ಯವಾಯಿತು. ಸರಣಿಯಲ್ಲೂ 1-0 ಮುನ್ನಡೆ ಪಡೆಯಿತು.

277 ರನ್​​ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಪರ ಶುಬ್ಮನ್ ಗಿಲ್ ಹಾಗೂ ರುತುರಾಜ್ ಗಾಯಕ್ವಾಡ್ ಉತ್ತಮವಾಘಿ ಇನ್ನಿಂಗ್ಸ್ ಆರಂಭಿಸಿದರು. ಮೊದಲ 10 ಓವರ್ ಗಳಲ್ಲಿ ಭಾರತ 66/0 ಸ್ಕೋರ್ ಮಾಡಿತ್ತು. ಅವರು ಸ್ಟ್ರೈಕ್ ಅನ್ನು ಮುಂದುವರಿಸಿದರು. ಮೊದಲು ಗಿಲ್ ಅರ್ಧಶತಕ ಗಳಿಸಿದರು ಹಾಗೂ ಬಳಿಕ ಗಾಯಕ್ವಾಡ್ ತಮ್ಮ ಅರ್ಧ ಶತಕವನ್ನು ಬಾರಿಸಿದರು.

ಗಿಲ್ ಮತ್ತು ಗಾಯಕ್ವಾಡ್ ಇಬ್ಬರೂ ಆಸ್ಟ್ರೇಲಿಯಾದಿಂದ ಪಂದ್ಯವನ್ನು ಕಸಿದುಕೊಳ್ಳುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಂದುಕೊಳ್ಳುತ್ತಿದ್ದ ವೇಳೆ ಪ್ರವಾಸಿ ತಂಡ ಕೇವಲ ಒಂಬತ್ತು ರನ್​ಗಳ ಅಂತರದಲ್ಲಿ ಮೂರು ವಿಕೆಟ್​ಗಳನ್ನು ಉರುಳಿಸದಿರು. ಗಿಲ್ ಮತ್ತು ಗಾಯಕ್ವಾಡ್ ಇಬ್ಬರನ್ನೂ ಆಡಮ್ ಜಂಪಾ ಎಸೆತಕ್ಕೆ ಔಟಾದರು. ಶ್ರೇಯಸ್ ಅಯ್ಯರ್ ಅಗ್ಗವಾಗಿ ರನ್ ಔಟ್ ಆದರು. ಇಶಾನ್​ ಸ್ವಲ್ಪ ಹೊತ್ತು ಆಡಿದರೆ ರಾಹುಲ್ ಮತ್ತು ಸೂರ್ಯ 80 ರನ್ ಗಳ ಜೊತೆಯಾಟವನ್ನು ಆಡಿದರು.

ರಾಹುಲ್ ಸಿಕ್ಸರ್​ನೊಂದಿಗೆ ಪಂದ್ಯವನ್ನು ಮುಗಿಸಿದರು, ಭಾರತವು ಎಂಟು ಎಸೆತಗಳು ಬಾಕಿ ಇರುವಾಗ ಗುರಿಯನ್ನು ಬೆನ್ನಟ್ಟಿತು. ಈ ಗೆಲುವಿನೊಂದಿಗೆ ಭಾರತ ನಂ.1 ತಂಡ ಎನಿಸಿಕೊಂಡಿದೆ.

ಇದಕ್ಕೂ ಮುನ್ನ ಮೊಹಮ್ಮದ್ ಶಮಿ ಅವರು ತಂಡಕ್ಕೆ ನೆರವಾದರು. ಮೊದಲ ಓವರ್​​ನಲ್ಲಿಯೇ ಮಿಚೆಲ್ ಮಾರ್ಷ್ ಅವರನ್ನು ಔಟ್ ಮಾಡಿದರು ಮತ್ತು ಸ್ಟೀವ್ ಸ್ಮಿತ್ ಅವರ ದೊಡ್ಡ ವಿಕೆಟ್ ಪಡೆಯಲು ಮತ್ತೆ ಮರಳಿದರು. ಶಮಿ ಇನ್ನೂ ಮೂರು ವಿಕೆಟ್​​ಗಳನ್ನು ಪಡೆದರು,

Exit mobile version