ದುಬೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯಗಳ ಸರಣಿ ಭಾನುವಾರ ಮುಕ್ತಾಯಗೊಂಡಿದ್ದು, ಸೋಮವಾರ ICC ODI RANKING ಪಟ್ಟಿ ಪ್ರಕಟವಾಗಿದೆ. ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಮೂರನೇ ಸ್ಥಾನ ಪಡೆದಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಭಾರತ 2-1 ಅಂತರದಿಂದ ವಶಪಡಿಸಿಕೊಂಡಿದ್ದು, 109 ರೇಟಿಂಗ್ ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ 106 ರೇಟಿಂಗ್ ಅಂಕಗಳನ್ನು ಹೊಂದಿರುವ ಪಾಕಿಸ್ತಾನಕ್ಕಿಂತ ಒಂದು ಸ್ಥಾನ ಮೇಲಕ್ಕೇರಿದೆ.
ನ್ಯೂಜಿಲೆಂಡ್ ತಂಡ 128 ರೇಟಿಂಗ್ಸ್ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಇಂಗ್ಲೆಂಡ್ 121 ರೇಟಿಂಗ್ಸ್ ಪಡೆದು ಎರಡನೇ ಸ್ಥಾನದಲ್ಲಿದೆ.
ಭಾರತ ತಂಡ ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಮೂರು ಪಂದ್ಯಗಳ ಸರಣಿಯನ್ನೂ ವಶಪಡಿಸಿಕೊಂಡರೆ ಭಾರತ ತಂಡದ ರೇಟಿಂಗ್ಸ್ ಇನ್ನಷ್ಟು ಹೆಚ್ಚಳವಾಗಲಿದೆ. ಅದರೆ, ಇಂಗ್ಲೆಂಡ್ (121) ಹಾಗೂ ಭಾರತ (109) ರೇಟಿಂಗ್ಸ್ ಅಂಕಗಳ ನಡುವೆ ದೊಡ್ಡ ಅಂತರವಿದೆ. ಭಾರತ ತಂಡದ ಅಧಿಕಾರಯುತ ಗೆಲುವುಗಳ ಮೂಲಕ ಸರಣಿ ಗೆದ್ದರೆ ಆಂಗ್ಲರ ಪಡೆಯನ್ನು ಹಿಂದಿಕ್ಕಬಹುದು.
ಪಾಕ್- ಭಾರತ ಬಿಗ್ ಫೈಟ್
ರೇಟಿಂಗ್ ವಿಚಾರದಲ್ಲಿ 109 ಅಂಕಗಳನ್ನು ಹೊಂದಿರುವ ಭಾರತ ಹಾಗೂ 106 ರೇಟಿಂಗ್ಸ್ ಹೊಂದಿರುವ ಪಾಕಿಸ್ತಾನ ತಂಡದ ನಡುವೆ ಭರ್ಜರಿ ಪೈಪೋಟಿಯಿದೆ. ಆದರೆ, ಪಾಕಿಸ್ತಾನ ಮುಂದಿನ ತಿಂಗಳು ನೆದರ್ಲೆಂಡ್ಸ್ ವಿರುದ್ಧ 50 ಓವರ್ಗಳ ಪಂದ್ಯದಲ್ಲಿ ಆಡಲಿದೆ.
ಇದನ್ನೂ ಓದಿ | IND vs ENG ODI | ಭಾರತದ ಕೂಲ್ ಕ್ಯಾಪ್ಟನ್, ವಿಕೆಟ್ ಕೀಪರ್ ಧೋನಿ ರೆಕಾರ್ಡ್ ಬ್ರೇಕ್ ಮಾಡ್ತಾರ ರಿಷಬ್ ಪಂತ್?