Site icon Vistara News

India Coach: ಕೋಚ್​ ಆಗುವ ಮುನ್ನವೇ ಗಂಭೀರ್​ಗೆ ಕಿವಿಮಾತು ಹೇಳಿದ ಅನಿಲ್ ಕುಂಬ್ಳೆ

India Coach

India Coach: On Reports Of Gautam Gambhir Becoming Next India Coach, Anil Kumble's 'Different' Verdict

ಮುಂಬಯಿ: ರಾಹುಲ್​ ದ್ರಾವಿಡ್(Rahul Dravid)​ ಅವರು ಟಿ20 ವಿಶ್ವಕಪ್​ ಬಳಿಕ ಟೀಮ್​ ಇಂಡಿಯಾದ ಕೋಚ್(India Coach)​ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ನೂತನ ಕೋಚ್​ ಆಗಿ ಗೌತಮ್​ ಗಂಭೀರ್​(Gautam Gambhir) ಅವರು ಆಯ್ಕೆಯಾಗುತ್ತಾರೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿವೆ. ಗಂಭೀರ್ ಅವರ ಮಾರ್ಗದರ್ಶನದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಈ ಬಾರಿಯ ಐಪಿಎಲ್​ (IPL 2024) ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇದೀಗ ಟೀಮ್​ ಇಂಡಿಯಾದ ಮಾಜಿ ಆಟಗಾರ ಹಾಗೂ ಕೋಚ್​ ಅನಿಲ್ ಕುಂಬ್ಳೆ(Anil Kumble) ಅವರು ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದು ಸಂಪೂರ್ಣವಾಗಿ ವಿಭಿನ್ನ ಸವಾಲು ಎಂದು ಹೇಳಿದ್ದಾರೆ.

ಕ್ರಿಕ್​ಇನ್ಫೊ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಕುಂಬ್ಳೆ, ಗಂಭೀರ್​ ಮಾರ್ಗದರ್ಶನದಲ್ಲಿ ಕೆಕೆಆರ್​ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿದರೂ ಕೂಡ ರಾಷ್ಟ್ರೀಯ ತಂಡದ ಮಾರ್ಗದರ್ಶನ, ತರಬೇತಿ ಅತ್ಯಂತ ವಿಭಿನ್ನವಾಗಿದೆ. ಈ ಸವಾಲು ಅಷ್ಟು ಸುಲಭವಲ್ಲ ಎಂದು ಹೇಳಿದ್ದಾರೆ. ಕುಂಬ್ಳೆ ಅವರು ಈ ಮಾತನ್ನು ಹೇಳಲು ಕೂಡ ಒಂದು ಕಾಣವಿದೆ.

ಕುಂಬ್ಳೆ ಭಾರತ ತಂಡದ ಕೋಚ್​ ಆದ ಸಂದರ್ಭದಲ್ಲಿ ಆಟಗಾರರ ಎಲ್ಲ ಪಾರ್ಟಿಗಳಿಗೆ ಕಡಿವಾಣ ಹಾಕಿದ್ದರು. ಹೀಗಾಗಿ ಆಟಗಾರರಿಗೆ ಕುಂಬ್ಳೆ ಜತೆ ಮನಸ್ತಾಪ ಉಂಟಾಗಿತ್ತು. ಬಳಿಕ ಕುಂಬ್ಳೆ ಅವರು ಅರ್ಧದಿಂದಲೇ ತಮ್ಮ ಕೋಚ್​ ಹುದ್ದೆಯನ್ನು ತೊರೆದಿದ್ದರು. ಗಂಭೀರ್​ ಕೂಡ ನೇರ ನುಡಿ ಮತ್ತು ತಂಡದ ಯಶಸ್ಸಿಗಾಗಿ ಕೆಲ ಕಠಿಣ ನಿರ್ಧಾರ ಕೈಗೊಳ್ಳುವ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಕುಂಬ್ಳೆ ಅವರು ಗಂಭೀರ್​ಗೆ ಕೋಚ್​ ಆಗುವ ಮುನ್ನವೇ ಸಲಹೆಯೊಂದನ್ನು ನೀಡಿದಂತಿದೆ.

ಇದನ್ನೂ ಓದಿ Gautam Gambhir: ಗೌತಮ್​ ಗಂಭೀರ್​ ಭಾರತದ ಮುಂದಿನ ಕೋಚ್​; ಅಧಿಕೃತ ಘೋಷಣೆಯೊಂದೇ ಬಾಕಿ

ದ್ರಾವಿಡ್​ ಕೋಚಿಂಗ್​ ಬಗ್ಗೆ ಮಾತನಾಡಿದ ಕುಂಬ್ಳೆ, “ದ್ರಾವಿಡ್​ ತಮ್ಮ ಕೋಚಿಂಗ್​ ಅವಧಿಯಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ವಿಶ್ವಕಪ್​ ಗೆಲ್ಲದಿದ್ದರೂ ಕೂಡ ತಂಡದ ಪ್ರದರ್ಶನ ಮಾತ್ರ ಅದ್ಭುತವಾಗಿತ್ತು. ಫೈನಲ್​ ತನಕ ಬಂದ ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಬ್ಯಾಟಿಂಗ್​, ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ದ್ರಾವಿಡ್​ ಉತ್ತಮ ಆಟಗಾರರನ್ನು ಸಂಘಟಿಸಿ ಗುಣಮಟ್ಟದ ಕ್ರಿಕೆಟ್​ ಆಡುವಂತೆ ಮಾಡಿದ್ದಾರೆ” ಎಂದು ದ್ರಾವಿಡ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗಂಗೂಲಿ ಕೂಡ ಸಾಥ್​

ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ(Sourav Ganguly) ಕೂಡ ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ಕೋಚ್​ ಆದರೆ ಉತ್ತಮ ಎಂದಿದ್ದಾರೆ. ‘ಗಂಭೀರ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೆ, ನನ್ನ ಬೆಂಬಲವಿದೆ. ಅವರು ಈ ಹುದ್ದಗೆ ಸೂಕ್ತ ಅಭ್ಯರ್ಥಿ’ ಎಂದು ಹೇಳುವ ಮೂಲಕ ಗಂಭೀರ್​ಗೆ ಬೆಂಬಲ ಸೂಚಿಸಿದ್ದಾರೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

Exit mobile version