Site icon Vistara News

India Cricket Schedule | ಐಪಿಎಲ್​ಗೂ ಮುನ್ನ 19 ಪಂದ್ಯಗಳನ್ನಾಡಲಿದೆ ಟೀಮ್​ ಇಂಡಿಯಾ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

team india

ನವದೆಹಲಿ: ಸದ್ಯ ಟೀಮ್​ ಇಂಡಿಯಾ ಬಾಂಗ್ಲಾದೇಶ ಪ್ರವಾಸದಲ್ಲಿದ್ದು ಈಗಾಗಲೇ ಏಕದಿನ ಸರಣಿಯಲ್ಲಿ ಸೋಲು ಕಂಡಿದೆ. ಈ ಮಧ್ಯೆ ಬಿಸಿಸಿಐ ಭಾರತ ಮುಂದಿನ ವರ್ಷ ಐಪಿಎಲ್​ಗೂ ಮುನ್ನ ತವರಿನಲ್ಲಿ ಆಡುವ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಗುರುವಾರ ಈ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಇದರ ಪ್ರಕಾರ ಭಾರತ ತಂಡ ಐಪಿಎಲ್​ಗೂ ಮುನ್ನ ಶ್ರೀಲಂಕಾ, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಸರಣಿಯನ್ನಾಡಲಿದೆ. 2023ರ ಜನವರಿ ಮೊದಲ ವಾರದಿಂದಲೇ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ.

ಈ ವೇಳಾಪಟ್ಟಿಯ ಪ್ರಕಾರ ಟೀಮ್​ ಇಂಡಿಯಾ ಐಪಿಎಲ್ ಆರಂಭಕ್ಕೂ ಮುನ್ನ ಒಟ್ಟಾರೆ ತವರಿನಲ್ಲಿ 19 ಪಂದ್ಯಗಳನ್ನು ಆಡಲಿದೆ. ಮೊದಲು ಶ್ರೀಲಂಕಾದ ಸವಾಲನ್ನು ಎದುರಿಸಿದ ಬಳಿಕ, ಟೀಂ ಇಂಡಿಯಾ ನ್ಯೂಜಿಲ್ಯಾಂಡ್​ ವಿರುದ್ಧ 3 ಏಕ ದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ. ಇದರ ನಂತರ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾದೊಂದಿಗೆ 4 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳ ಸರಣಿಗಳನ್ನು ಆಡಲಿದೆ.

ಭಾರತದ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ

ಶ್ರೀಲಂಕಾ​ ವಿರುದ್ಧದ ಸರಣಿ ವೇಳಾಪಟ್ಟಿ

ದಿನಾಂಕಪಂದ್ಯಸ್ಥಳ
03-01-2023ಮೊದಲ ಟಿ20ಮುಂಬೈ
05-01-2023ದ್ವಿತೀಯ ಟಿ20ಪುಣೆ
07-01-2023ತೃತೀಯ ಟಿ20ರಾಜ್​ಕೋಟ್
10-01-2023ಮೊದಲ ಏಕದಿನಗುವಾಹಟಿ
12-01-2023ದ್ವಿತೀಯ ಏಕದಿನಕೋಲ್ಕತಾ
15-01-2023ತೃತೀಯ ಏಕದಿನತಿರುವನಂತಪುರಂ

ನ್ಯೂಜಿಲ್ಯಾಂಡ್ ವಿರುದ್ಧದ ಸರಣಿ ವೇಳಾಪಟ್ಟಿ

ದಿನಾಂಕಪಂದ್ಯಸ್ಥಳ
18-01-2023ಮೊದಲ ಏಕದಿನಹೈದರಾಬಾದ್
21-01-2023ದ್ವಿತೀಯ ಏಕದಿನರಾಯ್‌ಪುರ
24-01-2023ತೃತೀಯ ಏಕದಿನಇಂದೋರ್
27-01-2023ಮೊದಲ ಟಿ20ರಾಂಚಿ
29-01-2023ದ್ವಿತೀಯ ಟಿ20ಲಕ್ನೋ
01-02-2023ತೃತೀಯ ಟಿ20ಅಹಮದಾಬಾದ್

ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳಾಪಟ್ಟಿ

ದಿನಾಂಕಪಂದ್ಯಸ್ಥಳ
ಫೆ. 9ರಿಂದ ಫೆ. 13ಮೊದಲ ಟೆಸ್ಟ್ನಾಗ್ಪುರ
ಫೆ. 17ರಿಂದ ಫೆ. 21ದ್ವಿತೀಯ ಟೆಸ್ಟ್​ದೆಹಲಿ
ಮಾ. 1ರಿಂದ ಮಾ.5ತೃತೀಯ ಟೆಸ್ಟ್​ಧರ್ಮಶಾಲಾ
ಮಾ. 9ರಿಂದ ಮಾ.13ನಾಲ್ಕನೇ ಟೆಸ್ಟ್ಅಹಮದಾಬಾದ್
ಮಾರ್ಚ್​ 17ಮೊದಲ ಏಕದಿನಮುಂಬೈ
ಮಾರ್ಚ್​ 19ದ್ವಿತೀಯ ಏಕದಿನವಿಶಾಖಪಟ್ಟಣ
ಮಾರ್ಚ್​ 22ತೃತೀಯ ಏಕದಿನಚೆನ್ನೈ

ಇದನ್ನೂ ಓದಿ | BCCI MEETING | ಬಾಂಗ್ಲಾ ವಿರುದ್ಧದ ಸರಣಿ ಸೋಲಿನ ಬಳಿಕ ದಿಢೀರ್​ ಸಭೆ ನಡೆಸಲು ಮುಂದಾದ ಬಿಸಿಸಿಐ

Exit mobile version