Site icon Vistara News

India Head Coach: ಗಂಭೀರ್‌ ಕೋಚ್​ ಆಗುವುದು ಬಹುತೇಕ ಖಚಿತ; ಕುತೂಹಲ ಮೂಡಿಸಿದ ಜಯ್‌ ಶಾ ಭೇಟಿ

India Head Coach

India Head Coach: Gautam Gambhir Meets Jay Shah After IPL Final. Internet On Overdrive With India Coach Speculation

ಮುಂಬಯಿ: ಭಾರತ ತಂಡದ ಕೋಚ್(India Head Coach)​ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಅಂತಿಮ ದಿನವಾಗಿತ್ತು. ಸದ್ಯ ಯಾರೆಲ್ಲ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ ಇದೀಗ, ಕೆಕೆಆರ್​ ಮೆಂಟರ್​, ಟೀಮ್​ ಇಂಡಿಯಾದ ಮಾಜಿ ಆಟಗಾರ ಗೌತಮ್​ ಗಂಭೀರ್​(Gautam Gambhir) ಜತೆ ಬಿಸಿಸಿಐ(BCCI) ಕಾರ್ಯದರ್ಶಿ ಜಯ್​ ಶಾ(Jay Shah) ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದು ಕೋಚ್​ ಹುದ್ದೆಯ ಬಗ್ಗೆಯೇ ನಡೆದಿರುವ ಚರ್ಚೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ಗೌತಮ್ ಗಂಭೀರ್ ಅವರು ತಾನು ಭಾರತದ ಮುಖ್ಯ ಕೋಚ್ ಆಗಲು ಉತ್ಸುಕನಾಗಿದ್ದೇನೆ. ಆದರೆ, ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಭರ್ತಿ ಮಾಡುವ ಮುನ್ನ ‘ಒಂದು ಷರತ್ತು’ ಇದೆ, ‘ಆಯ್ಕೆಯ ಗ್ಯಾರಂಟಿ’ ನೀಡಿದರೆ ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದೇನೆ ಎಂದಿದ್ದರು. ಇದೀಗ ಜಯ್​ ಶಾ ಅವರು ಗಂಭೀರ್​ಗೆ ಗ್ಯಾರಂಟಿ ನೀಡಿದಂತಿದೆ.

ಗಂಭೀರ್​ ಅವರು ಈ ಬಾರಿಯ ಐಪಿಎಲ್​ ಆರಂಭಕ್ಕೂ ಮುನ್ನವೇ, ತಮ್ಮ ತಂಡದ ನಾಯಕ ಮೇ 26ರಂದು ನಡೆಯುವ ಫೈನಲ್​ ಪಂದ್ಯವ ವೇಳೆ ಟಾಸ್​ಗೆ ಸಿದ್ಧರಾಗಿರಬೇಕು ಎಂದು ಹೇಳಿದ್ದರು. ಅದರಂತೆ ಕೆಕೆಆರ್​ ಫೈನಲ್​ ಪ್ರವೇಶಿಸಿ ಕಪ್​ ಕೂಡ ಗೆದ್ದಿತು. ಗಂಭೀರ್​ ತಂಡವನ್ನು ಸಿದ್ಧಪಡಿಸಿದ ರೀತಿ ಮತ್ತು ಕಪ್​ ಗೆಲ್ಲಲೇ ಬೇಕೆಂದು ಪಣ ತೊಟ್ಟಿದೆಲ್ಲ ಫಲ ನೀಡಿತು. ಅವರ ಈ ಸಾಧನೆ ಮತ್ತು ಹಠವನ್ನು ಸೂಕ್ಷವಾಗಿ ಗಮನಿಸಿದ ಬಿಸಿಸಿಐ ಭಾರತ ತಂಡ ಕೋಚ್​ ಹುದ್ದೆ ನೀಡುವ ಯೋಜನೆಯಲ್ಲಿದೆ. ಇನ್ನೊಂದು ಮೂಲಗಳ ಪ್ರಕಾರ ಗಂಭೀರ್​ ಕೋಚ್​ ಆಗುವ ದೃಷ್ಟಿಯಿಂದಲೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎನ್ನಲಾಗಿದೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ India Head Coach: ಕೋಚ್​ ಹುದ್ದೆಗೆ ನಾನು ರೆಡಿ; ಆದರೆ ಒಂದು ಷರತ್ತು ಎಂದ ಗಂಭೀರ್​

ಆಸ್ಟ್ರೇಲಿಯಾದ ಮಾಜಿ ಆಟಗಾರರು ಭಾರತ ತಂಡದ ಕೋಚ್​ ಹುದ್ದೆಯ ಬಗ್ಗೆ ನಿರಾಸಕ್ತಿಕ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಈ ಎಲ್ಲ ಹೇಳಿಕೆಗೆ ತಿರುಗೇಟು ನೀಡಿದ್ದರು. ಭಾರತೀಯ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ನಾವು ಯಾವುದೇ ಆಸ್ಟ್ರೇಲಿಯಾದವರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

Exit mobile version