ರಾಂಚಿ: ಭಾರತ ಮತ್ತು ನ್ಯೂಜಿಲ್ಯಾಂಡ್(IND VS NZ) ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತಂಡಗಳ ಈ ಮುಖಾಮುಖಿ ಇಂದು(ಶುಕ್ರವಾರ ಜ.27) ರಾಂಚಿಯಲ್ಲಿ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಇದಕ್ಕೂ ಮುನ್ನ ಉಭಯ ತಂಡಗಳ ರೆಕಾರ್ಡ್ನ ಮಾಹಿತಿ ಇಂತಿದೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಇದುವರೆ ಟಿ20 ಕ್ರಿಕಟ್ನಲ್ಲಿ 22 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಕಿವೀಸ್ 9 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಟೈಗೊಂಡಿದೆ. ಹೀಗಾಗಿ ಬಲಾಬಲದಲ್ಲಿ ಭಾರತ ಮುಂದಿದೆ. ಆದರೂ ಕಿವೀಸ್ ಸವಾಲನ್ನು ಕಡೆಗಣಿಸುವಂತಿಲ್ಲ.
ಇದನ್ನೂ ಓದಿ IND VS NZ: ಮೊದಲ ಟಿ20; ಭಾರತದ ಇನಿಂಗ್ಸ್ ಆರಂಭಿಕರನ್ನು ಹೆಸರಿಸಿದ ಹಾರ್ದಿಕ್ ಪಾಂಡ್ಯ!
ರಾಂಚಿಯಲ್ಲಿ ಭಾರತ ಅಜೇಯ
ರಾಂಚಿಯ ಜೆಎಸ್ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತ ತಂಡ ಇದುವರೆಗೆ ಮೂರು ಟಿ20 ಪಂದ್ಯಗಳನ್ನಾಡಿದೆ. ಆಡಿದ ಮೂರೂ ಪಂದ್ಯಗಳಲ್ಲಿಯೂ ಭಾರತ ಮೇಲುಗೈ ಸಾಧಿಸಿದೆ. ಇದರಲ್ಲಿ ಒಂದು ಪಂದ್ಯ ಕಿವೀಸ್ ವಿರುದ್ಧವೇ ಗೆದ್ದಿದೆ. ಆದರೆ ಈ ಬಾರಿ ಭಾರತ ತಂಡದಲ್ಲಿ ಹಿರಿಯ, ಅನುಭವಿ ಆಟಗಾರರಿಲ್ಲ. ಹೀಗಾಗಿ ಈ ಬಾರಿ ಹಾರ್ದಿಕ್ ಪಾಂಡ್ಯ(Hardik Pandya) ಸಾರಥ್ಯದ ಯಂಗ್ ಟೀಮ್ ಇಂಡಿಯಾ ಕಿವೀಸ್ ಸವಾಲನ್ನು ಸಮರ್ಥವಾಗಿ ಎದುರಿಸೀತೇ ಎನ್ನುವುದು ಈ ಪಂದ್ಯದ ಕೌತುಕ.