Site icon Vistara News

ind vs sl : ಭಾರತ ಬ್ಯಾಟರ್​ಗಳು ಈ ರೀತಿ ಆಲ್ಔಟ್ ಆಗಿರುವುದು ಇದೇ ಮೊದಲು

KL Rahul

ಕೊಲೊಂಬೊ: ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸೂಪರ್ 4 ಪಂದ್ಯದಲ್ಲಿ ಭಾರತವನ್ನು 213 ರನ್​ಗಳಿಗೆ ಆಲೌಟ್ ಮಾಡುವ ಮೂಲಕ ಶ್ರೀಲಂಕಾ (ind vs sl) ಏಷ್ಯಾ ಕಪ್ 2023 (Asia Cup 2023) ರಲ್ಲಿ ಇತಿಹಾಸ ನಿರ್ಮಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ತಂಡ ರೋಹಿತ್ ಶರ್ಮಾ (Rohit Sharma) ಮತ್ತು ಶುಭ್​​ಮನ್​ ಗಿಲ್ (Shubhman Gill) ಅವರ ಬ್ಯಾಟಿಂಗ್​ ಮೂಲಕ ಉತ್ತಮ ಆರಂಭ ಪಡೆಯಿತು. ಆದರೆ, ಆ ಬಳಿ ಯುವ ಬೌಲರ್​ ದುನಿತ್ ವೆಲ್ಲಾಲಗೆ ಬೌಲಿಂಗ್​ಗೆ ಕುಸಿತ ಕಂಡಿತು. 10 ಓವರ್​ಗಳಲ್ಲಿ 40 ರನ್​ಗಳಿಗೆ 5 ವಿಕೆಟ್ ಕಬಳಿಸುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 5 ವಿಕೆಟ್ ಪಡೆದ ಶ್ರೀಲಂಕಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಚರಿತ್ ಅಸಲಂಕಾ 18 ರನ್ ನೀಡಿ 4 ವಿಕೆಟ್ ಪಡೆದರೆ, ಮಹೇಶ್ ತೀಕ್ಷಣಾ (41ಕ್ಕೆ 1 ವಿಕೆಟ್​ ಪಡೆದರು) ಅಕ್ಷರ್ ಪಟೇಲ್ ಅವರನ್ನು ಔಟ್ ಮಾಡುವ ಮೂಲಕ ಭಾರತ 49.1 ಓವರ್​ಗಳಲ್ಲಿ ಭಾರತ 213 ರನ್​ಗಳಿಗೆ ಆಲೌಟ್ ಆಯಿತು.

ಎಲ್ಲ ವಿಕೆಟ್​ ಸ್ಪಿನ್​ ಬೌಲಿಂಗ್​ಗೆ

ಅಕ್ಷರ್ ಪಟೇಲ್​ ಕೊನೆಯಲ್ಲಿ ಮಹೀಶ್​ ತೀಕ್ಷಣ ಎಸೆತಕ್ಕೆ ಔಟಾಗುವ ಮೂಲಕ ಭಾರತ ತಂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತನ್ನ ಎಲ್ಲಾ 10 ವಿಕೆಟ್​ಗಳನ್ನು ಸ್ಪಿನ್ ಬೌಲರ್​ಗಳಿಎ ಕಳೆದುಕೊಂಡು ಇತಿಹಾಸ ಸೃಷ್ಟಿಸಿತು. ವೆಲ್ಲಾಲಗೆ, ಅಸಲಂಕಾ ಮತ್ತು ದೀಕ್ಷಾ ಎಲ್ಲರೂ ಆಫ್-ಸ್ಪಿನ್ನರ್​ಗಳು. ಈ ಮೂಲಕ ಭಾರತ ಕಳಪೆ ದಾಖಲೆಯೊಂದಕ್ಕೆ ಒಳಗಾಯಿತು. 1997ರಲ್ಲಿ ಇದೇ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಭಾರತ 9 ವಿಕೆಟ್ ಕಳೆದುಕೊಂಡಿತ್ತು. ಇದೀಗ 10 ವಿಕೆಟ್​ ನಷ್ಟ ಮಾಡಿಕೊಂಡಿತು.

ಒಟ್ಟಾರೆಯಾಗಿ, ಸ್ಪಿನ್ನರ್​ಗಳು ಏಕದಿನ ಪಂದ್ಯದಲ್ಲಿ ಎಲ್ಲಾ 10 ವಿಕೆಟ್​ಗಳನ್ನು ಪಡೆದಿರುವುದು ಇದು 10 ನೇ ಬಾರಿ. 2001ರಲ್ಲಿ ಇದೇ ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ನರ್​​ಗಳು ಈ ಸಾಧನೆ ಮಾಡಿದ್ದರು.

ವೆಲ್ಲಾಲಗೆ ಬೌಲಿಂಗ್​ ಅಬ್ಬರ

ರೋಹಿತ್ ಶರ್ಮಾ, ಶುಭ್​ಮನ್​ ಗಿಲ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರ ವಿಕೆಟ್​ಗಳನ್ನು ಪಡೆದ ವೆಲ್ಲಾಲಗೆ ಅವರು ಭಾರತೀಯ ಬ್ಯಾಟಿಂಗ್ ಬಲವನ್ನು ಕುಗ್ಗಿಸಿದರು.

ಪಂದ್ಯದ ಬಳಿಕ ಮಾತನಾಡಿದ ಅವರು “ನನ್ನ ತರಬೇತುದಾರರು ಮತ್ತು ಮ್ಯಾನೇಜ್ಮೆಂಟ್​ಗೆ ವಿಶೇಷವಾಗಿ ನನ್ನ ಸ್ಪಿನ್ ಬೌಲಿಂಗ್ ಕೋಚ್​ಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ನನ್ನ ಸಾಮಾನ್ಯ ಬೌಲಿಂಗ್​ ಎಸೆಯಲು ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.

ನನ್ನ ಕನಸಿನ ವಿಕೆಟ್ ಕೊಹ್ಲಿಯ ವಿಕೆಟ್ ಆಗಿತ್ತು. ಅದು ಸುಲಭವಲ್ಲ. ಆದರೂ ವಿಕೆಟ್​ ಪಡೆದುಕೊಂಡೆವು ಎಂದು ಅವರು ಹೇಳಿದ್ದಾರೆ.

Exit mobile version