Site icon Vistara News

Test ranking: ಟೆಸ್ಟ್​ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಳೆದುಕೊಂಡ ಟೀಮ್​ ಇಂಡಿಯಾ

India Lose World No 1 Spot In Tests

ದುಬೈ: ವರ್ಷಾರಂಭದಲ್ಲಿ ಟೆಸ್ಟ್​ ಪಂದ್ಯ ಗೆದ್ದು ಶುಭಾರಂಭ ಕಂಡರೂ ಟೆಸ್ಟ್​ ಶ್ರೇಯಾಂಕದಲ್ಲಿ(Test ranking) ಭಾರತಕ್ಕೆ(Team India) ಹಿನ್ನಡೆಯಾಗಿದೆ. ಸರಿ ಸುಮಾರು ಏಳು ತಿಂಗಳಿನಿಂದ ಅಗ್ರಸ್ಥಾನದಲ್ಲಿದ್ದ ಭಾರತ ಒಂದು ಸ್ಥಾನದ ಕುಸಿತ ಕಂಡು ದ್ವಿತೀಯ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದೆ. ಇದು ಕೂಡ ಕೇವಲ 1 ಅಂಕದ ಅಂತರದಿಂದ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್​ ಪಂದ್ಯ ಮುಕ್ತಾಯದ ಬೆನ್ನಲ್ಲೇ ಶ್ರೇಯಾಂಕಗಳನ್ನು ನವೀಕರಿಸಲಾಗಿದೆ. ಈ ಲಾಭ ಆಸ್ಟ್ರೇಲಿಯಾಕ್ಕೆ ಲಭಿಸಿತು. 118 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದರೆ, ಭಾರತ ಕೇವಲ ಒಂದು ಅಂಕದ ಅಂತರದಿಂದ ತನ್ನ ಅಗ್ರಸ್ಥಾನ ಕಳೆದುಕೊಂಡಿತು. ಸದ್ಯ ಭಾರತದ ರೇಟಿಂಗ್​ ಅಂಕ 117.

ಭಾರತಕ್ಕೆ ಮತ್ತೆ ಅಗ್ರಸ್ಥಾನಕೇರುವ ಅವಕಾಶ


ಆಸ್ಟ್ರೇಲಿಯಾ ತಂಡ ಅಗ್ರಸ್ಥಾನ ಪಡೆದರೂ ಕೂಡ ಭಾರತಕ್ಕೆ ಮತ್ತೆ ಈ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಸುವರ್ಣಾವಕಾಶವಿದೆ. ಆದರೆ, ಪ್ರಸಕ್ತ ಪಾಕಿಸ್ತಾನ ವಿರುದ್ಧದ ನಡೆಯುತ್ತಿರುವ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು ಕಾಣಬೇಕು. ಸೋತರೆ ಸಹಜವಾಗಿಯೇ ಆಸೀಸ್​ ತಂಡದ ರೇಟಿಂಗ್​ ಅಂಕ ಕುಸಿಯಲಿದೆ. ಆಗ ಭಾರತ ಅಗ್ರಸ್ಥಾನಕ್ಕೇರಲಿದೆ. ಏಕೆಂದರೆ ಇತ್ತಂಡಗಳ ಮಧ್ಯೆ ಭಾರಿ ಅಂಕದ ಅಂತರವೇನಿಲ್ಲ. ಹೀಗಾಗಿ ಇದರ ಲಾಭ ಭಾರತಕ್ಕೆ ಲಭಿಸಲಿದೆ.

ಇದನ್ನೂ ಓದಿ Joginder Sharma: ಟಿ20 ವಿಶ್ವಕಪ್​ ಹೀರೋ ಜೋಗಿಂದರ್ ವಿರುದ್ಧ ಎಫ್‌ಐಆರ್‌ ದಾಖಲು

115 ರೇಟಿಂಗ್​ ಅಂಕ ಹೊಂದಿರುವ ಇಂಗ್ಲೆಂಡ್​ ತಂಡ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ(106), ನ್ಯೂಜಿಲ್ಯಾಂಡ್​(95) ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದೆ.

​ಅಗ್ರ 5 ಸ್ಥಾನ ಪಡೆದ ತಂಡಗಳು


ಆಸ್ಟ್ರೇಲಿಯಾ- 30 ಪಂದ್ಯ (118 ರೇಟಿಂಗ್​ ಅಂಕ)

ಭಾರತ-32 ಪಂದ್ಯ (117 ರೇಟಿಂಗ್​ ಅಂಕ)

ಇಂಗ್ಲೆಂಡ್​-43 ಪಂದ್ಯ(115 ರೇಟಿಂಗ್​ ಅಂಕ)

ದಕ್ಷಿಣ ಆಫ್ರಿಕಾ-24 ಪಂದ್ಯ(106 ರೇಟಿಂಗ್​ ಅಂಕ)

ನ್ಯೂಜಿಲ್ಯಾಂಡ್​-26 ಪಂದ್ಯ(95 ರೇಟಿಂಗ್​ ಅಂಕ)

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಅಗ್ರಸ್ಥಾನ


ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯ ಮೊದಲ ಪಂದ್ಯ ಸೋತಾಗ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಅಂಕಪಟ್ಟಿಯಲ್ಲಿ(WTC 2023-25 Points Table) ಅಗ್ರಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದ್ದ ಭಾರತ, ಇದೀಗ ದ್ವಿತೀಯ ಪಂದ್ಯದಲ್ಲಿ ಗೆಲುವು ಸಾಧಿಸಿ 6ನೇ ಸ್ಥಾನದಿಂದ ಮತ್ತೆ ಅಗ್ರಸ್ಥಾನಕ್ಕೆ ಜಿಗಿದಿದೆ. ಅಗ್ರಸ್ಥಾನದಲ್ಲಿದ ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನಕ್ಕೆ ಜಾರಿದೆ.

​ಭಾರತ ತಂಡ ಸದ್ಯ ಈ ಗೆಲುವಿನಿಂದಾಗಿ ಆಡಿದ ಮೂರು ಟೆಸ್ಟ್​ಗಳಲ್ಲಿ ಒಂದು ಸೋಲು 2 ಗೆಲುವು ಮತ್ತು 1 ಡ್ರಾ ಸಾಧಿಸಿ ಶೇ. 54.16 ಗೆಲುವಿನ ಪ್ರತಿಶತದೊಂದಿಗ ಅಗ್ರಸ್ಥಾನ ಪಡೆದಿದೆ. ಶೇ. 50 ಗೆಲುವಿನ ಪ್ರತಿಶತ ಸಾಧಿಸಿರುವ ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ನಿಗದಿತ ಅವಧಿಯೊಳಗೆ ಓವರ್​ ಪೂರ್ಣಗೊಳಿಸಿದ ಕಾರಣಕ್ಕೆ ಭಾರತ ತಂಡಕ್ಕೆ ಐಸಿಸಿ ದಂಡ ವಿಧಿಸಿತ್ತು. ಈ ಪರಿಣಾಮ -2 ಫೆನಾಲ್ಟಿ ಅಂಕವೂ ಕೂಡ ಭಾರತಕ್ಕೆ ಸಿಕ್ಕಿದೆ.

Exit mobile version