ರಾಂಚಿ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲು ಟೀಮ್ ಇಂಡಿಯಾ ಸಜ್ಜಾಗಿದೆ. ಇತ್ತಂಡಗಳ ಮೊದಲ ಮುಖಾಮುಖಿ ರಾಂಚಿಯಲ್ಲಿ(IND vs NZ 1st T20) ಶುಕ್ರವಾರ ನಡೆಯಲಿದೆ. ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಆಡುವ ಸಂಭಾವ್ಯ ತಂಡಗಳ ವಿವರ ಇಂತಿದೆ.
ಪಿಚ್ ರಿಪೋರ್ಟ್
ರಾಂಚಿಯ ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಪಿಚ್ನಲ್ಲಿ ಹೆಚ್ಚಾಗಿ ದೊಡ್ಡ ಮೊತ್ತ ದಾಖಲಾಗಿಲ್ಲ. ಮೈದಾನ ದೊಡ್ಡದಾಗಿರುವ ಕಾರಣ ಇಲ್ಲಿ ಸಿಕ್ಸರ್, ಬೌಂಡರಿ ಬಾರಿಸುವುದು ಅಷ್ಟು ಸುಲಭವಲ್ಲ. ಇಲ್ಲಿ 28 ಟಿ20 ಪಂದ್ಯಗಳು ನಡೆದಿದೆ. ಆದರೆ ಒಮ್ಮೆ ಮಾತ್ರ 200 ರನ್ ದಾಖಲಾಗಿದೆ. ಈ ಪಿಚ್ ಸ್ಪಿನ್ ಬೌಲರ್ಗಳಿಗೆ ಹೆಚ್ಚಿನ ನರೆವು ನೀಡಲಿದೆ. ಪಿಚ್ನಲ್ಲಿ ಹುಲ್ಲಿನ ಪ್ರಮಾಣ ಅಧಿಕ ಇರುವುದರಿಂದ ಚೆಂಡು ಹೆಚ್ಚು ತಿರುವು ಪಡೆಯುತ್ತದೆ. ಹೀಗಾಗಿ ಉಭಯ ತಂಡಗಳು ಹೆಚ್ಚು ಸ್ಪಿನ್ ಅಸ್ತ್ರವನ್ನು ಬಳಸಬಹುದು.
ಇಬ್ಬನಿ ಸಮಸ್ಯೆಯೂ ಕಾಡುವುದರಿಂದ ಚೇಸಿಂಗ್ ನಡೆಸುವ ತಂಡಕ್ಕೆ ಹೆಚ್ಚಿನ ಲಾಭವಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಇದೆ. ಸುಮಾರು 2 ವರ್ಷಗಳ ಬಳಿಕ ಇಲ್ಲಿ ನಡೆಯತ್ತಿರುವ ಈ ಪಂದ್ಯವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಸಂಭಾವ್ಯ ತಂಡ
ಭಾರತ: ಹಾರ್ದಿಕ್ ಪಾಂಡ್ಯ(ನಾಯಕ), ಇಶಾನ್ ಕಿಶನ್, ಶುಭಮನ್ ಗಿಲ್/ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ
ನ್ಯೂಜಿಲ್ಯಾಂಡ್: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್/ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗ್ಯೂಸನ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್.
ಇದನ್ನೂ ಓದಿ | IND vs NZ 1st T20: ರಾಂಚಿಯಲ್ಲಿ ಟೀಮ್ ಇಂಡಿಯಾದ ಟಿ20 ರೆಕಾರ್ಡ್ ಹೇಗಿದೆ?