Site icon Vistara News

INDvsNZ | ಭಾರತ- ನ್ಯೂಜಿಲೆಂಡ್ ಪಂದ್ಯದ ಪಿಚ್‌ ರಿಪೋರ್ಟ್‌, ಪಂದ್ಯದ ಸಮಯ ಇಲ್ಲಿದೆ

indvsnz

ನೇಪಿಯರ್‌ : ಪ್ರವಾಸಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವಿನ ಟಿ೨೦ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಮಂಗಳವಾರ ಮಧ್ಯಾಹ್ನ ಆಯೋಜನೆಗೊಂಡಿದೆ. ಈ ಪಂದ್ಯ ನೇಪಿಯರ್‌ನ ಮೆಕ್‌ಲೀನ್‌ ಪಾರ್ಕ್‌ ಸ್ಟೇಡಿಯಮ್‌ನಲ್ಲಿ ನಡೆಯುತ್ತಿದ್ದು, ಹಾರ್ದಿಕ್‌ ಪಾಂಡ್ಯ ನೇತೃತ್ವದ ಟೀಮ್‌ ಇಂಡಿಯಾ ಸರಣಿ ಗೆಲುವಿಗಾಗಿ ಎದುರು ನೋಡುತ್ತಿದೆ.

ಪಂದ್ಯ ನಡೆಯುವ ಮೆಕ್‌ಲೀನ್‌ ಪಿಚ್‌ ಬ್ಯಾಟಿಂಗ್‌ಗೆ ಪೂರಕವಾಗಿದ್ದು ಇತ್ತಂಡಗಳೂ ಭರ್ಜರಿ ಬ್ಯಾಟ್‌ ಬೀಸಲು ಸಜ್ಜಾಗಿದೆ. ಪ್ರಮುಖವಾಗಿ ಹೊಡೆಬಡಿಯ ದಾಂಡಿಗರಿಗೆ ಈ ಸ್ಟೇಡಿಯಮ್‌ ಸಾಕಷ್ಟು ನೆರವಾಗುತ್ತದೆ. ಇಂಗ್ಲೆಂಡ್‌ ತಂಡವು ೨೦೧೯ರಲ್ಲಿ ಗರಿಷ್ಠ ೨೪೧ ರನ್‌ಗಳನ್ನು ಬಾರಿಸಿದೆ. ಅಂತೆಯೇ ಹಲವು ಬಾರಿ ಈ ಪಿಚ್‌ ಬ್ಯಾಟಿಂಗ್‌ಗೆ ಪೂರಕವಾಗಿದೆ ಎಂಬುದನ್ನು ಸಾಬೀತುಮಾಡಿದೆ. ಮಳೆಯಿಂದಾಗಿ ಈ ಸ್ಟೇಡಿಯಮ್‌ನಲ್ಲಿ ಇದಕ್ಕಿಂತ ಹಿಂದೆ ನಡೆದ ಪಂದ್ಯವು ರದ್ದಾಗಿತ್ತು. ಅದಕ್ಕಿಂತ ಮೊದಲು ನಡೆದ ನಾಲ್ಕು ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡವೇ ಸೋಲು ಕಂಡಿದೆ. ಹೀಗಾಗಿ ಮಂಗಳವಾರದ ಪಂದ್ಯದಲ್ಲಿ ಟಾಸ್‌ ಗೆದ್ದ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಸೋಮವಾರ ನೇಪಿಯರ್‌ನಲ್ಲಿ ಶುಭ್ರ ಆಕಾಶವಿತ್ತು. ಅಂತೆಯೇ ಮಂಗಳವಾರವೂ ಅದೇ ಸ್ಥಿತಿ ಮುಂದುವರಿಯಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯಕ್ಕೆ ಮಳೆಯ ಆತಂಕ ಇಲ್ಲ.

ಪಂದ್ಯದ ವಿವರ

ಸಮಯ: ಭಾರತೀಯ ಕಾಲಮಾನ ಮಧ್ಯಾಹ ೧೨ ಗಂಟೆಗೆ (ಸ್ಥಳೀಯ ಕಾಲಮಾನ ರಾತ್ರಿ ೭.೩೦ಕ್ಕೆ)

ನೇರ ಪ್ರಸಾರ: ಭಾರತದಲ್ಲಿ ಡಿಡಿ ಸ್ಪೋರ್ಟ್ಸ್‌ ಮತ್ತು ಅಮೆಜಾಜ್‌ ಪ್ರೈಮ್‌

ತಾಣ: ಮೆಕ್‌ಲೀನ್‌ ಪಾರ್ಕ್ ಸ್ಟೇಡಿಯಮ್‌ ನೇಪಿಯರ್‌

ಸಂಭಾವ್ಯ ತಂಡಗಳು

ಭಾರತ:ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌ಗಳು), ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಅರ್ಷದೀಪ್‌ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್‌ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.

ನ್ಯೂಜಿಲೆಂಡ್‌: ಟಿಮ್‌ ಸೌಥೀ(ನಾಯಕ), ಮೈಕಲ್ ಬ್ರೇಸ್‌ವೆಲ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಾಮ್, ಮಿಚೆಲ್ ಸ್ಯಾಂಟ್ನರ್, ಫಿನ್ ಆಲೆನ್, ಡೆವೋನ್ ಕಾನ್ವೆ, ಗ್ಲೆನ್ ಫಿಲಿಪ್ಸ್, ಲಾಕಿ ಫರ್ಗ್ಯೂಸನ್, ಆಡಮ್ ಮಿಲ್ನೆ, ಇಶ್ ಸೋಧಿ, ಬ್ಲೈರ್‌ ಟಿಕ್ನರ್‌. ಮಾರ್ಕ್‌ ಚಾಂಪ್ಮನ್‌.

Exit mobile version