ದುಬೈ: 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಉದಯೋನ್ಮುಖ ಆಟಗಾರ್ತಿಯನ್ನು ಗುರುತಿಸುವ ಐಸಿಸಿ ಪ್ರಶಸ್ತಿಗೆ (ICC Awards) ಭಾರತ ಮಹಿಳೆಯರ ತಂಡದ ವೇಗಿ ರೇಣುಕಾ ಸಿಂಗ್(Renuka Singh) ಭಾಜನರಾಗಿದ್ದಾರೆ.
ಈ ಪ್ರಶಸ್ತಿ ಪಟ್ಟಿಯಲ್ಲಿ ರೇಣುಕಾ ಸಿಂಗ್ ಸೇರಿ ಆಸ್ಟ್ರೇಲಿಯಾದ ಡಾರ್ಸಿ ಬ್ರೌನ್, ಇಂಗ್ಲೆಂಡ್‌ನ ಆಲಿಸ್ ಕ್ಯಾಪ್ಸೆ ಮತ್ತು ಭಾರತ ಯಾಸ್ತಿಕಾ ಭಾಟಿಯಾ ನಾಮನಿರ್ದೇಶನಗೊಂಡಿದ್ದರು. ಆದರೆ ಇವರನ್ನೆಲ್ಲ ಹಿಂದಿಕ್ಕಿ ರೇಣುಕಾ ಸಿಂಗ್ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರೇಣುಕಾ ಸಿಂಗ್ 2022 ರಲ್ಲಿ ವೈಟ್-ಬಾಲ್ ಕ್ರಿಕೆಟ್ನಲ್ಲಿ ಕೇವಲ 29 ಪಂದ್ಯಗಳನ್ನು ಆಡುವ ಮೂಲಕ 40 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 14.88 ಸರಾಸರಿಯಲ್ಲಿ 18 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಸಾಧನೆಯನ್ನು ಪರಿಗಣಿಸಿ ಐಸಿಸಿ, ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ನೀಡಿದೆ.
ಇದನ್ನೂ ಓದಿ | Suryakumar Yadav: ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಗೆದ್ದ ಸೂರ್ಯಕುಮಾರ್ ಯಾದವ್