Site icon Vistara News

Umesh Yadav: ಜಮೀನು​ ಖರೀದಿಸುವ ನೆಪದಲ್ಲಿ ಸ್ನೇಹಿತನಿಂದಲೇ ವಂಚನೆಗೆ ಒಳಗಾಗ ಟೀಮ್​ ಇಂಡಿಯಾ ವೇಗಿ!

Former cricketer says Umesh Yadav is suitable for WTC final!

ಮುಂಬಯಿ: ಭಾರತ ಕ್ರಿಕೆಟ್​ ತಂಡದ ವೇಗಿ ಉಮೇಶ್​ ಯಾದವ್(Umesh Yadav)​ ತನ್ನ ಸ್ನೇಹಿತನಿಂದಲೇ ವಂಚನೆಗೆ ಒಳಗಾಗಿದ್ದಾರೆ. ಜಮೀನು​ ಖರೀದಿಸುವ ನೆಪದಲ್ಲಿ ಸ್ನೇಹಿತ ವಂಚಿಸಿದ್ದಾಗಿ ಉಮೇಶ್​ ಯಾದವ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಜಮೀನು ಖರೀದಿಸುವ ಸಲುವಾಗಿ ಉಮೇಶ್​ ಯಾದವ್​ಗೆ ಅವರ ಸ್ನೇಹಿತ ಶೈಲೇಶ್ ಠಾಕ್ರೆ 44 ಲಕ್ಷ ರೂಪಾಯಿ ವಂಚಿಸಿದ್ದಾರೆ. ಉಮೇಶ್ ಯಾದವ್ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿ ಆಯ್ಕೆಯಾದ ಬಳಿಕ, ಜುಲೈ 15, 2014 ರಂದು ತಮ್ಮ ನಿರುದ್ಯೋಗಿ ಸ್ನೇಹಿತ ಠಾಕ್ರೆ ಅವರನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು. ಅದರಂತೆ ಉಮೇಶ್ ಯಾದವ್ ಅವರ ಬ್ಯಾಂಕ್ ಖಾತೆ, ಆದಾಯ ತೆರಿಗೆ ಮತ್ತು ಇತರ ಹಣಕಾಸು ಕಾರ್ಯಗಳನ್ನು ಶೈಲೇಶ್ ನೋಡಿಕೊಳ್ಳುತ್ತಿದ್ದರು.

ಜಮೀನು ಖರೀದಿ ವಿಚಾರದಲ್ಲಿ ಮೋಸ

ಉಮೇಶ್​ ಯಾದವ್ ಅವರ ಎಲ್ಲ ಹಣಕಾಸು ವ್ಯವಹಾರವನ್ನು ನಿಷ್ಠೆಯಿಂದ ಮಾಡುತ್ತಿದ್ದ ಶೈಲೇಶ್ ಠಾಕ್ರೆ ನಾಗ್ಪುರದಲ್ಲಿ ಒಂದು ಖಾಲಿ ಜಮೀನು ಮಾರಾಟ ಮಾಡುತ್ತಿದ್ದಾರೆ. ಈ ಜಮೀನು 44 ಲಕ್ಷ ರೂ.ಗೆ ಸಿಗುತ್ತದೆ ಎಂದು ಉಮೇಶ್ ಯಾದವ್​ಗೆ ತಿಳಿಸಿದ್ದರು. ಜಮೀನು ಖರಿದಿಸಲು ಆಸಕ್ತಿ ವಹಿಸಿದ್ದ ಉಮೇಶ್ ಯಾದವ್ ಶೈಲೇಶ್ ಠಾಕ್ರೆ ಖಾತೆಗೆ 44 ಲಕ್ಷ ರೂ. ವರ್ಗಾಯಿಸಿದ್ದಾರೆ.

ಹಣ ಸಿಕ್ಕ ಬಳಿಕ ಶೈಲೇಶ್ ಠಾಕ್ರೆ ನಿವೇಶನವನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಬಳಿಕ ಈ ನಿವೇಶನವನ್ನು ವರ್ಗಾಯಿಸುವಂತೆ ಉಮೇಶ್​ ಯಾದವ್​ ಕೇಳಿಕೊಂಡಿದ್ದಾರೆ. ಈ ವೇಳೆ ಠಾಕ್ರೆ ನಿವೇಶನವನ್ನು ಹಿಂತಿರುಗಿಸಲು ನಿರಾಕರಿಸಿದ್ದಾರೆ. ಹೀಗಾಗಿ ಉಮೇಶ್​ ಯಾದವ್​ ಅವರು ಠಾಕ್ರೆ ದೂರು ನೀಡಿದ್ದಾರೆ.

ಇದೀಗ ಉಮೇಶ್ ಯಾದವ್ ನೀಡಿದ ದೂರಿನ ಮೇರೆಗೆ ಶೈಲೇಶ್ ಠಾಕ್ರೆ ವಿರುದ್ಧ ಕೊರಾಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಗಾಗಿ ಶಿಕ್ಷೆ) ಮತ್ತು 420 (ವಂಚನೆ ಮತ್ತು ಆಸ್ತಿ ಕಬಳಿಸಲು ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ | IND VS NZ | ಟಾಸ್ ಗೆದ್ದ ಬಳಿಕ ಗೊಂದಲಕ್ಕೆ ಒಳಗಾದ ನಾಯಕ ರೋಹಿತ್ ಶರ್ಮಾ; ವಿಡಿಯೊ ವೈರಲ್​

Exit mobile version