ದುಬೈ : ಸೂರ್ಯಕುಮಾರ್ ಯಾದವ್ ಯಾದವ್ (೬೮ ರನ್, ೨೬ ಎಸೆತ, ೬ ಫೋರ್, ೬ ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ವಿರಾಟ್ ಕೊಹ್ಲಿ (೫೯) ಸಂದರ್ಭೋಚಿತ ಬ್ಯಾಟಿಂಗ್ ನೆರವು ಪಡೆದ ಭಾರತ ತಂಡ ಏಷ್ಯಾ ಕಪ್‌ನ (Asia Cup ) ಎ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ೪೦ ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಹಾಲಿ ಆವೃತ್ತಿಯ ಏಷ್ಯಾ ಕಪ್‌ನ ಸೂಪರ್ ೪ ಹಂತಕ್ಕೆ ತಲುಪಿದೆ.
ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ೨ ವಿಕೆಟ್ ನಷ್ಟಕ್ಕೆ ೧೯೨ ರನ್ ಬಾರಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ ಹಾಂಕಾಂಗ್ ತಂಡ ತಮ್ಮ ಪಾಲಿನ ೨೦ ಓವರ್‌ಗಳು ಮುಕ್ತಾಯಗೊಂಡಾಗ ೫ ವಿಕೆಟ್ ನಷ್ಟಕ್ಕೆ ೧೫೨ ರನ್‌ಗಳಷ್ಟೇ ಬಾರಿಸಲು ಶಕ್ತಗೊಂಡು ಸೋಲೊಪ್ಪಿಕೊಂಡಿತು.
ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಹಾಂಕಾಂಗ್ ಪರ ಬಾಬರ್ ಹಯಾತ್ ೪೧ ರನ್ ಬಾರಿಸಿದರೆ, ಕಿಂಚಿತ್ ಸಾಹಾ ೩೦ ರನ್ ಬಾರಿಸಿದರು. ಜೀಶಾನ್ ಅಲಿ .. ರನ್ ಬಾರಿಸಿದರು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿತು. ಅನನುಭವಿ ಹಾಂಕಾಂಗ್ ತಂಡದ ಬೌಲರ್‌ಗಳ ವಿರುದ್ಧ ಭಾರತದ ಆರಂಭಿಕ ಬ್ಯಾಟರ್‌ಗಳಾದ ಕೆ. ಎಲ್ ರಾಹುಲ್ ಹಾಗೂ ರೋಹಿತ್ ಶರ್ಮ ರನ್ ಬಾರಿಸಲು ಶ್ರಮ ಪಟ್ಟರು.
ತಂಡ ೩೮ ರನ್ ಬಾರಿಸುವಷ್ಟರಲ್ಲಿ ರೋಹಿತ್ ಶರ್ಮ ವಿಕೆಟ್ ಒಪ್ಪಿಸಿದರೆ, ಕೆ. ಎಲ್ ರಾಹುಲ್ ೩೯ ಎಸೆತಗಳಲ್ಲಿ ೩೯ ರನ್ ಬಾರಿಸಿ ತಂಡದ ಮೊತ್ತ ೯೪ ಆಗುವಷ್ಟರಲ್ಲಿ ಔಟಾಗಿ ನಡೆದರು. ಬಳಿಕ ಬಂದ ಸೂರ್ಯಕುಮಾರ್ ಯಾದವ್ ೬ ಸಿಕ್ಸರ್ ಹಾಗೂ ಅಷ್ಟೇ ಸಂಖ್ಯೆ ಫೋರ್‌ಗಳ ಮೂಲಕ ೨೬ ಎಸೆತಗಳಲ್ಲಿ ೬೮ ರನ್ ಬಾರಿಸಿ ಭಾರತ ತಂಡದ ಒಟ್ಟು ಮೊತ್ತ ಹೆಚ್ಚಾಗುವಂತೆ ನೋಡಿಕೊಂಡರು.
ಸ್ಕೋರ್ ವಿವರ
ಭಾರತ ೨೦ ಓವರ್‌ಗಳಲ್ಲಿ ೨ ವಿಕೆಟ್‌ಗೆ ೧೯೨ ( ಸೂರ್ಯಕುಮಾರ್ ಯಾದವ್ ೬೮*, ವಿರಾಟ್ ಕೊಹ್ಲಿ ೫೯*, ಕೆ. ಎಲ್ ರಾಹುಲ್ ೩೬, ರೋಹಿತ್ ಶರ್ಮ ೨೧; ಮೊಹಮ್ಮದ್ ಗಜಾನಫರ್ ೧೯ಕ್ಕೆ೧).
ಹಾಂಕಾಂಗ್ : ೨೦ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೫೨ (ಬಾಬರ್ ಹಯಾತ್ ೪೧, ಕಿಂಚಿತ್ ಸೇನ್ ೩೦, ಜೀಶಾನ್ ಅಲಿ ೨೬*: ರವೀಂದ್ರ ಜಡೇಜಾ ೧೫ ರನ್‌ಗಳಿಗೆ ೧ ವಿಕೆಟ್)