Site icon Vistara News

ICC World Cup 2023 : 9 ಬೌಲರ್​ಗಳನ್ನು ಬಳಸಿ ನೂತನ ಮೈಲುಗಲ್ಲು ಸ್ಥಾಪಿಸಿದ ಭಾರತ

Team india bowling

ಬೆಂಗಳೂರು: ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವ ಕಪ್​ ಪಂದ್ಯದಲ್ಲಿ ಭಾರತ ತಂಡದ 9 ಆಟಗಾರರು ಬೌಲಿಂಗ್ ಮಾಡುವ ಮೂಲಕ ಭಾರತ ತಂಡದ ಪರ ಹೊಸ ಸಾಧನೆ ಮಾಡಿದರು. ವಿಶ್ವ ಕಪ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡದ ಪರವಾಗಿ ಇಷ್ಟೊಂದು ಬೌಲರ್​ಗಳನ್ನು ಬಳಸಿದ ಮೊದಲ ಪಂದ್ಯ ಎಂಬ ಖ್ಯಾತಿ ಪಡೆಯಿತು. ವಿಕೆಟ್ ಕೀಪರ್ ಕೆ. ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಇಬ್ಬರನ್ನು ಹೊರತುಪಡಿಸಿ ಭಾರತ ತಂಡ ಉಳಿದೆಲ್ಲರೂ ಬೌಲಿಂಗ್ ಮಾಡಿದರು. ಗಮನಾರ್ಹವಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ತಲಾ ಒಂದು ವಿಕೆಟ್ ಕೂಡ ಉರುಳಿಸಿದರು.

ಭಾರತದ ವಿಶ್ವ ಕಪ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ 9 ಆಟಗಾರರು ಬೌಲಿಂಗ್ ಮಾಡಿರಲಿಲ್ಲ. ಆದರೆ, ಒತ್ತಡವೇ ಇಲ್ಲದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಈ ಪ್ರಯತ್ನವನ್ನು ಮಾಡಿದರು. ಅವರು ಆರಂಭಿಕ ಬ್ಯಾಟರ್ ಶುಭ್​ಮನ್ ಗಿಲ್​ ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್ ಅವರಿಂದಲೂ ಬೌಲಿಂಗ್ ಮಾಡಿಸಿದರು. ಅವರಿಬ್ಬರು ಯಾವುದೇ ವಿಕೆಟ್​ ಪಡೆಯಲಿಲ್ಲ. ಆದರೆ, ಟೀಮ್ ಇಂಡಿಯಾದ ಪರವಾಗಿ ಹೊಸ ದಾಖಲೆ ಬರೆದರು.

ಹೆಚ್ಚುವರಿ ಬೌಲಿಂಗ್ ಆಯ್ಕೆ

ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿಕೆಟ್ ಬೌಲಿಂಗ್​ನಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡುವುದರೊಂದಿಗೆ ಭಾರತವು ನೆದರ್ಲ್ಯಾಂಡ್ಸ್ ವಿರುದ್ಧ ಹೆಚ್ಚುವರಿ ಬೌಲಿಂಗ್ ಆಯ್ಕೆಗಳೊಂದಿಗೆ ಪ್ರಯೋಗ ನಡೆಸಿತು. ಶುಭ್ಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಬೆಂಗಳೂರಿನಲ್ಲಿ ತಮ್ಮ ಬೌಲಿಂಗ್ ಸಾಮರ್ಥ್ಯ ಪ್ರದರ್ಶಿಸಿದರು. ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿದ ನಂತರ ಭಾರತವು ಡಚ್ ತಂಡವನ್ನು 250 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದಾಗ ಕೊಹ್ಲಿ ಮತ್ತು ರೋಹಿತ್ ದೀರ್ಘ ಕಾಲದ ಬಳಿಕ ವಿಕೆಟ್​ ಪಡೆದ ಖ್ಯಾತಿ ಗಿಟ್ಟಿಸಿಕೊಂಡರು. ಇದೇ ವೇಳೆ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಮೊದಲು ಹೆಚ್ಚುವರಿ ಬೌಲಿಂಗ್ ಆಯ್ಕೆಯನ್ನೂ ಭಾರತ ಪರಿಗಣಿಸಿತು.

ಕೊಹ್ಲಿ ಪಡೆದ ವಿಕೆಟ್​ಗಿಂತ ಪತ್ನಿ ಅನುಷ್ಕಾ ಸಂಭ್ರಮವೇ ಟ್ರೆಂಡ್ ಆಯಿತು

ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್​ ಕೊಹ್ಲಿ (Virat kohli ) ರನ್​ ಗಳಿಕೆ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಹೀಗಾಗಿ ಅವರನ್ನು ಕಿಂಗ್ ಕೊಹ್ಲಿ ಎಂದೇ ಕರೆಯುತ್ತಾರೆ. ಇಂಥ ಆಟಗಾರ ಬೌಲಿಂಗ್ ಮಾಡಿ ಒಂದು ವಿಕೆಟ್​ ಪಡೆದಾಗ ಅವರ ಅಭಿಮಾನಿಗಳಿಗೆ ಆಗುವ ಸಂಭ್ರಮ ಅಷ್ಟಿಷ್ಟಲ್ಲ. ಅಂತೆಯೇ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವ ಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆದಾಗ ದೊಡ್ಡ ಸಂಭ್ರಮವೇ ಕಂಡು ಬಂತು . ಅವರು ಪಡೆದ ಆ ಒಂದು ವಿಕೆಟ್​ ಭಾರತದ ಕ್ರಿಕೆಟ್​ ಅಭಿಮಾನಿಗಳ ಮನವನ್ನು ತಣಿಸಿದೆ. ಆದರೆ, ಈ ವಿಕೆಟ್​ ಬಳಿಕ ಅತ್ಯಂತ ಹೆಚ್ಚು ಸುದ್ದಿಗೆ ಗ್ರಾಸವಾಗಿದ್ದು ಅವರ ಪತ್ನಿ ಅನುಷ್ಕಾ ಶರ್ಮಾ. ಗ್ಯಾಲರಿಯಲ್ಲಿ ಕುಳಿತು ಮ್ಯಾಚ್ ನೋಡುತ್ತಿದ್ದ ಅವರು ಜೋರಾಗಿ ಚಪ್ಪಾಳೆ ತಟ್ಟಿ, ಮನದುಂಬಿ ನಗುತ್ತಾ ಸಂಭ್ರಮಿಸಿದರು. ಈ ದೃಶ್ಯ ಪಂದ್ಯದ ನೇರ ಪ್ರಸಾರದ ಕ್ಯಾಮೆರಾಗಳ ಕಣ್ಣಿಗೆ ಬಿತ್ತು. ವಿರಾಟ್​ ಪಡೆದ ವಿಕೆಟ್​ಗಿಂತ ಆ ವಿಡಿಯೊ ದೊಡ್ಡ ಸುದ್ದಿಯಾಯಿತು.

ಈ ಸುದ್ದಿಯನ್ನೂ ಓದಿ : Rohit Sharma : ನಿನಗೊಂದು ವಿಕೆಟ್​, ನನಗೊಂದು ವಿಕೆಟ್​; ರೋಹಿತ್- ಕೊಹ್ಲಿ ಹಂಚಿಕೆ ಸೂತ್ರ!

Exit mobile version