Site icon Vistara News

Rohit Sharma : ನಿನಗೊಂದು ವಿಕೆಟ್​, ನನಗೊಂದು ವಿಕೆಟ್​; ರೋಹಿತ್- ಕೊಹ್ಲಿ ಹಂಚಿಕೆ ಸೂತ್ರ!

Rohit Sharma

ಬೆಂಗಳೂರು: ವಿಶ್ವಕಪ್ 2023 ರ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಭಾರತ 10 ರನ್​ಗಳ ಸಮಗ್ರ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯ ಹೆಚ್ಚು ಗಮನ ಸೆಳೆದಿದ್ದು ಭಾರತ ತಂಡದ ಬೌಲಿಂಗ್ ಆಯ್ಕೆಗಳು. ಶ್ರೇಯಸ್ ಅಯ್ಯರ್ ಮತ್ತು ವಿಕೆಟ್​ ಕೀಪರ್ ರಾಹುಲ್ ಹೊರತುಪಡಿಸಿ ಉಳಿದ 9 ಆಟಗಾರರೂ ಬೌಲಿಂಗ್ ಮಾಡಿದರು. ಅದಕ್ಕಿಂತ ಹೆಚ್ಚಾಗಿ ವಿರಾಟ್​ ಕೊಹ್ಲಿ ಬೌಲಿಂಗ್ ಒಂದು ವಿಕೆಟ್ ಪಡೆದರೆ, ರೋಹಿತ್ ಶರ್ಮಾ (Rohit Sharma) ಕೂಡ ಒಂದು ವಿಕೆಟ್​ ಉರುಳಿಸಿದರು. ಇದು ಕ್ರಿಕೆಟ್​ ಅಭಿಮಾನಿಗಳ ಖುಷಿಗೆ ಪಾತ್ರವಾಯಿತು. ಭಾರತ ತಂಡದ ಇಬ್ಬರು ದೈತ್ಯ ಆಟಗಾರರು ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಸಂಭ್ರಮಕ್ಕೆ ಕಾರಣವಾಯಿತು.

ಭಾರತ ತಂಡದ ನಾಯಕ 48 ನೇ ಓವರ್ ಎಸೆಯಲು ಮುಂದಾದರು. ಆದರೆ ಅವರು ಬರಿಗೈಯಲ್ಲಿ ಹಿಂತಿರುಗಲಿಲ್ಲ. ರೋಹಿತ್ ಶರ್ಮಾ ತಮ್ಮ ಮೊದಲ ಓವರ್​ನ ಕೊನೆಯ ಎಸೆತದಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ನೆದರ್ಲ್ಯಾಂಡ್ಸ್ ಇನ್ನಿಂಗ್ಸ್ ಅನ್ನು ಮುಕ್ತಾಯಗೊಳಿಸಿದರು. ನೆದರ್ಲ್ಯಾಂಡ್ಸ್ ವಿರುದ್ಧ 160 ರನ್ಗಳ ಭರ್ಜರಿ ಜಯ ಸಾಧಿಸಿತು. ಅದಕ್ಕಿಂತ ಮೊದಲು ವಿರಾಟ್​ ಕೊಹ್ಲಿ ಕೈಗೆ ಚೆಂಡು ನೀಡಿದ್ದ ರೋಹಿತ್ ಶರ್ಮಾ ಅವರಿಗೂ ಒಂದು ವಿಕೆಟ್ ದೊರೆಯುವಂತೆ ಮಾಡಿದ್ದರು.

ಏಳು ವರ್ಷಗಳ ಬಳಿಕ ಬೌಲಿಂಗ್​

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತೀಯ ನಾಯಕ ಏಳು ವರ್ಷಗಳ ಅಂತರದ ನಂತರ ವಿಕೆಟ್ ಪಡೆದಿದ್ದಾರೆ. ರೋಹಿತ್ ಶರ್ಮಾ 2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ವಿಕೆಟ್ ಪಡೆದಿದ್ದರು. ಈ ಮೂಲಕ ಹಿಟ್​ಮ್ಯಾನ್​​ 4284 ದಿನಗಳ ನಂತರ ತನ್ನ ಹೆಸರಿಗೆ ಒಂದು ವಿಕೆಟ್ ಸೇರಿಸಿಕೊಂಡರು.

ಭಾರತೀಯ ನಾಯಕ ಚೆಂಡಿನೊಂದಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಮುಂದಾದ ತಕ್ಷಣ ಅಭಿಮಾನಿಗಳು ಖುಷಿಯಾದರು. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್​ಗಳಲ್ಲಿ ಸಂಭ್ರಮ ಕಂಡುಬಂತು.

ಅಭಿಮಾನಿಗಳ ಬೇಡಿಕೆಯಂತೆ ಬೌಲಿಂಗ್ ಮಾಡಿ ವಿಕೆಟ್​ ಪಡೆದ ವಿರಾಟ್!

ವಿರಾಟ್ ಕೊಹ್ಲಿಯ (Virat kohli ) ಬ್ಯಾಟಿಂಗ್ ಸಾಧನೆಗಳನ್ನು ವಿವರಿಸುವ ಅಗತ್ಯವೇ ಇಲ್ಲ. ಅವರು ಕ್ರಿಕೆಟ್​​ ದಂತಕಥೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅವರು 49 ಏಕದಿನ ಶತಕಗಳನ್ನು ಹೊಂದಿದ್ದಾರೆ ಮತ್ತು ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಏಕದಿನ ಶತಕಗಳ ದಾಖಲೆಯನ್ನು ಮುರಿಯುವ ಹೊಸ್ತಿಲಲ್ಲಿದ್ದಾರೆ. ಆದಾಗ್ಯೂ, ಅವರು ಬೌಲಿಂಗ್ ಮಾಡುವುದನ್ನು ನೋಡುವುದಕ್ಕೂ ಅಭಿಮಾನಿಗಳ ತುದಿಗಾಲಲ್ಲಿ ನಿಲ್ಲುತ್ತಾರೆ. ಅಂತೆಯೇ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡಿ ವಿಕೆಟ್ ಪಡೆದಿದ್ದಾರೆ. ವೃತ್ತಿಜೀವನದ ಆರಂಭಿಕ ಹಂತದಲ್ಲಿ ಅವರು ಕೆಲವೊಮ್ಮೆ ತಮ್ಮ ಬೌಲಿಂಗ್ ಮಾಡುತ್ತಿದ್ದರು. ಬಳಿಕ ನಿಲ್ಲಿಸಿದ್ದರು. ಇದೀಗ ಅಭಿಮಾನಿಗಳ ಒತ್ತಾಸೆ ಮೇರೆಗೆ ನಾಯಕ ರೋಹಿತ್ ಅವರಿಗೆ ಬೌಲಿಂಗ್ ನೀಡಿದ್ದಾರೆ. ಅವರು ಬೌಲಿಂಗ್ ಮಾಡಿ ನೆದರ್ಲ್ಯಾಂಡ್ಸ್ ನಾಯಕನ ವಿಕೆಟ್​ ಉರುಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Virat kohli : ಕೊಹ್ಲಿ ಪಡೆದ ವಿಕೆಟ್​ಗಿಂತ ಪತ್ನಿ ಅನುಷ್ಕಾ ಸಂಭ್ರಮವೇ ಟ್ರೆಂಡ್ ಆಯಿತು

ಏಕದಿನ ವಿಶ್ವಕಪ್ 2023ರಲ್ಲಿ ಎರಡನೇ ಬಾರಿಗೆ ಬೌಲಿಂಗ್ ಮಾಡುವ ಮೂಲಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಭಿಮಾನಿಗಳಿಗೆ ಖುಷಿ ಕೊಟ್ಟರು. ನೆದರ್ಲ್ಯಾಂಡ್ಸ್ ವಿರುದ್ಧ ಭಾರತೀಯ ನಾಯಕ ರೋಹಿತ್ ಶರ್ಮಾ ಪ್ರಯತ್ನಿಸಿದ ಬೌಲಿಂಗ್ ಆಯ್ಕೆಗಳಲ್ಲಿ ಕಿಂಗ್ ಕೊಹ್ಲಿ ಕೂಡ ಒಬ್ಬರಾದರು. ಭಾರತದ ಸ್ಟಾರ್ ಬ್ಯಾಟ್ಸ್ಮನ್ ಕೆಲವು ವಾರಗಳ ಹಿಂದೆ ನೆಟ್ಸ್​ನಲ್ಲಿ ಬೌಲಿಂಗ್ ಅಭ್ಯಾಸ ಮಾಡಿದ್ದರು.

9 ವರ್ಷಗಳ ನಂತರ ವಿಕೆಟ್​

ನೆದರ್ಲ್ಯಾಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರನ್ನು ಔಟ್ ಮಾಡುವ ಮೂಲಕ ವಿರಾಟ್ ಕೊಹ್ಲಿ ತಮ್ಮ ಬೌಲಿಂಗ್ ಶ್ರಮಕ್ಕೆ ಪ್ರತಿಫಲ ಪಡೆಯುವಲ್ಲಿ ಯಶಸ್ವಿಯಾದರು. 30 ಎಸೆತಗಳಲ್ಲಿ ಕೇವಲ 17 ರನ್ ಗಳಿಸಿದ್ದ ಎಡ್ವರ್ಡ್​ ಕೊಹ್ಲಿ ಎಸೆದ ವೈಡ್​ ಎಸೆತಕ್ಕೆ ರನ್ ಬಾರಿಸಲು ಹೋಗಿ ವಿಕೆಟ್​ ಕೀಪರ್ ರಾಹುಲ್​ಗೆ ಕ್ಯಾಚ್ ನೀಡಿದರು. ವಿರಾಟ್ ಕೊಹ್ಲಿ ಅವರ ಈ ವಿಕೆಟ್ 9 ವರ್ಷಗಳ ನಂತರ ಲಭಿಸಿದ ವಿಕೆಟ್​. ಅವರ ಕೊನೆಯ ವಿಕೆಟ್ 2014 ರಲ್ಲಿ ಬಂದಿತ್ತು. ನಿಖರವಾಗಿ ಹೇಳುವುದಾದರೆ, ಕೊಹ್ಲಿಯ ಕೊನೆಯ ವಿಕೆಟ್ ಮತ್ತು ಇತ್ತೀಚಿನ ವಿಕೆಟ್ ನಡುವಿನ ಅಂತರವು ನಿಖರವಾಗಿ 3572 ದಿನಗಳು.

Exit mobile version