Site icon Vistara News

ಭಾರತ-ದಕ್ಷಿಣ ಆಫ್ರಿಕಾ ವಿಶ್ವಕಪ್ ದಾಖಲೆ, ಪಿಚ್​ ರಿಪೋರ್ಟ್, ಸಂಭಾವ್ಯ ತಂಡ ಹೇಗಿದೆ?

eden gardens pitch

ಕೋಲ್ಕೋತಾ: ಅಜೇಯ ಭಾರತ ಮತ್ತು ದಕ್ಷಿಣ ಆಫ್ರಿಕಾ ಭಾನುವಾರದ ವಿಶ್ವಕಪ್​ನ 37ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಭಾರತ ಈಗಾಗಲೇ ಸೆಮಿಫೈನಲ್​ ಪ್ರವೇಶಿಸಿದ ಕಾರಣ ಭಾರತಕ್ಕೆ ಈ ಪಂದ್ಯ ಅಷ್ಟಾಗಿ ಮಹತ್ವ ಪಡೆದಿಲ್ಲ. ಆದರೆ ದಕ್ಷಿಣ ಆಫ್ರಿಕಾಗೆ ಸೆಮಿಗೆ ಪ್ರವೇಶ ಪಡೆಯಬೇಕಿದ್ದರೆ ಈ ಪಂದ್ಯ ಗೆಲ್ಲಲೇ ಬೇಕು. ಇತ್ತಂಡಗಳ ವಿಶ್ವಕಪ್​ ಮುಖಾಮುಖಿಯ ಕುತೂಹಲಕಾರಿ ಸಂಗತಿಯ ವಿವರ ಇಲ್ಲಿದೆ.

ಹೀಗೊಂದು ಕಾಕತಾಳಿಯ ಲೆಕ್ಕಾಚಾರ

ಭಾರತ ತಂಡ 2011ರ ವಿಶ್ವಕಪ್​ ಟೂರ್ನಿಯಲ್ಲಿಯೂ ಲೀಗ್​ನಲ್ಲಿ ಅಜೇಯ ದಾಖಲೆ ಮುಂದುವರಿಸಿ ಒಂದು ಸೋಲು ಮಾತ್ರ ಕಂಡಿತ್ತು. ಇದು ದಕ್ಷಿಣ ಆಫ್ರಿಕಾ ವಿರುದ್ಧ. ಇದೀಗ ಈ ಆವೃತ್ತಿಯ ವಿಶ್ವಕಪ್​ಕಪ್​ ಟೂರ್ನಿಯಲ್ಲೂ ಭಾರತ ಇದುವರೆಗೆ ಆಡಿದ ಎಲ್ಲ 7 ಪಂದ್ಯಗಳನ್ನು ಗೆದ್ದಿದೆ. 8ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರಾಗಿದೆ. 2011ರಂತೆ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿತೇ ಅಥವಾ ಆ ಸೋಲಿಗೆ ಸೇಡು ತೀರಿಸಿಕೊಂಡೀತೇ ಎಂದು ಕಾದು ನೋಡಬೇಕಿದೆ. ಒಂದೊಮ್ಮೆ ಸೋಲು ಕಂಡರೆ ಈ ಕಾಕತಾಳಿಯ ಲೆಕ್ಕಾಚಾರ ಮರುಕಳಿಸಿದಂತಾಗುತ್ತದೆ.

ವಿಶ್ವಕಪ್​ ಮುಖಾಮುಖಿ

ಉಭಯ ತಂಡಗಳು ವಿಶ್ವಕಪ್​ ಟೂರ್ನಿಯಲ್ಲಿ ಬಲಾಬಲದಲ್ಲಿ ದಕ್ಷಿಣ ಆಫ್ರಿಕಾವೇ ಮುಂದಿದೆ. 5 ಬಾರಿ ಮುಖಾಮುಖಿಯಾಗಿ ಮೂರಲ್ಲಿ ಗೆಲುವು ಸಾಧಿಸಿದೆ. ಭಾರತ ಗೆದ್ದಿದ್ದು 2 ಪಂದ್ಯ ಮಾತ್ರ ಅದು ಕೂಡ ಇತ್ತೀಚಿನ ವಿಶ್ವಕಪ್​ ಟೂರ್ನಿಯಲ್ಲಿ. 2015 ಮತ್ತು ಕಳೆದ 2019ರ ವಿಶ್ವಕಪ್​ನಲ್ಲಿ. ಇದಕ್ಕೂ ಮುನ್ನ ಆಡಿದ ಮೂರೂ ಪಂದ್ಯಗಳಲ್ಲಿಯೂ ಭಾರತ ಹೀನಾಯ ಸೋಲು ಕಂಡಿತ್ತು. ಇತ್ತಂಡಗಳು ಮೊದಲ ವಿಶ್ವಕಪ್​ ಪಂದ್ಯ ಆಡಿದ್ದು 1992ರಲ್ಲಿ. ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ 6 ವಿಕೆಟ್​ಗಳಿಂದ ಗೆದ್ದಿತ್ತು.

ಇದನ್ನೂ ಓದಿ World Cup Points Table: ಆಫ್ಘನ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಪಾಕಿಸ್ತಾನ

ಪಿಚ್​ ರಿಪೋರ್ಟ್​

ಈಡನ್‌ ಗಾರ್ಡನ್ಸ್‌ನ(Eden Gardens) ಪಿಚ್​ ಸೀಮರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಇಲ್ಲಿ ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚಿನ ಅವಕಾಶ ಏಕೆಂದರೆ ರಾತ್ರಿಯ ವೇಳೆ ಇಲ್ಲಿ ಇಬ್ಬಿನಿ ಸಮಸ್ಯೆ ಕಾಡಲಿದೆ. ಇದು ಬೌಲರ್​ಗಳಿಗೆ ಕಷ್ಟಕರವಾಗಲಿದೆ. ಕೈಯಲ್ಲಿ ಸರಿಯಾಗಿ ಚೆಂಡು ನಿಲ್ಲದೆ ನಿರ್ದಿಷ್ಟ ಗುರಿಗೆ ಬೌಲಿಂಗ್​ ಮಾಡಲು ಸಾಧ್ಯವಾಗುವುದಿಲ್ಲ. ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡರೆ ಉತ್ತಮ.

ಏಕದಿನ ಮುಖಾಮುಖಿ

ಇತ್ತಂಡಗಳು ಏಕದಿನ ಕ್ರಿಕೆಟ್​ನಲ್ಲಿ ಒಟ್ಟು 90 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 37 ಪಂದ್ಯ ಗೆದ್ದರೆ, ದಕ್ಷಿಣ ಆಫ್ರಿಕಾ 50 ಪಂದ್ಯಗಳು ಗೆದ್ದಿದೆ. ಮೂರು ಪಂದ್ಯಗಳು ಫಲಿತಾಂಶ ಕಂಡಿಲ್ಲ. ಈ ಬಲಾಬಲದ ಲೆಕ್ಕಾಚಾರದಲ್ಲಿಯೂ ಭಾರತಕ್ಕಿಂತ ದಕ್ಷಿಣ ಆಫ್ರಿಕಾವೇ ಮುಂದಿದೆ. ಸದ್ಯ ಉಭಯ ತಂಡಗಳು ಕೂಡ ಬಲಿಷ್ಠವಾಗಿರುವ ಕಾರಣ ಭಾನುವಾರದ ಪಂದ್ಯ ಹೈ ವೋಲ್ಟೇಜ್​ ಎಂದು ನಿರೀಕ್ಷೆ ಮಾಡಬಹುದು.

ಸಂಭಾವ್ಯ ತಂಡ

ಭಾರತ: ರೋಹಿತ್ ಶರ್ಮಾ​, ಶುಭಮನ್​ ಗಲ್​, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್​, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್​ದೀಪ್​ ಯಾದವ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್​.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಸ್ಸಿ ವಾನ್ ಡರ್​ ಡುಸೆನ್, ಐಡೆನ್ ಮಾರ್ಕ್ರಮ್, ಟೆಂಬ ಬವುಮಾ, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್​ಗಿಡಿ, ಜೆರಾಲ್ಡ್ ಕೋಟ್ಜಿ.

Exit mobile version