Site icon Vistara News

IND vs AUS: ಮುಂದಿನ ವಾರ ಆಸೀಸ್​ ಏಕದಿನ ಸರಣಿಗೆ ಭಾರತ ತಂಡ ಪ್ರಕಟ ಸಂಜುಗೆ ಮತ್ತೆ ಕೊಕ್!​

India World Cup Squad

ಮುಂಬಯಿ: ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಮುಂದಿನ ವಾರ ಭಾರತ ತಂಡ ಪ್ರಕಟಗೊಳ್ಳಿದೆ. ಈ ತಂಡದಲ್ಲಿ ವಿಶ್ವಕಪ್​ಗೆ ಆಯ್ಕೆಯಾದ ಆಟಗಾರರೇ ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ. ಸಂಜು ಸ್ಯಾಮ್ಸನ್(Sanju Samson)​ ಮತ್ತು ತಿಲಕ್​ ವರ್ಮ(Tilak Varma), ಯಜುವೇಂದ್ರ ಚಹಲ್​ ಅವರು ಆಯ್ಕೆಯಾಗುವುದು ಅನುಮಾನ ಎನ್ನಲಾಗಿದೆ.

ಉಭಯ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಸೆಪ್ಟೆಂಬರ್​ 22ರಿಂದ ಆರಂಭಗೊಳ್ಳಲಿದೆ. ಈ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಏಕದಿನ ವಿಶ್ವಕಪ್​ ಟೂರ್ನಿ(World Cup 2023) ಆರಂಭಕ್ಕೆ ಒಂದು ವಾರಗಳಿರುವಾಗ ನಡೆಯುವ ಸರಣಿ ಇದಾಗಿರುವುದರಿಂದ ಎರಡು ತಂಡಗಳಿಗೂ ಮಹತ್ವದ್ದಾಗಿದೆ. ಅಲ್ಲದೆ ಭಾರತ ಕೂಡ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕವೇ ತನ್ನ ಅಭಿಯಾನವನ್ನು ಆರಂಭಿಸಲಿದೆ. ಹೀಗಾಗಿ ಭಾರತ ತನ್ನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಈ ಸರಣಿ ಸಹಾಯವಾಗಲಿದೆ.

ಸ್ನಾಯು ಸೆಳೆತದಿಂದ ಕೆ.ಎಲ್ ರಾಹುಲ್​ ಸಂಪೂರ್ಣವಾಗಿ ಫಿಟ್ ಆಗಿದ್ದು ಏಷ್ಯಾಕಪ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅಲ್ಲದೆ ವಿಕೆಟ್​ ಕೀಪಿಂಗ್ ಕೂಡ ನಡೆಸುತ್ತಿದ್ದಾರೆ. ಬ್ಯಾಕ್​ ಅಪ್​ ಕೀಪರ್​ ಆಗಿ ಇಶಾನ್​ ಕಿಶನ್​ ಕೂಡ ಇರುವಾಗ ಸಂಜು ಅವರಿಗೆ ಅವಕಾಶ ಕಷ್ಟ ಸಾಧ್ಯ. ರಾಹುಲ್​ ಅವರು ಏಷ್ಯಾಕಪ್​ಗೆ ಮರಳಿದ ತಕ್ಷಣ ಸಂಜು ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಹೀಗಾಗಿ ಆಸೀಸ್​ ಸರಣಿಗೂ ಆಯ್ಕೆಯಾವುದು ಕಷ್ಟದ ಮಾತು.

ಅಯ್ಯರ್​ಗೆ ಅಗ್ನಿ ಪರೀಕ್ಷೆ

ಶ್ರೇಯಸ್​ ಅಯ್ಯರ್​ ಅವರಿಗೆ ಈ ಸರಣಿ ಒಂದು ಅಗ್ನಿ ಪರೀಕ್ಷೆ. ಏಕೆಂದರೆ ಅವರು ಬೆನ್ನು ನೋವಿನ ಗಾಯದಿಂದ ಬಳಲಿ 6 ತಿಂಗಳ ಬಳಿಕ ತಂಡಕ್ಕೆ ಮರಳಿದ್ದರೂ ಮತ್ತೆ ಗಾಯಕ್ಕೇ ಈಡಾಗಿದ್ದಾರೆ. ವಿಶ್ವಕಪ್​ ತಂಡದ ಭಾಗವಾಗಿರುವ ಅವರು ಆಸೀಸ್​ ಸರಣಿಯ ವೇಳೆಯೂ ಗಾಯಗೊಂಡರೆ ಅವರನ್ನು ತಂಡದಿಂದ ಕೈಬಿಡುವುದು ಬಹುತೇಖ ಖಚಿತವಾಗಿದೆ. ಆಗ ಇವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ತಿಲಕ್​ ವರ್ಮ ಆಯ್ಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ IND vs AUS: ಭಾರತ ವಿರುದ್ಧದ ಸರಣಿಯಿಂದ ಗ್ಲೆನ್​ ಮ್ಯಾಕ್ಸ್​ವೆಲ್ ಔಟ್​

ಆಸ್ಟ್ರೇಲಿಯಾ ಸರಣಿಗೆ ಭಾರತ ಸಂಭಾವ್ಯ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌ ಯಾದವ್​.

ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್​​ ಎದುರಾಳಿ

ವಿಶ್ವಕಪ್​ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಭಾರತ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ವಿರುದ್ಧ ಆಡಲಿದೆ. ಈ ಪಂದ್ಯ ಸೆಪ್ಟೆಂಬರ್​ 30 ರಂದು ಗುವಾಹಟಿಯಲ್ಲಿ ನಡೆಯಲಿದೆ. 29ರಂದು ಆರಂಭಗೊಳ್ಳಲಿರುವ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಅದೇ ದಿನ ನಡೆಯುವ ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್​ ಮುಖಾಮುಖಿಯಾಗಲಿದೆ. ಲಂಕಾ ಮತ್ತು ಬಾಂಗ್ಲಾ ಪಂದ್ಯ ಗುವಾಹಟಿಯಲ್ಲಿ ನಡೆದರೆ ಪಾಕ್​-ಕಿವೀಸ್​ ಪಂದ್ಯ ಹೈದರಾಬಾದ್​ನಲ್ಲಿ ನಡೆಯಲಿದೆ.

Exit mobile version