Site icon Vistara News

T20 World Cup | ಸೆಪ್ಟೆಂಬರ್‌ 15ರಂದು ವಿಶ್ವ ಕಪ್‌ಗೆ ಭಾರತ ತಂಡ ಪ್ರಕಟಿಸಲಿರುವ ಬಿಸಿಸಿಐ

Asia cup cricket

ಮುಂಬಯಿ : ಮುಂಬರುವ ಟಿ೨೦ ವಿಶ್ವ ಕಪ್‌ಗೆ ಬಿಸಿಸಿಐ ಸೆಪ್ಟೆಂಬರ್‌ ೧೫ರಂದು ತಂಡವನ್ನು ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ. ಆಟಗಾರರ ಪಟ್ಟಿಯನ್ನು ಐಸಿಸಿಗೆ ಕಳುಹಿಸಲು ಅಂದು ಕೊನೇ ದಿನವಾಗಿದೆ. ಹೀಗಾಗಿ ಆ ದಿನವೇ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಏಷ್ಯಾ ಕಪ್‌ ಮುಕ್ತಾಯಗೊಂಡ ಬಳಿಕ ಐದು ಮಂದಿಯ ಬಿಸಿಸಿಐ ಹಿರಿಯರ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಸಭೆ ಸೇರಲಿದೆ. ಈ ಸಮಿತಿಯು ಅಕ್ಟೋಬರ್‌ ೧೬ರಿಂದ ನವೆಂಬರ್‌ ೧೩ರವರೆಗೆ ನಡೆಯಲಿರುವ ಟಿ೨೦ ವಿಶ್ವ ಕಪ್‌ಗೆ ತಂಡವನ್ನು ಆಯ್ಕೆ ಮಾಡಲಿದೆ ಎನ್ನಲಾಗಿದೆ. ಹೀಗಾಗಿ ಭಾರತ ತಂಡದ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಲು ಏಷ್ಯಾ ಕಪ್‌ ಕೊನೇ ಅವಕಾಶವಾಗಿದೆ. ಸೆಪ್ಟೆಂಬರ್‌ ೧೧ರಂದು ಏಷ್ಯಾ ಕಪ್‌ ಮುಗಿಯಲಿದ್ದ, ೧೫ರಂದು ಸಭೆ ಸೇರಲಿರುವ ಆಯ್ಕೆಗಾರರು ೧೫ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.

೧೫ ಆಟಗಾರರ ತಂಡ

ಐಸಿಸಿ ಮಾಹಿತಿ ಪ್ರಕಾರ ಒಂದು ಕ್ರಿಕೆಟ್‌ ಸಂಸ್ಥೆ ಗರಿಷ್ಠ ೧೫ ಆಟಗಾರರು ಎಂಟು ಸಹಾಯಕ ಸಿಬ್ಬಂದಿ ಸೇರಿ ೨೩ ಮಂದಿಯನ್ನು ವಿಶ್ವ ಕಪ್‌ಗೆ ಕಳುಹಿಸಬಹುದಾಗಿದೆ. ಅವರಿಗೆ ಆಯೋಜಕರು ಪ್ರಯಾಣ ಹಾಗೂ ಹೋಟೆಲ್‌ ವ್ಯವಸ್ಥೆ ಮಾಡಲಿದೆ. ಆದಾಗ್ಯೂ ಮತ್ತೆ ಏಳು ಮಂದಿಯನ್ನು ಕರೆದುಕೊಂಡ ಹೋಗಲು ಅವಕಾಶವಿದೆ. ಆದರೆ, ಅವರು ಕ್ರಿಕೆಟ್ ಸಂಸ್ಥೆಯ ಖರ್ಚಿನಿಂದ ಅಲ್ಲಿಗೆ ತೆರಳಬೇಕಾಗಿದೆ. ಉಳಿದ ಏಳು ಮಂದಿಯಲ್ಲಿ ನೆಟ್‌ಬೌಲರ್‌ಗಳು, ಸಹಾಯ ಸಿಬ್ಬಂದಿ ಸೇರಿ ಯಾರು ಬೇಕಾದರೂ ಇರಬಹುದು. ಅಂತೆಯೇ ಹೋಗುವ ೩೦ರಲ್ಲಿ ಒಬ್ಬರು ವೈದ್ಯರು ಕಡ್ಡಾಯವಾಗಿ ಇರಬೇಕು ಎಂಬುದಾಗಿಯೂ ಐಸಿಸಿ ಹೇಳಿದೆ. ಕೋವಿಡ್‌ ಪರಿಸ್ಥಿತಿಯನ್ನು ಎದುರಿಲು ಆ ವೈದ್ಯರು ಸಜ್ಜಾಗಿರಬೇಕು ಎಂಬುದು ಐಸಿಸಿಯ ನಿಯಮವಾಗಿದೆ.

೧೫ ಮಂದಿ ಆಟಗಾರರ ಮೊದಲ ಪಟ್ಟಿಯನ್ನು ತಂಡವೆಂದು ಪರಿಗಣಿಸಲಾಗುತ್ತದೆ. ವೈದ್ಯಕೀಯ ಕಾರಣಕ್ಕೆ ಅವರಲ್ಲಿ ಬದಲಾವಣೆ ಮಾಡಬಹುದು ಎಂದು ಐಸಿಸಿ ಹೇಳಿದೆ.

ಇದನ್ನೂ ಓದಿ | ASIA CUP | ಏಷ್ಯಾ ಕಪ್‌ಗೆ ಭಾರತ ತಂಡ ಪ್ರಕಟ

Exit mobile version