Site icon Vistara News

ಅಭ್ಯಾಸದ ವೇಳೆ ಭುಜಕ್ಕೆ ಗಾಯ; 2ನೇ ಟೆಸ್ಟ್​ನಿಂದ ಟೀಮ್​ ಇಂಡಿಯಾದ ಆಲ್​ರೌಂಡರ್​ ಔಟ್​!​

Shardul Thakur

ಕೇಪ್​ಟೌನ್: ದ್ವಿತೀಯ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಭಾರತ(IND vs SA) ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ತಂಡದಲ್ಲಿದ್ದ ಏಕಮಾತ್ರ ವೇಗದ ಬೌಲಿಂಗ್​ ಆಲ್​​ರೌಂಡರ್​ ಶಾರ್ದೂಲ್​ ಠಾಕೂರ್(Shardul Thakur)​ ಬ್ಯಾಟಿಂಗ್​ ಅಭ್ಯಾಸ ನಡೆಸುವ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದು ದ್ವಿತೀಯ ಟೆಸ್ಟ್​ನಿಂದ ಬಹುತೇಕ ಹೊರಬಿಖುವ ಸ್ಥಿತಿಯಲ್ಲಿದ್ದಾರೆ.

ಶನಿವಾರ ನೆಟ್ಸ್​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸುವ ವೇಳೆ ಶಾರ್ದೂಲ್ ಠಾಕೂರ್ ಭುಜದ ಗಾಯಕ್ಕೀಡಾಗಿದ್ದಾರೆ. ಬಳಿಕ ಅವರಿಗೆ ಚಿಕಿತ್ಸೆ ನೀಡಿ ಭುಜಕ್ಕೆ ನೋವು ಐಸ್​ ಕ್ಯೂಬ್​ಗಳನ್ನು ಇಟ್ಟ ಕವರ್​ ಹಾಕಲಾಯಿತು. ಗಾಯಗೊಂಡು ಕುಳಿತಿರುವ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜನವರಿ 3 ರಂದು ಕೇಪ್ ಟೌನ್‌ನಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್‌ನಿಂದ ಅವರು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.

ಗಾಯದ ಸ್ವರೂಪವನ್ನು ತಿಳಿಯಲು ಅಗತ್ಯವಿದ್ದರೆ ಸ್ಕ್ಯಾನಿಂಗ್ ನಡೆಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಸದ್ಯಕ್ಕೆ ಶಾರ್ದೂಲ್ ಅವರ ಪರಿಸ್ಥಿತಿಯನ್ನು ನೋಡುವಾಗ ಅವರಿಗೆ ಬೌಲಿಂಗ್​ ನಡಸಲು ಅಸಾಧ್ಯ ಎನ್ನುವಂತೆ ಕಂಡುಬಂದಿದೆ. ಅವರ ಅನುಪಸ್ಥಿತಿಯಲ್ಲಿ ಶಮಿ ಸ್ಥಾನಕ್ಕೆ ಬದಲಿಯಾಗಿ ಆಯ್ಕೆಯಾದ ಅವೇಶ್​ ಖಾನ್ ಆಡುವ ಬಳಗದಲ್ಲಿ ಅವಕಾಶ ಪಡೆಯಬಹುದು.

ಇದನ್ನೂ ಓದಿ MS Dhoni: ಆಹಾರ ಸೇವಿಸಲು ಪಾಕ್​ಗೆ ತೆರಳಿ ಎಂದ ಧೋನಿ; ದೇಶಾಭಿಮಾನ ತೋರಿದ ಅಭಿಮಾನಿ

ಜಡೇಜಾ ಆಡುವ ಸಾಧ್ಯತೆ

ಬೆನ್ನುನೋವಿನ ಸಮಸ್ಯೆಯಿಂದ ಮೊದಲ ಟೆಸ್ಟ್​ ಪಂದ್ಯದಿಂದ ಹೊರಗುಳಿದಿದ್ದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ(Ravindra Jadeja) ಅವರು ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್(india vs south africa 2nd test)​ ಪಂದ್ಯದಲ್ಲಿ ಆಡಲಿದ್ದಾರೆ ಎಂದು ತಿಳಿದುಬಂದಿದೆ. ಜಡೇಜಾ ಅವರ ಕಮ್​ಬ್ಯಾಕ್​ನಿಂದ ತಂಡ ಬಲಿಷ್ಠಗೊಳ್ಳಲಿದೆ.

ರವೀಂದ್ರ ಜಡೇಜಾ ಸಂಪೂರ್ಣವಾಗಿ ಫಿಟ್​ ಆಗಿದ್ದು ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯುವು ಬಹುತೇಕ ಖಚಿತ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ. ಮೊದಲ ಪಂದ್ಯದಲ್ಲಿ ಜಡೇಜಾ ಅನುಪಸ್ಥಿತಿಯಲ್ಲಿ ರವಿಚಂದ್ರ ಅಶ್ವಿನ್​ ಅವಕಾಶ ಪಡೆದಿದ್ದರು. ಆದರೆ ಅವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. 2 ಇನಿಂಗ್ಸ್​ ಸೇರಿ ಕಢವಲ ಒಂದು ವಿಕೆಟ್​ ಮಾತ್ರ ಕಬಳಿಸಿದ್ದರು. ಬ್ಯಾಟಿಂಗ್​ನಲ್ಲಿಯೂ ಶೂನ್ಯ ಮತ್ತು 8 ರನ್​ ಗಳಿಸಿದ್ದರು.

ಜಡೇಜಾ ದ್ವಿತೀಯ ಪಂದ್ಯಕ್ಕೆ ಮರಳಿದರೆ ಆಗ ಅಶ್ವಿನ್​ ಆಡುವ ಬಳಗದಿಂದ ಹೊರಬೀಳಲಿದ್ದಾರೆ. ಜಡೇಜಾ ಸ್ಪಿನ್​ ಜತೆಗೆ ಬ್ಯಾಟಿಂಗ್​ ಕೂಡ ಮಾಡಬಲ್ಲರು. ಇದು ತಂಡಕ್ಕೆ ಹೆಚ್ಚು ಪ್ಲಸ್​ ಪಾಯಿಂಟ್​ ಆಗಲಿದೆ. ಈ ವರ್ಷದಲ್ಲಿ ಜಡೇಜಾ ಭಾರತ ತಂಡದ ಪರ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾದಲ್ಲಿಯೂ ಶ್ರೇಷ್ಠ ನಿರ್ವಹಣೆ ತೋರಿದ್ದರು.

ದ್ವಿತೀಯ ಟೆಸ್ಟ್​ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ, ಕೆ.ಎಸ್ ಭರತ್, ಅಭಿಮನ್ಯು ಈಶ್ವರನ್, ಅವೇಶ್ ಖಾನ್.

Exit mobile version