Site icon Vistara News

ಅಭ್ಯಾಸ ಆರಂಭಿಸಿದ ಭಾರತ; ಆಟಗಾರರಿಗೆ ಮಹತ್ವದ ಸಲಹೆ ನೀಡಿದ ಕೋಚ್​ ದ್ರಾವಿಡ್​

Jasprit Bumrah is bowls in a net session

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯಕ್ಕಾಗಿ ಟೀಮ್​ ಇಂಡಿಯಾ ಆಟಗಾರು ಸೆಂಚುರಿಯನ್ ತಲುಪಿದ್ದು ಅಭ್ಯಾಸವನ್ನು ಆರಂಭಿಸಿದ್ದಾರೆ. ಈ ವಿಚಾರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ಏಕದಿನ ಸರಣಿಯಿಂದ ಹೊರಗುಳಿದಿದ್ದ ತಂಡದ ಪ್ರಧಾನ ಕೋಚಿಂಗ್​ ಸಿಬ್ಬಂದಿಗಳೆಲ್ಲ ಮತ್ತೆ ವಾಪಸ್​ ಆಗಿದ್ದು ಕೋಚ್​ ರಾಹುಲ್​ ದ್ರಾವಿಡ್​ ಮಾರ್ಗದರ್ಶನದಲ್ಲಿ ಭಾನುವಾರ ಟೀಮ್​ ಇಂಡಿಯಾ ಆಟಗಾರರು ಸೆಂಚುರಿಯನ್​ನಲ್ಲಿ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ಬಳಿಕ ಕೋಚ್​ ದ್ರಾವಿಡ್​ ಆಟಗಾರಿಗೆ ಮಹತ್ವದ ಸಲಹೆಯೊಂದನ್ನು ಕೂಡ ನೀಡಿದ್ದಾರೆ.

ನಿರಾಸೆಗಳನ್ನು ದಾಟಿ ಮುಂದುವರಿಯಬೇಕು

ಭಾರತದ ಅಭ್ಯಾಸದ ಅವಧಿ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದ್ರಾವಿಡ್, ವಿಶ್ವಕಪ್​ ಸೋಲಿನ ಆಘಾತ ಆಟಗಾರರನ್ನು ಕಾಡುವುದು ಸಹಜ. ಆದರೆ, ಇದೊಂದು ಕ್ರೀಡೆಯ ಭಾಗ. ಎಲ್ಲ ನಿರಾಸೆ- ಬೇಸರಗಳನ್ನು ದಾಟಿ ಮುಂದುವರಿಯಬೇಕು ಎಂದು ದ್ರಾವಿಡ್​ ಎಲ್ಲ ಆಟಗಾರರಿಗೆ ಆತ್ಮವಿಶ್ವಾಸದ ತುಂಬಿದ್ದಾರೆ.

ಏಕದಿನ ವಿಶ್ವಕಪ್​ ಫೈನಲ್​ ಸೋಲಿನ ಬಳಿಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಮತ್ತು ಜಸ್​ಪ್ರೀತ್​ ಬುಮ್ರಾ ಆಡುತ್ತಿರುವ ಮೊದಲ ಕ್ರಿಕೆಟ್​ ಸರಣಿ ಇದಾಗಿದೆ. ಇವರೆಲ್ಲ ಇಂದು(ಭಾನುವಾರ) ಅಭ್ಯಾಸ ನಡೆಸಿದ ಫೋಟೊಗಳು ವೈರಲ್​ ಆಗಿವೆ.

ಇದನ್ನೂ ಓದಿ Virat Kohli 1st Century: ಕೊಹ್ಲಿಯ ಚೊಚ್ಚಲ ಅಂತಾರಾಷ್ಟ್ರೀಯ ಶತಕಕ್ಕೆ ತುಂಬಿತು 14 ವರ್ಷ

ರಾಹುಲ್​ಗೆ ಕೀಪಿಂಗ್​ ಹೊಣೆ; ಖಚಿತಪಡಿಸಿದ ದ್ರಾವಿಡ್​

ಇಶಾನ್​ ಕಿಶನ್​​ ಅವರು ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದಾಗ ಕೀಪಿಂಗ್​ ಹೊಣೆ ಕೆ.ಎಲ್​ ರಾಹುಲ್​ಗೆ ನೀಡಬಹುದು ಎಂದು ಹೇಳಲಾಗಿತ್ತು. ಇದೀಗ ಖಚಿತವಾಗಿದೆ. ಕೋಚ್​ ದ್ರಾವಿಡ್​ ಈ ಬಗ್ಗೆ ಖಚಿತ ಮಾಹಿತಿ ನೀಡಿ ರಾಹುಲ್​ ಅವರೇ ಕೀಪಿಂಗ್​ ನಡೆಸಲಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೆ ರಾಹುಲ್​ ಏಕದಿನ ವಿಶ್ವಕಪ್​ನಲ್ಲಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿಕೆಟ್​ ಕೀಪರ್​ ಆಗಿ ಉತ್ತಮ ಯಶಸ್ಸು ಕಂಡಿದ್ದಾರೆ. ಹೀಗಾಗಿ ಅವರನ್ನೇ ಆಯ್ಕೆ ಮಾಡಲಾಗಿದೆ ಎಂದು ದ್ರಾವಿಡ್​ ಹೇಳಿದರು.

ಮಳೆಯ ಎಚ್ಚರಿಕೆ

ಇತ್ತಂಡಗಳ ನಡುವಣ ಈ ಮೊದಲ ಟೆಸ್ಟ್​ ಪಂದ್ಯಕ್ಕೆ ಮಳೆ ಅಡಚಣೆಯ ಭೀತಿ ಕಾಡಿದೆ. ಪಂದ್ಯದ ಮೊದಲ ದಿನದಾಟಕ್ಕೆ ಶೇ. 96ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. 2ನೇ ದಿನಕ್ಕೆ ಮಳೆ ಭೀತಿ ಶೇ. 25ಕ್ಕೆ ತಗ್ಗಲಿದೆ. 3ನೇ ದಿನದಾಟದಲ್ಲಿ ಬೆಳಗ್ಗಿನ ಅವಧಿಗೆ ಮಾತ್ರ ಮಳೆ ಭೀತಿ ಇದೆ. 4 ಮತ್ತು 5ನೇ ದಿನದಾಟಗಳಲ್ಲಿ ಮಳೆ ಕಾಡುವ ಭೀತಿ ಏರಿಕೆ ಕಂಡು ಶೇ. 60ರಷ್ಟು ಇರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಪಂದ್ಯ ಸಂಪೂರ್ಣವಾಗಿ 5 ದಿನಗಳ ಕಾಲ ನಡೆಯುವು ಕಷ್ಟ ಸಾಧ್ಯ ಎನ್ನಲಾಗಿದೆ.

Exit mobile version