ಮುಂಬಯಿ: 2026ರಲ್ಲಿ ನಡೆಯುವ ಟಿ20 ವಿಶ್ವಕಪ್(t20 world cup 2026) ಟೂರ್ನಿಗೂ ಮುನ್ನ ಹಾಲಿ ಚಾಂಪಿಯನ್ ಭಾರತ ತಂಡ(Team India) ಬರೋಬ್ಬರಿ 34 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು(team india upcoming t20 series) ಆಡಲಿದೆ. ಇದರಲ್ಲಿ ಒಟ್ಟು 8 ಸರಣಿಗಳು(India T20I schedule) ಸೇರಿವೆ. ತಲಾ ನಾಲ್ಕು ಸರಣಿಗಳು ವಿದೇಶದಲ್ಲಿ ಮತ್ತು ತವರಿನಲ್ಲಿ ಆಡಲಿದೆ.
ಕಳೆದ ಶನಿವಾರ ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಅಂತರದಿಂದ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್ ನಡೆದು ಒಂದು ವಾರ ಆಗುವ ಮುನ್ನವೇ ಮುಂದಿನ ಟಿ20 ವಿಶ್ವಕಪ್ಗೂ ಮುನ್ನ ಮುಂದಿನ 2 ವರ್ಷಗಳ ಭಾರತದ ಟಿ20 ಸರಣಿಯ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ. 2026ರಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.
ಜುಲೈ 6ರಿಂದ ಆರಂಭಗೊಳ್ಳಲಿರುವ ಜಿಂಬಾಬ್ವೆ ವಿರುದ್ಧದ ಸರಣಿಯ ಮೂಲಕ ಭಾರತದ ನೂತನ ಟಿ20 ಋತು ಪ್ರಾರಂಭಗೊಳ್ಳಲಿದೆ. ಇದು 5 ಪಂದ್ಯಗಳ ಸರಣಿಯಾಗಿದ್ದು, ಈ ತಂಡ ಯುವ ಆಟಗಾರರನ್ನೇ ನೆಚ್ಚಿಕೊಂಡಿದೆ. ರೋಹಿತ್, ಜಡೇಜಾ ಮತ್ತು ವಿರಾಟ್ ಕೊಹ್ಲಿ ಟಿ20ಗೆ ವಿದಾಯ ಹೇಳಿರುವ ಕಾರಣ ಈ ಸ್ಥಾನಕ್ಕೆ ಯುವ ಆಟಗಾರರನ್ನು ಸಿದ್ಧಪಡಿಸುವ ಜವಾಬ್ದಾರಿ ನೂತನ ಕೋಚ್ ಆಗಲಿರುವವರ ಹೆಗಲೇರಲಿದೆ.
ಇದನ್ನೂ ಓದಿ Team India stuck in Barbados: ಟೀಮ್ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ
2025ರಲ್ಲಿ ಭಾರತ 4 ಸರಣಿಗಳನ್ನು ಆಡಲಿದೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯದಲ್ಲಿ ಕ್ರಮವಾಗಿ 3 ಮತ್ತು 5 ಪಂದ್ಯಗಳ ಸರಣಿ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ತವರಲ್ಲಿ 5 ಪಂದ್ಯಗಳ ಸರಣಿಯನ್ನಾಡಲಿದೆ. 2026ರಲ್ಲಿ ಕಿವೀಸ್ ವಿರುದ್ಧ ತವರಿನಲ್ಲಿ 5 ಪಂದ್ಯಗಳ ಸರಣಿ ಆಡಲಿದೆ. ಈ ಸರಣಿ ಬಳಿಕ ಟಿ20 ವಿಶ್ವಕಪ್ ಟೂರ್ನಿಯನ್ನು ಆಡಲಿದೆ.
2024-25ನೇ ಸಾಲಿನ ತವರಿನ ಕ್ರಿಕೆಟ್ ಸರಣಿಯ ವೇಳಾಪಟ್ಟಿಯ ಮಾಹಿತಿ ಇಂತಿದೆ.
ಬಾಂಗ್ಲಾ ಸರಣಿಯ ವೇಳಾಪಟ್ಟಿ
ಸೆಪ್ಟೆಂಬರ್-19 ಮೊದಲ ಟೆಸ್ಟ್ ಪಂದ್ಯ. ತಾಣ: ಚೆನ್ನೈ
ಸೆಪ್ಟೆಂಬರ್-27 ದ್ವಿತೀಯ ಟೆಸ್ಟ್. ತಾಣ; ಕಾನ್ಪುರಅಕ್ಟೋಬರ್-6 ಮೊದಲ ಟಿ20. ತಾಣ: ಧರ್ಮಶಾಲಾ
ಅಕ್ಟೋಬರ್-9 ದ್ವಿತೀಯ ಟಿ20. ತಾಣ: ದೆಹಲಿಅಕ್ಟೋಬರ್-12 ಮೂರನೇ ಟಿ20. ತಾಣ: ಹೈದರಾಬಾದ್
ನ್ಯೂಜಿಲ್ಯಾಂಡ್ ಸರಣಿಯ ವೇಳಾಪಟ್ಟಿ
ಅಕ್ಟೋಬರ್-16 ಮೊದಲ ಟಿ20. ತಾಣ: ಬೆಂಗಳೂರು
ಅಕ್ಟೋಬರ್-24 ದ್ವಿತೀಯ ಟಿ20. ತಾಣ: ಪುಣೆ
ನವೆಂಬರ್-1 ಮೂರನೇ ಟಿ20. ತಾಣ: ಮುಂಬಯಿ
ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳಾಪಟ್ಟಿ
ಜನವರಿ-22 ಮೊದಲ ಟಿ20. ತಾಣ:ಚೆನ್ನೈ
ಜನವರಿ-25 ದ್ವಿತೀಯ ಟಿ20. ತಾಣ: ಕೋಲ್ಕತ್ತಾ
ಜನವರಿ-28 ಮೂರನೇ ಟಿ20. ತಾಣ: ರಾಜ್ಕೋಟ್
ಜನವರಿ-31 ನಾಲ್ಕನೇ ಟಿ20. ತಾಣ:ಪುಣೆ
ಫೆಬ್ರವರಿ-2 ಐದನೇ ಟಿ20. ತಾಣ: ಮುಂಬಯಿ
ಫೆಬ್ರವರಿ-6 ಮೊದಲ ಏಕದಿನ. ತಾಣ:ನಾಗ್ಪುರ
ಫೆಬ್ರವರಿ-9 ದ್ವಿತೀಯ ಏಕದಿನ. ತಾಣ: ಕಟಕ್
ಫೆಬ್ರವರಿ-12 ಮೂರನೇ ಏಕದಿನ. ತಾಣ: ಅಹಮದಾಬಾದ್