Site icon Vistara News

Team India : ಡಿ.10ರಿಂದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಿಸಿಸಿಐ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ

Team India

ಮುಂಬಯಿ: ಭಾರತ ತಂಡದ (Team India) ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿಯನ್ನು ಬಿಸಿಸಿಐ ಶುಕ್ರವಾರ ಬಿಡುಗಡೆ ಮಾಡಿದೆ. ಭಾರತ 3 ಟಿ20, 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಡಿಸೆಂಬರ್ 10ರಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿ ಬಳಿಕ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಡಿಸೆಂಬರ್ 26 ರಂದು 2 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಡರ್ಬಾನ್, ಕ್ವೆಬರ್ಹಾ, ಜೋಹಾನ್ಸ್​​ಬರ್ಗ್​, ಸೆಂಚೂರಿಯನ್, ಪಾರ್ಲ್ ಮತ್ತು ಕೇಪ್ ಟೌನ್​ನಲ್ಲಿ ಈ ಎಲ್ಲ ಪಂದ್ಯಗಳು ನಡೆಯಲಿವೆ.

ಮೊದಲ ಟಿ20 ಪಂದ್ಯ ಡರ್ಬನ್​ನಲ್ಲಿ ಆಯೋಜನೆಗೊಂಡಿದೆ. ಏತನ್ಮಧ್ಯೆ, 2ನೇ ಮತ್ತು 3 ನೇ ಟಿ 20 ಪಂದ್ಯಗಳು ಕ್ರಮವಾಗಿ ಗುಬೆರ್ಹಾ ಮತ್ತು ಜೋಹಾನ್ಸ್​​ಬರ್ಗ್​ನಲ್ಲಿ ಆಯೋಜನೆಗೊಂಡಿದೆ. ಮೊದಲ ಎರಡು ಏಕದಿನ ಪಂದ್ಯ ಮತ್ತು ಅಂತಿಮ ಏಕದಿನ ಪಂದ್ಯಗಳು ಗುಬೆರ್ಹಾ ಮತ್ತು ಜೋಹಾನ್ಸ್​ ಬರ್ಗ್​ನಲ್ಲಿ ಆಯೋಜನೆಗೊಂಡಿದೆ. ಅಂತಿಮ ಏಕದಿನ ಪಂದ್ಯಕ್ಕಾಗಿ ಭಾರತ ತಂಡವು ಪಾರ್ಲ್ ಗೆ ತೆರಳಲಿದೆ. ದಕ್ಷಿಣ ಆಫ್ರಿಕಾದ ಅಪ್ರತಿಮ ನಗರಗಳಾದ ಸೆಂಚುರಿಯನ್ ಮತ್ತು ಕೇಪ್ ಟೌನ್ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆತಿಥ್ಯ ವಹಿಸಲಿವೆ.

ಪಂದ್ಯದ ವೇಳಾಪಟ್ಟಿ

ಮೊದಲ ಟಿ20 ಪಂದ್ಯ, ಡಿಸೆಂಬರ್ 10. ಡರ್ಬಾನ್
2ನೇ ಟಿ20 ಪಂದ್ಯ, ಡಿಸೆಂಬರ್ 12, ಕ್ವೆಬರ್ಹಾ
3ನೇ ಟಿ20 ಪಂದ್ಯ, ಡಿಸೆಂಬರ್ 14, ಜೋಹಾನ್ಸ್ ಬರ್ಗ್
ಮೊದಲ ಏಕದಿನ ಪಂದ್ಯ, ಡಿಸೆಂಬರ್ 17, ಜೋಹಾನ್ಸ್ ಬರ್ಗ್
2ನೇ ಏಕದಿನ ಪಂದ್ಯ, ಡಿಸೆಂಬರ್ 19, ಕ್ವೆಬರ್ಹಾ
3ನೇ ಏಕದಿನ ಪಂದ್ಯ ಡಿಸೆಂಬರ್ 21, ಪಾರ್ಲ್​
ಮೊದಲ ಟೆಸ್ಟ್, ಡಿಸೆಂಬರ್ 26-30 ಸೆಂಚೂರಿಯನ್
2ನೇ ಟೆಸ್ಟ್​ ಪಂದ್ಯ, ಜನವರಿ 3-7, ಕೇಪ್ ಟೌನ್

ಟೆಸ್ಟ್​ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಮತ್ತು ಹೊಸ ವರ್ಷದ ಟೆಸ್ಟ್ ಪಂದ್ಯಗಳು ತೀವ್ರ ಪೈಪೋಟಿಯಿಂದ ನಡೆಯಲಿವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫ್ರೀಡಂ ಸರಣಿಯು ಮಹತ್ವದ್ದಾಗಿದೆ. ಏಕೆಂದರೆ ಇದು ಎರಡು ಅತ್ಯುತ್ತಮ ಟೆಸ್ಟ್ ತಂಡಗಳ ನಡುವೆ ನಡೆಯಲಿದೆ. ಅಲ್ಲದೆ ಇದು ನಮ್ಮ ರಾಷ್ಟ್ರಗಳನ್ನು ಮತ್ತು ಅವರ ಸುತ್ತಲಿನ ಜಗತ್ತನ್ನು ರೂಪಿಸಿದ ಇಬ್ಬರು ಮಹಾನ್ ನಾಯಕರಾದ ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರನ್ನು ಗೌರವಿಸುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Oldest Countries: 10 Oldest Country In The World

ಬಾಕ್ಸಿಂಗ್ ಡೇ ಟೆಸ್ಟ್ ಮತ್ತು ನ್ಯೂ ಇಯರ್ ಟೆಸ್ಟ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್​ನಲ್ಲಿ ಪ್ರಮುಖ ಪಂದ್ಯಗಳಾಗಿವೆ. ವೇಳಾಪಟ್ಟಿಯನ್ನು ವಿಶೇಷವಾಗಿ ಈ ಉತ್ತಮ ದಿನಾಂಕಗಳ ಸುತ್ತ ಯೋಜಿಸಲಾಗಿರುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಭಾರತವು ಯಾವಾಗಲೂ ಪ್ರೇಕ್ಷಕರ ಉತ್ತಮ ಬೆಂಬಲವನ್ನು ಪಡೆದುಕೊಂಡಿದೆ. ಕೆಲವು ರೋಮಾಂಚಕ ಸ್ಪರ್ಧೆಗಳು ನಡೆಯುವ ವಿಶ್ವಾಸವಿದೆ ಎಂದು ಅವರು ಹೇಳಿದರು.

Exit mobile version