Site icon Vistara News

India vs Zimbabwe ODI | ಜಿಂಬಾಬ್ವೆ ವಿರುದ್ಧ ಸರಣಿಯ ವೇಳಾಪಟ್ಟಿ ಪ್ರಕಟ

India vs Zimbabwe ODI

ಮುಂಬಯಿ: ಜಿಂಬಾಬ್ವೆ ಪ್ರವಾಸದಲ್ಲಿನ ಏಕದಿನ ಸರಣಿಯ (India vs Zimbabwe ODI ) ವೇಳಾಪಟ್ಟಿ ಬುಧವಾರ ಬಿಡುಗಡೆಯಾಗಿದೆ. ಶ್ರೀಲಂಕಾದಲ್ಲಿ ಅಯೋಜನೆಗೊಂಡಿರುವ ಏಷ್ಯಾ ಕಪ್​ಗೆ ಮೊದಲು ಈ ಸರಣಿ ನಡೆಯಲಿದೆ.
ಭಾರತ ತಂಡದ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಅದನ್ನು ಮುಗಿಸಿ ಜಿಂಬಾಬ್ವೆಗೆ ತೆರಳಲಿದೆ. ವಿಶೇಷ ಎಂದರೆ ಭಾರತ 6 ವರ್ಷಗಳ ಬಳಿಕ ಜಿಂಬಾಬ್ವೆ ವಿರುದ್ಧ ಸರಣಿ ಆಡಲು ಜಿಂಬಾಬ್ವೆಗೆ ಹೋಗುತ್ತಿದೆ. ಆದರೆ ಈ ಸರಣಿಯಿಂದ ನಾಯಕ ರೋಹಿತ್ ಶರ್ಮ ಸೇರಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಕೆ ಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.

ಜಿಂಬಾಬ್ವೆ ವಿರುದ್ಧದ ಸರಣಿ ವಿಶ್ವ ಕಪ್ ಸೂಪರ್ ಲೀಗ್‌ನ ಭಾಗವಾಗಿದ್ದು, ಆತಿಥೇಯ ತಂಡದ ಪಾಲಿಗೆ ಮಹತ್ವದ್ದಾಗಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಉತ್ತಮ ಅಂಕ ಗಳಿಸಿದರೆ, ಮೂಲಕ ಜಿಂಬಾಬ್ವೆ ಹೆಚ್ಚಿನ ಅಂಕಗಳನ್ನು ಪಡೆದರೆ, ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50-ಓವರ್‌ಗಳ ವಿಶ್ವ ಕಪ್‌ಗೆ ನೇರ ಅರ್ಹತೆ ಪಡೆಯಲು ಸಾಧ್ಯವಿದೆ.

ಈ ಹಿಂದೆ 2016ರಲ್ಲಿ ಭಾರತ ತಂಡ ಜಿಂಬಾಬ್ವೆ ಪ್ರವಾಸ ಮಾಡಿತ್ತು. ಆ ವೇಳೆ ಮಹೇಂದ್ರ ಸಿಂಗ್​ ಧೋನಿ ತಂಡದ ನಾಯಕರಾಗಿದ್ದರು. ಮೂರು ಏಖದಿನ ಹಾಗೂ ಅಷ್ಟೇ ಸಂಖ್ಯೆಯ ಟಿ 20 ಪಂದ್ಯಗಳಲ್ಲಿ ಭಾರತ ಭಾರತ ಭಾಗವಹಿಸಿತ್ತು. ಎರಡೂ ಸರಣಿ ಭಾರತದ ಕೈವಶವಾಗಿತ್ತು.

ಭಾರತ-ಜಿಂಬಾಬ್ವೆ ಸರಣಿ ವೇಳಾಪಟ್ಟಿ ಹೀಗಿದೆ

ಆಗಸ್ಟ್​ 18- ಮೊದಲ ಏಕದಿನ ಪಂದ್ಯ
ಆಗಸ್ಟ್ 20- ಎರಡನೇ ಏಕದಿನ ಪಂದ್ಯ
ಆಗಸ್ಟ್ 22- ಮೂರನೇ ಏಕದಿನ ಪಂದ್ಯ
ಪಂದ್ಯಗಳು ಹರಾರೆಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದನ್ನೂ ಓದಿ: Team India ಜಿಂಬಾಬ್ವೆ ಪ್ರವಾಸ ಯಾವಾಗ?

Exit mobile version