Site icon Vistara News

IND vs ZIM: ಭಾರತ-ಜಿಂಬಾಬ್ವೆ ಟಿ20 ಸರಣಿಯ ವೇಳಾಪಟ್ಟಿ ಹೀಗಿದೆ

india tour zimbabwe 2024

ಬೆಂಗಳೂರು: ಅಮೆರಿಕಾ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ ಮುಗಿದ ತಕ್ಷಣ ಭಾರತ ಕ್ರಿಕೆಟ್​ ತಂಡ ಜಿಂಬಾಬ್ವೆ ಪ್ರವಾಸ(ZIM vs IND) ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ(india tour zimbabwe 2024) ಟೀಮ್​ ಇಂಡಿಯಾ(Team India) 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಪ್ರವಾಸಿ ಭಾರತ ವಿರುದ್ಧದ ಈ ಟಿ20 ಸರಣಿಯ ವೇಳಾಪಟ್ಟಿಯನ್ನು ಜಿಂಬಾಬ್ವೆ ಕ್ರಿಕೆಟ್‌ ಮಂಡಳಿ ಪ್ರಕಟಿಸಿದೆ. ಟಿ20 ಸರಣಿ ಜುಲೈ 6ರಿಂದ 14ರ ತನಕ ನಡೆಯಲಿದೆ. ಎಲ್ಲ ಪಂದ್ಯಗಳನ್ನು ಹರಾರೆಯಲ್ಲಿ ಆಡಲಾಗುವುದು. ಜುಲೈ 6, 7, 10, 13 ಮತ್ತು 14ರಂದು ಈ ಸರಣಿ ನಡೆಯಲಿದೆ.

ಭಾರತದೆದುರಿನ ಸರಣಿಯನ್ನು ನಡೆಸುವುದೊಂದು ಸಂತಸದ ಕ್ಷಣ. ಇದು ತವರಿನ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ವಿಶೇಷ ಆಕರ್ಷಣೆ ಆಗಿರಲಿದೆ ಎಂದು ಜಿಂಬಾಬ್ವೆ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಟವೆಂಗ ಮುಕುಲಾನಿ ಹೇಳಿದ್ದಾರೆ. ಜಿಂಬಾಬ್ವೆ ಕ್ರಿಕೆಟ್‌ ಬೆಳವಣಿಗೆಗೆ ಇದು ಸಕಾಲ. ಅದಕ್ಕೆ ನಮ್ಮ ಸಹಾಯ ಸದಾ ಲಭಿಸಲಿದೆ ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ. ಟಿ20 ವಿಶ್ವಕಪ್​ ಬಳಿಕ ಆಡಲಿಳಿರುವ ಈ ಸರಣಿಯಲ್ಲಿ ತಂಡದಲ್ಲಿ ಹಲವು ಬದಲಾವಣೆ ನಿರೀಕ್ಷೀತ. ಹಿರಿಯ ಆಟಗಾರರೆಲ್ಲ ವಿಶ್ವಕಪ್​ ಬಳಿಕ ಟಿ20ಗೆ ಗುಡ್​ಬೈ ಹೇಳಿದರೂ ಅಚ್ಚರಿ ಇಲ್ಲ. ಜತೆಗೆ ನಾಯಕತ್ವದ ಬದಲಾವಣೆಯೂ ಆಗಬಹುದು.

ಇದನ್ನೂ ಓದಿ U19 World Cup: ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಟಿ20 ವಿಶ್ವಕಪ್​ ಯಾವಾಗ ಆರಂಭ


ಟಿ20 ವಿಶ್ವಕಪ್​ ಪಂದ್ಯಾವಳಿ ಜೂನ್ 1 ರಿಂದ ಆರಂಭಗೊಂಡು ಜೂನ್​ 29ರ ತನಕ ನಡೆಯಲಿದೆ. ಒಟ್ಟು 55 ಪಂದ್ಯಗಳು ಇರಲಿದೆ. ತಂಡಗಳ ಅಂತಿಮ ಪಟ್ಟಿ ಸಲ್ಲಿಸಲು ಮೇ 1 ಅಂತಿಮ ದಿನ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಆದರೆ, ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ.
ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

Exit mobile version