Site icon Vistara News

BCCI vs PCB : ನಿಮ್ಮಲ್ಲಿಗೆ ಎಂದಿಗೂ ಕಾಲಿಡುವುದಿಲ್ಲ; ಪಾಕಿಸ್ತಾನಕ್ಕೆ ಭಾರತದ ತಿರುಗೇಟು

Champions trophy

ನವ ದೆಹಲಿ: ಮತ್ತೊಂದು ಬಿಸಿಸಿಐ ಮತ್ತು ಪಿಸಿಬಿ (BCCI vs PCB) ಕದನ ನಡೆಯುತ್ತಿದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದ್ದು, ಸಾಂಪ್ರದಾಯಿಕ ಎದುರಾಳಿ ಭಾರತ ಈ ಮೆಗಾ ಟೂರ್ನಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಿದ್ಧವಿಲ್ಲ. ಭಾರತ ಮತ್ತು ಪಾಕಿಸ್ತಾನ ತೀವ್ರ ಪ್ರತಿಸ್ಪರ್ಧಿಗಳಾಗಿರುವುದರಿಂದ ರಾಜಕೀಯ ಸಮರದಿಂದಾಗಿ ಮೆನ್ ಇನ್ ಬ್ಲೂ ಪಂದ್ಯಾವಳಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸುವ ಸಾಧ್ಯತೆಯಿಲ್ಲ. ಇದು ಮತ್ತೊಂದು ಸಂಘರ್ಷಕ್ಕೆ ಕಾರಣವಾಗಲಿದೆ.

ಕೆಲ ತಿಂಗಳ ಹಿಂದಷ್ಟೇ ಏಷ್ಯಾಕಪ್​​ಗಾಗಿ ಪಾಕಿಸ್ತಾನಕ್ಕೆ ತೆರಳಲು ಭಾರತ ನಿರಾಕರಿಸಿದ್ದರಿಂದ ಬಿಸಿಸಿಐ ಮತ್ತು ಪಿಸಿಬಿ ನಡುವಿನ ಸಂಘರ್ಷ ನಡೆದಿತ್ತು. ಪಾಕಿಸ್ತಾನವು ಆ ಪಂದ್ಯಾವಳಿಯ ಆತಿಥ್ಯ ವಹಿಸಿತ್ತು. ಆದರೆ ಭಾರತವು ದೊಡ್ಡ ಅಡಚಣೆಯನ್ನು ಒಡ್ಡಿದ್ದರಿಂದ ಎಸಿಸಿ ಪಂದ್ಯಾವಳಿಯ ಸ್ವರೂಪವನ್ನು ಬದಲಾಯಿಸಿತು. ಇದರ ಪರಿಣಾಮವಾಗಿ, ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು. ಪಾಕಿಸ್ತಾನವು 4 ಪಂದ್ಯಗಳನ್ನು ಮತ್ತು ಉಳಿದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಗಿತ್ತು.

ಭಾರತವು ಶ್ರೀಲಂಕಾದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಚಾಂಪಿಯನ್ ಕಿರೀಟ ಪಡೆಯಿತು. 2023ರ ಏಷ್ಯಾಕಪ್​ಗೂ ಮುನ್ನ ಪಿಸಿಬಿ- ಬಿಸಿಸಿಐ ನಡುವಿನ ಚಕಮಕಿ ಜೋರಾಗಿ ನಡೆದಿತ್ತು. ಏಷ್ಯಾಕಪ್​ಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸದಿದ್ದರೆ 2023 ರ ಐಸಿಸಿ ವಿಶ್ವ ಕಪ್​ಗಾಗಿ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಪಿಸಿಬಿ ಹೇಳಿತ್ತು. ಆದರೆ, ಹೋಗದಿದ್ದರೆ ತನಗೆ ನಷ್ಟ ಎಂದು ಅರಿತ ಪಾಕ್​ ತಂಡವನ್ನು ಕಳುಹಿತ್ತು.

ಇದೀಗ ಮತ್ತದೇ ರೀತಿಯ ಘರ್ಷಣೆಗಳು ಎರಡೂ ಕ್ರಿಕೆಟ್​ ಮಂಡಳಿಗಳ ನಡುವೆ ನಡೆಯಲಿದೆ. ಆದರೆ ಭಾರತ ಮಾತ್ರ ಭಯೋತ್ಪಾದನೆಯ ತಾಣವಾಗಿರುವ ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸಲು ಸಿದ್ಧವಿಲ್ಲ.

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಎಲ್ಲಿ ನಡೆಯಲಿದೆ?

ವೇಳಾಪಟ್ಟಿಯ ಪ್ರಕಾರ, ಪಾಕಿಸ್ತಾನವು ಪಂದ್ಯಾವಳಿಯ ಆತಿಥ್ಯ ವಹಿಸುತ್ತದೆ. ಆದರೆ ಬಿಸಿಸಿಐ ಮೆನ್ ಇನ್ ಬ್ಲೂಗೆ ಭಾರತ ಸರ್ಕಾರವು ನೆರೆಯ ದೇಶಕ್ಕೆ ಪ್ರಯಾಣಿಸಲು ಅನುಮತಿಸದ ಕಾರಣ ತಟಸ್ಥ ಸ್ಥಳವನ್ನು ಆಯ್ಕೆ ಮಾಡುವುದು ಐಸಿಸಿಗೆ ದೊಡ್ಡ ಕೆಲಸವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ಶ್ರೀಲಂಕಾ ಮತ್ತು ಯುಎಇ ವಿಶ್ವದ ಉನ್ನತ ಕ್ರಿಕೆಟ್ ಸಂಸ್ಥೆಗೆ ಪಂದ್ಯಾವಳಿಯ ಆತಿಥ್ಯ ವಹಿಸಲು ಉತ್ತಮ ಆಯ್ಕೆಯಾಗಿದೆ.

ಈ ಸುದ್ದಿಯನ್ನೂ ಓದಿ : Pakistan Cricket Team : ಪಾಕ್​ ತಂಡದಲ್ಲಿ ಅಲ್ಲೋಲ ಕಲ್ಲೋಲ; ಮುಖ್ಯ ಆಯ್ಕೆದಾರ ಹಕ್​ ರಾಜೀನಾಮೆ

2017ರಲ್ಲಿ ಭಾರತವನ್ನು 180 ರನ್ ಗಳಿಂದ ಮಣಿಸಿದ ಪಾಕಿಸ್ತಾನ ಕೊನೆಯ ಬಾರಿ ಚಾಂಪಿಯನ್ ಆಗಿತ್ತು. 2029ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಭಾರತದಲ್ಲಿ ನಡೆಯಲಿದೆ.

ಅಗ್ರ 7 ತಂಡಗಳಿಗೆ ಅರ್ಹತೆ

ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಅರ್ಹತೆ ಪಡೆಯಬೇಕಾದರೆ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ಟೇಬಲ್​​ನಲ್ಲಿ ಅಗ್ರ ಏಳು ಸ್ಥಾನ ಪಡೆಯಬೇಕು. ಇದನ್ನು ಐಸಿಸಿ ಮಂಡಳಿಯು 2021 ರ ನವೆಂಬರ್​ನಲ್ಲಿ ಅನುಮೋದಿಸಿದೆ. ಪರಿಣಾಮವಾಗಿ ಸೆಮಿಫೈನಲ್ ತಲುಪಲು ವಿಫಲವಾದ ಪ್ರತಿಯೊಂದು ತಂಡಗಳು ಪಂದ್ಯಾವಳಿಯಲ್ಲಿ ತಮ್ಮ ಅವಕಾಶವನ್ನು ಸ್ವಯಂಚಾಲಿತವಾಗಿ ಪಡೆಯಲು ಅಗ್ರ 7 ರೊಳಗೆ ಸ್ಥಾನ ಪಡೆಯುವತ್ತ ಗಮನ ಹರಿಸಲಿದೆ.

Exit mobile version