Site icon Vistara News

IND vs AFG Live: ಭಾರತ ತಂಡಕ್ಕೆ ಅಫಘಾನಿಸ್ತಾನ ವಿರುದ್ಧ 8 ವಿಕೆಟ್ ಭರ್ಜರಿ ವಿಜಯ

INDvAFG

ನವದೆಹಲಿ: ಭಾರತ ಮತ್ತು ಅಫಘಾನಿಸ್ತಾನ(India vs Afghanistan) ತಂಡದ ನಡುವೆ ವಿಶ್ವಕಪ್​ನ 9ನೇ ಪಂದ್ಯ ನಡೆಯುತ್ತಿದ್ದು. ಈ ಪಂದ್ಯದ ಟಾಸ್​ ವಿವರ ಮತ್ತು ಪಂದ್ಯದ ಎಲ್ಲ ಲೈವ್​ ಅಪ್​ಡೇಟ್ಸ್​ ಇಲ್ಲಿದೆ. ಹವಾಮಾನ ವರದಿಯ(Delhi Weather) ಪ್ರಕಾರ ಈ ಪಂದ್ಯಕ್ಕೆ ಯಾವುದೇ ಮಳೆಯ ಆತಂಕವಿಲ್ಲ.

Abhilash B C

ರಶೀದ್​ ಖಾನ್​, ಮೊಹಮ್ಮದ್​ ನಬಿ, ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್ ಇವರೆಲ್ಲ ಆಫ್ಘನ್​ ತಂಡದ ಸ್ಟಾರ್​ ಬ್ಯಾಟರ್​ಗಳು.

Abhilash B C

ಕಳೆದ 2019ರಲ್ಲಿ ಲಂಡನ್​ನಲ್ಲಿ ನಡೆದಿದ್ದ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡ ಆಫ್ಘಾನ್​ ವಿರುದ್ಧ ಪರದಾಡಿ ಗೆಲುವು ಸಾಧಿಸಿತ್ತು. ಅದು ಕೂಡ ಕೇವಲ 11 ರನ್​ ಅಂತರದಲ್ಲಿ ಹೀಗಾಗಿ ಈ ಬಾರಿ ಆಫ್ಘಾನ್ ಸವಾಲನ್ನು ಹಗುರವಾಗಿ ಪರಿಗಣಿಸಬಾರದು. ಕಡೆಗಣಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ

Abhilash B C

ರಾತ್ರಿಯ ವೇಳೆ ಮೋಡ ಕವಿದ ವಾತಾವರಣ ಇದ್ದರೂ ಪಂದ್ಯಕ್ಕೆ ಮಳೆಯ ಸಾಧ್ಯತೆ ಇಲ್ಲ. ಹಗಲಿನಲ್ಲಿ ತಾಪಮಾನವು ಹಗಲಿನಲ್ಲಿ 26 ರಿಂದ 36 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Abhilash B C

ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಸಂಪೂರ್ಣ ಬ್ಯಾಟಿಂಗ್​ ಟ್ರ್ಯಾಕ್​ ಆಗಿದೆ. ಇದು ಬ್ಯಾಟರ್​ಗಳ ಸರ್ಗದ ತಾಣ. ಬೌಲರ್​ಗಳು ಸರಿಯಾಗಿ ದಂಡಿಸಿಕೊಳ್ಳುವುದರಲ್ಲಿ ಅನುಮಾನವೇ ಬೇಡ. ಕಳೆದ ದಕ್ಷಿಣ ಆಫ್ರಿಕಾ ಮತ್ತು ಲಂಕಾ ನಡುವಣ ಪಂದ್ಯದಲ್ಲಿ ಒಟ್ಟು 754 ರನ್​ ದಾಖಲಾಗಿತ್ತು.

Abhilash B C

Exit mobile version