ಚೆನ್ನೈ: ಬಹುನಿರೀಕ್ಷಿತ ಭಾರತ(India vs Australia) ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ವಿಶ್ವಕಪ್ನ ಮೊದಲ ಪಂದ್ಯದ ಲೈವ್ ಅಪ್‌ಡೇಟ್ ಇಲ್ಲಿದೆ.
ನಿರೀಕ್ಷೆಯಂತೆ ಭಾರತ ಈ ಪಂದ್ಯದಲ್ಲಿ ಮೂವರು ಸ್ಪಿನ್ನರ್ಗಳನ್ನು ಆಡಲಿಳಿಸಿದೆ.
ಟಾಸ್ ಸೋತ ರೋಹಿತ್ ಶರ್ಮ ಪಡೆದ ಮೊದಲು ಬೌಲಿಂಗ್ ನಡೆಸಲಿದೆ.
ಭಾರತ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ.
ವಿಶ್ವಕಪ್ ಮುಖಾಮುಖಿ
ಭಾರತ ಮತ್ತು ಆಸೀಸ್ ತಂಡಗಳು 12 ಆವೃತ್ತಿಯ ವಿಶ್ವಕಪ್ ಮಹಾ ಸಮರದಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಒಂದು ಬಾರಿ ಫೈನಲ್ನಲ್ಲಿ ಸೆಣಸಾಡಿವೆ. ಇದು 2003ರ ವಿಶ್ವಕಪ್ ಟೂರ್ನಿ. ಫೈನಲ್ನಲ್ಲಿ ಭಾರತ ಸೋಲು ಕಂಡು 2ನೇ ಬಾರಿ ಕಪ್ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು. 12 ಪಂದ್ಯಗಳ ಪೈಕಿ ಭಾರತ 4 ಪಂದ್ಯಗಳಲ್ಲಿ ಗೆದ್ದರೆ, ಆಸ್ಟ್ರೇಲಿಯಾ 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.
ವೆದರ್‌ಕಾಮ್ ನೀಡಿರುವ ಹವಾಮಾನ ವರದಿಯ ಪ್ರಕಾರ, ಭಾನುವಾರದಂದು ಚೆನ್ನೈನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 27 ಡಿಗ್ರಿ ಸೆಲ್ಸಿಯಸ್ ಇರಲಿದೆ.